ಯುವತಿಯ ಹತ್ಯೆ ಮಾಡಿ, ಯುವಕ ಆತ್ಮ ಹತ್ಯೆ

0

ಸಕಲೇಶಪುರ: ಯುವತಿಯ ಕತ್ತು ಕತ್ತರಿಸಿ ಬರ್ಬರವಾಗಿ ಹತ್ಯೆ ನಡೆಸಿದ ಯುವಕ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನನ ಸಿದ್ದಾಪುರ ಕೋಗರವಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಸುಶ್ಮಿತಾ (20) ಕೊಲೆಯಾದ ಯುವತಿ, ಇದೇ ಗ್ರಾಮದ ಹೇಮಂತ (22) ಕೊಲೆಮಾಡಿದ ಆರೋಪಿ, ಕೊಲೆ ನಡೆಸಿ ನಂತರ ಮನೆ ಹಿಂಭಾಗ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 12.45 ರ ಸುಮಾರಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಇತರ ಹೆಣ್ಣು ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಸುಶ್ಮಿತಾಳನ್ನು ಓಡಿಸಿಕೊಂಡು ಹೋಗಿ ಕತ್ತು ತುಂಡಾಗುವಂತೆ ಕತ್ತಿಯಿಂದ ಬಲವಾಗಿ ಹೊಡೆದಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಕೊಲೆ ಮಾಡಿದ ಯುವಕನನ್ನು ಗ್ರಾಮಸ್ಥರು ಹುಡುಕಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕೆರೆಗೆ ಬಿದ್ದಿದ್ದ ಇವನ್ನು ಯುವತಿಯ ಸಂಬಂಧಿಯೇ ರಕ್ಷಿಸಿದ್ದಾನೆ. ರಕ್ಷಿಸುವಾಗ ಸಹೋದರಿಯನ್ನು ಕೊಲೆ ಮಾಡಿ ಬಂದಿರುವ ಮಾಹಿತಿ ತಿಳಿದಿರಲಿಲ್ಲ ಎನ್ನಲಾಗಿದೆ. ಸಂಜೆ ವರೆಗೂ ಗ್ರಾಮಸ್ಥರ ಕಣ್ಣಿಗೆ ಬೀಳದಂತೆ ತಲೆ ಮರೆಸಿಕೊಂಡಿದ್ದ ಹೇಮಂತ ಸಂಜೆ 4.30ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಪಿಎಸ್‌ಐ ಚಂದ್ರಶೇಖರ್ ಪ್ರಕರಣ ದಾಖಲಿಸಿ ತನಿಕೆ ನಡೆಸುತ್ತಿದ್ದಾರೆ.

Advertisements

ಇಬ್ಬರೂ ಪ್ರೀತಿಸುತ್ತಿದ್ದರು.
ಇವರ ಪ್ರೀತಿಗೆ ಕುಟುಂಬದ ವಿರೋಧ ವಿತ್ತು. ಇಬ್ಬರನ್ನು ಬೇರೆ ಮಾಡಿ ಎರಡು ವರ್ಷಗಳ ಹಿಂದೆ ದೇವರ ಮುಂದೆ ಪ್ರಮಾಣ ಮಾಡಿಸಲಾಗಿತ್ತು. ಆದರೆ ಯುವಕನಿಗೆ ಅದೇನಾಯಿತೂ ಇಂದು ಹತ್ಯೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಬಳಿ ಇದ್ದ ಮೂರು ಮೊಬೈಲ್ ಗಳನ್ನು ಹೊಡೆದು ಹಾಕಿದ್ದಾನೆ.

LEAVE A REPLY

Please enter your comment!
Please enter your name here