ರಸ್ತೆಗೆ ಕಸ ಹಾಕಿದ್ದ ಅಂಗಡಿ ಮುಂದೆ ಕಸ ಸುರಿದು ಎಚ್ಚರಿಕೆ

0

ಹಾಸನ: ರಸ್ತೆ ಬದಿಯಲ್ಲಿ ಹಾಕಿದ್ದ ಕಸವನ್ನು ನಗರಸಭೆ ಪೌರ ಕಾರ್ಮಿಕರು ತೆಗೆದು ಕಸ ಹಾಕಿದ್ದ ಅಂಗಡಿ ಮುಂದೆಯೇ ಸುರಿದು ಮತ್ತೆ ಅ ಸ್ಥಳದಲ್ಲಿ ಕಸ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.

ನಗರಸಭೆ 7ನೇ ವಾರ್ಡ್‌‌ನ ಬಸಟ್ಟಿ ಕೊಪ್ಪಲು ಮುಖ್ಯ ರಸ್ತೆಯಲ್ಲಿ ಬುಧವಾರ ಈ ರೀತಿಯ ಘಟನೆ ನಡೆದಿದೆ. ’ರಸ್ತೆ ಬದಿಯಲ್ಲಿ ಅನೇಕ ದಿನಗಳಿಂದ ಕಸ ಹಾಕಲಾಗುತ್ತಿದೆ. ಎಷ್ಟುವಾರಿ ಎಚ್ಚರಿಕೆ ನೀಡಿದರೂ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಕಸವನ್ನು ಅವರ ಅಂಗಡಿ ಮುಂದೆಯೇ ಸುರಿಯಲಾಗಿದೆ. ಮತ್ತೆ ಅಲ್ಲಿ ಕಸ ಸುರಿಯಬಾರದೆಂದು ಅಲ್ಲಿನ ಅಂಮಗಡಿ ಮಾಲೀಕರು ಹಾಗೂ ನಿವಾಸಿಗಳಿಗೂ ಎಚ್ಚರಿಕೆ ನೀಡಲಾಗಿದೆ. ನಿತ್ಯ ವಾರ್ಡ್‌ಗೆ ಬರುವ ನಗರಸಭೆ ಕಸದ ವಾಹನಕ್ಕೆ ಕಸ ಹಾಕಲಿ’ ಎಂದು ನಗರಸಭೆ ಪೌರಕಾರ್ಮಿಕರು ತಿಳಿಸಿದ್ದಾರೆ.

Advertisements

LEAVE A REPLY

Please enter your comment!
Please enter your name here