ಆರೋಗ್ಯ ಸಮಸ್ಯೆಗಳಿಂದ ಪಾರಾಗಬೇಕೆ? ಈ ತರಕಾರಿಯನ್ನು ಸೇವಿಸಿ ನಿಮ್ಮ ಸಮಸ್ಯೆಗಳಿಗೆ ವಿಧಾನ ಹೇಳಿ

0

ನಿಮಗೆ ಬಹಳ ಆರೋಗ್ಯದ ಸಮಸ್ಯೆ ಇದ್ದರೆ ಕ್ಯಾರೆಟ್ ಸೇವಿಸುವ ಮೂಲಕ ನಿಮ್ಮ ಆರೋಗ್ಯ ಭಾಗ್ಯವನ್ನು ಹೆಚ್ಚಿಸಿಕೊಳ್ಳಬಹುದು.ಕ್ಯಾರೆಟ್ ನ ಪ್ರಯೋಜನಗಳು ಬಹಳಷ್ಟು.

ಇದರಲ್ಲಿರುವ ಪ್ರೋಟೀನ್ ,ವಿಟಮಿನ್ ಎ ,ಕ್ಯಾಲ್ಸಿಯಂ, ಕಬ್ಬಿಣಾಂಶ ,ವಿಟಮಿನ್ ಇ ,ನಾರಿನಂಶ, ವಿಟಮಿನ್ ಕೆ ,ಪೊಟ್ಯಾಶಿಯಂ, ವಿಟಮಿನ್ ಸಿ ,ಮೆಗ್ನೀಸಿಯಂ ,ಮ್ಯಾಂಗನೀಸ್, ಇದನ್ನು ಹೆಚ್ಚು ಪ್ರಯೋಜನಕಾರಿಯಾಗಿ ಮಾಡುತ್ತದೆ.

ಪ್ರಯೋಜನಗಳು:

• ಕ್ಯಾರೆಟ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ದೇಹಕ್ಕೆ ಬಹಳ ಒಳ್ಳೆಯದು:
ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೊಟಿನ್ 1ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು ಇದು ನಮ್ಮ ದೇಹಕ್ಕೆ ಬಹಳ ಮುಖ್ಯ .ಈ ಆ್ಯಂಟಿ ಆಕ್ಸಿಡೆಂಟ್ಸ್ ಕ್ಯಾನ್ಸರ್ ಉಂಟುಮಾಡುವ ಫ್ರೀ ರಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ.

• ಕ್ಯಾರೆಟ್ ನಲ್ಲಿರುವ ಕಡಿಮೆ ಕ್ಯಾಲೋರಿಗಳು ನಮ್ಮ ದೇಹದ ತೂಕವನ್ನು ನಿಯಂತ್ರಿಸುತ್ತದೆ:
ಕ್ಯಾರೆಟ್ ಗಳಲ್ಲಿ ಬರೀ ಇಪ್ಪತ್ತೈದು ಗ್ಯಾಲರಿಗಳೂ ಇವೆ ಹಾಗಾಗಿ ಇದು ಜೀರ್ಣಕ್ರಿಯೆಗಾಗಿ ಬಹಳ ಉತ್ತಮವಾದ ತರಕಾರಿ.

• ಕ್ಯಾರೆಟ್ ನಲ್ಲಿ ಔಷಧೀಯ ಗುಣಗಳಿವೆ:
ಕ್ಯಾರೆಟ್ ಮೊದಲಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು. ಇತ್ತೀಚೆಗೆ ತರಕಾರಿಯಾಗಿ ಬಳಸುತ್ತಿದ್ದೇವೆ. ಕ್ಯಾರೆಟ್ ರಸವನ್ನು ವ್ಯಾಧಿಗಳಿಗೆ ಔಷಧಿಯ ರೂಪದಲ್ಲಿ ಸೇವಿಸಲಾಗುತ್ತದೆ.

• ಕ್ಯಾರೆಟ್ ನಮ್ಮ ಮೂಳೆಗಳನ್ನು ಗಟ್ಟಿ ಮುಟ್ಟಾಗಿ ಮಾಡುತ್ತದೆ.
ಕ್ಯಾರೆಟ್ ನಲ್ಲಿ ಮ್ಯಾಂಗನೀಸ್ ,ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಹಾಗೂ ಮೆಗ್ನೀಸಿಯಂ ಅಂಶವಿದೆ ಹಾಗಾಗಿ ಇದು ಮೂಳೆಗಳನ್ನು ದೃಢಗೊಳಿಸುತ್ತದೆ.ಪ್ರತಿನಿತ್ಯ ಕ್ಯಾರೆಟ್ ಗಳನ್ನು ಸೇವಿಸುವ ಮೂಲಕ ನಾವು ಸದಾ ಶಕ್ತಿವಂತರಾಗಿ ಇರಬಹುದು.

-ತನ್ವಿ. ಬಿ

LEAVE A REPLY

Please enter your comment!
Please enter your name here