ಆಲೂರು ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರ ಜೆಡಿಎಸ್ ಮಡಿಲಿಗೆ

0

ಆಲೂರು : ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವೇದಾ ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ತೌಫೀಕ್ ಅಹಮದ್ ರವರು ಆಯ್ಕೆಯಾಗುವ ಮೂಲಕ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿದಿದ್ದು ಮತ್ತೋಮ್ಮೆ ಆಲೂರು ತಾಲೂಕು ಜೆ.ಡಿ.ಎಸ್ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬಿತಾಯಿತು.
ಆಲೂರು ಪಟ್ಟಣ ಪಂಚಾಯಿತಿಯು ೧೧ ಸದಸ್ಯ ಬಲದಲ್ಲಿ ೫ ಸದಸ್ಯರು ಜೆ.ಡಿ.ಎಸ್ ಪಕ್ಷದಿಂದ ೨ ಸದಸ್ಯರು ಬಿಜೆಪಿ, ೧ ಕಾಂಗ್ರೆಸ್ ಸೇರಿದಂತೆ ೩ ಜನ ಪಕ್ಷೇತರ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಪಕ್ಷೇತರರಾಗಿ ಆಯ್ಕೆಯಾಗಿದ್ದ ತೋಫಿಕ್ ಅಹಮದ್, ಅಬ್ದುಲ್ ಖುದ್ದೂಸ್ ಸೇರಿದಂತೆ ಕಾಂಗ್ರೆಸ್ಸಿನ ತಾಹೇರಾ ಬೇಗಂ ರವರು ಜೆಡಿಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿದರು. ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕರ ಬಲದೊಂದಿಗೆ ಒಟ್ಟು ೧೦ ಸದಸ್ಯ ಬಲದಿಂದ ಬಹುಮತ ಪಡೆದಿದ್ದ ಜೆಡಿಎಸ್ ಯಾವುದೇ ಗೊಂದಲವಿಲ್ಲದೆ ಅಧಿಕಾರ ಹಿಡಿಯಿತು.

ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್ ಕೆ ಕುಮಾರಸ್ವಾಮಿ, ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆಗೆ ಸಹಕರಿಸಿದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ ಜೆಡಿಎಸ್ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯರುಗಳು ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ವಿಜಯೋತ್ಸವವನ್ನು ಆಚರಿಸಿದರು.

LEAVE A REPLY

Please enter your comment!
Please enter your name here