ಮಂಜೂರಾತಿ ರದ್ದುಗೊಳಿಸದೇ ಸಕ್ರಮಗೊಳಿಸಿ ಕೃಷಿ ಕುಟುಂಬ ರಕ್ಷಣೆಗಾಗಿ
ಡಿಸಿ ಮೊರೆ ಹೋದ ಸಂತ್ರಸ್ಥರು

0

ಹಾಸನ: ಅರ್ಹ ಹೆಚ್.ಆರ್.ಪಿ. ಮುಳುಗಡೆ ಸಂತ್ರಸ್ಥರಿಗೆ ಆಗಿರುವ ಮಂಜೂರಾತಿಯನ್ನು ರದ್ದುಗೊಳಿಸದೇ ಸಕ್ರಮಗೊಳಿಸಿಕೊಟ್ಟು ಕೃಷಿ ಕುಟುಂಬವನ್ನು ರಕ್ಷಣೆ ಮಾಡಲು ಆಗ್ರಹಿಸಿ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆ ಮುಳುಗಡೆಯ ನೊಂದ ಸಂತ್ರಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಹಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ಥರಾಗಿದ್ದು, ಕೃಷಿಯನ್ನೇ ಅವಲಂಭಿಸಿದ್ದ ನಮ್ಮ ಕೃಷಿ ಭೂಮಿಯನ್ನು ಜಲಾಶಯ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದರಿಂದ ಕಂಗಾಲಾಗಿದ್ದ ನಮ್ಮ ಕುಟುಂಬಕ್ಕೆ ಸರ್ಕಾರದ ಬಡ ಜಮೀನು ಮಂಜೂರಾತಿಯನ್ನು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ನಾವುಗಳು ಅಗತ್ಯ ದಾಖಲಾತಿಗಳನ್ನು ತಮ್ಮ ಕಛೇರಿಗೆ ಸಲ್ಲಿಸಿ, ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ವರದಿ, ಸ್ಕೆಚ್ ಇತರೆ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು, ಅಧಿಕೃತ ಜ್ಞಾಪನಪತ್ರದ ಆಧಾರದ ಮೇರೆಗೆ ಸಂಬಂಧಪಟ್ಟ ಕಂದಾಯ ಇಲಾಖಾ ಕಛೇರಿಗೆ ಅರ್ಜಿ ಸಲ್ಲಿಸಲಾಗಿದೆ.

ಮುಳುಗಡೆ ಸಂತ್ರಸ್ಥರಿಗಾಗಿ ಮೀಸಲಿರಿಸಿದ ಜಮೀನನ್ನು ನಮ್ಮಗಳ ಹೆಸರಿಗೆ ಮಂಜೂರಾತಿ ಪಡೆದಿದ್ದು, ಅದರಂತೆ ಈಗಾಗಲೇ ಕೆಲವರಿಗೆ ಮಂಜೂರಿ ಪತ್ರ ದೊರೆತಿರುತ್ತದೆ ಹಾಗೂ ಕೆಲವರಿಗೆ ಪಹಣಿ ಸಹ ದೊರಕಿದ್ದು, ಇನ್ನೂ ಕೆಲವರಿಗೆ ಮಂಜೂರಿ ಹಂತದಲ್ಲಿರುತ್ತದೆ. ಮುಳುಗಡೆ ಸಂತ್ರಸ್ಥ ಕುಟುಂಬಕ್ಕೆ ಆಸರೆಯಾದ ಬದಲಿ ಜಮೀನು ಮಂಜೂರಾತಿ ಆದೇಶದಿಂದ, ಕೃಷಿ ಕುಟುಂಬಕ್ಕೆ ಪುನರ್ಜನ್ಮ ಬಂದಂತಾಗಿದ್ದು, ಮುಳುಗಡೆ ಸಂತ್ರಸ್ಥರಿಗಾಗಿ ಕಾಯ್ದಿರಿಸಿದ ಜಮೀನನ್ನು ನಾವುಗಳು ಈಗಾಗಲೇ ಸ್ವಾಧೀನ ಹೊಂದಿಕೊಂಡು ಅನುಭವಿಸಿಕೊಂಡು ಬರಲಾಗಿದೆ ಎಂದರು. ಆದರೆ ಕಂದಾಯ ಇಲಾಖೆಯ ಕೆಲವು ಕಿಡಿಗೇಡಿ ಅಧಿಕಾರಿಗಳ ಹಗರಣದಿಂದಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಈ ಹಿಂದೆ ನಮ್ಮಗಳಗೆ ಮಾಡಿದ್ದ ಮಂಜೂರಾತಿಯನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ನೈಜ ಮಂಜೂರಿದಾರರಾದ ನಮ್ಮಗಳಿಗೆ ಭಾರಿ ಆಘಾತವಾಗಿದ್ದು, ಪುನಃ ನಮ್ಮ ಕುಟುಂಬವು ಸಂಪೂರ್ಣವಾಗಿ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಮಂಜೂರಾತಿಯಲ್ಲಿ ಹಗರಣ ನಡೆಸಿದ್ದಲ್ಲಿ, ಅಂತಹ ಮಂಜೂರಾತಿಯನ್ನು ನಿರ್ಧಾಕ್ಷಿಣ್ಯವಾಗಿ ರದ್ದುಗೊಳಿಸಲು ನಮ್ಮಗಳ ಯಾವುದೇ ರೀತಿಯ ತಕರಾರು ಇರುವುದಿಲ್ಲ. ಮಂಜೂರಾತಿಗೆ ಅರ್ಹರಾಗಿರುವ ನಮ್ಮಗಳ ಮಂಜೂರಾತಿಯನ್ನೂ ಸಹ ರದ್ದುಗೊಳಿಸಲು ಪ್ರಯತ್ನಿಸುತ್ತಿರುವ ಕ್ರಮವು ಕಾನೂನು ಬಾಹಿರವಾಗಿದ್ದು, ಇದಕ್ಕೆ ನಮ್ಮಗಳ ಸಂಪೂರ್ಣ ವಿರೋಧವಿರುತ್ತದೆ. ತಮ್ಮ ಆದೇಶದಂತೆ ನಾವುಗಳು ಪಡೆದಿರುವ ಅಧಿಕೃತ ಜ್ಞಾಪನವನ್ನು ಅಧಿಕೃತವೆಂದು ಪರಿಗಣಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳ ಸೂಚನೆಯಂತೆ ಈಗಾಗಲೇ ಮಂಜೂರಾತಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ತಮ್ಮ ಕಛೇರಿಗೆ ನಿಗಧಿತ ಸಮಯದಲ್ಲಿ ಸಲ್ಲಿಸಲಾಗಿದೆ. ನೈಜ ಸಂತ್ರಸ್ಥರ ಮಂಜೂರಾತಿಯನ್ನೂ ಸಹ ರದ್ದುಪಡಿಸಲಾಗಿದೆ ಎಂದು ನೋಟಿಸ್ ನೀಡಿರುವುದು ಖಂಡನಾರ್ಹವಾಗಿರುತ್ತದೆಮದು ಆಕ್ರೋಶವ್ಯಕ್ತಪಡಿಸಿದರು.

ಒಂದು ವೇಳೆ ನಮ್ಮಗಳಿಗೆ ಮಂಜೂರಾತಿ ಅಂಜೂರಾತಿ ಪಡೆದಿರುವ ಸ್ಥಳದಲ್ಲಿ ಮರಗಳು ಬೆಳೆದಿದ್ದಲ್ಲಿ ನಾವುಗಳು ಅರಣ್ಯ ಇಲಾಖೆಯು ವಿಧಿಸುವ ಮರಮಾಯನ್ನು ಪಾವತಿಸಲು ಸಿದ್ಧರಿರುತ್ತೇವೆ. ಅಂತಹ ಸಮಯದಲ್ಲಿ ನೀವು ಸಂಬಂಧಪಟ್ಟ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿ, ಮರಮಾಲ್ಕಿ ನಿಗಧಿಪಡಿಸಿಕೊಡುವಂತೆಯೂ ಅಥವಾ ಮರಗಳಲ್ಲದಿದ್ದಲ್ಲಿ, ಎನ್.ಓ.ಸಿ. ನೀಡುವಂತೆ ನಿರ್ದೇಶನ ನೀಡುವುದು ಅಗತ್ಯವಾಗಿದೆ ಎಂದರು. ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿಗಳ ನಿರ್ದೇಶನದಂತೆ ನಿಗಧಿತ ಸಮಯದೊಳಗೆ ನಾವುಗಳು ಸಲ್ಲಿಸಿರುವ ನಮ್ಮ ನೈಜ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಕಾನೂನು ಬದ್ಧವಾಗಿರುವ ನಮ್ಮ ಮಂಜೂರಾತಿಯನ್ನು ರದ್ದುಪಡಿಸದೆ ನಮ್ಮಗಳ ಮಂಜೂರಾತಿಯನ್ನು ಸಕ್ರಮಗೊಳಿಸಿಕೊಟ್ಟು, ನೈಜ ಕೃಷಿ ಕುಟುಂಬಗಳನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದರು.
ಇದೆ ವೇಳೆ ಸಂತ್ರಸ್ಥರಾದ ಎಂ.ಜೆ. ಚಂದ್ರೇಗೌಡ, ಯಶೋಧಮ್ಮ, ಕೃಷ್ಣೇಗೌಡ, ಧರ್ಮಯ್ಯ, ಈರಪ್ಪ, ಸೋಮಶೇಖರ್ ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here