ವೀಳ್ಯದೆಲೆ ಏಕೆ ಉಪಯೋಗಕಾರಿ?

0

ವೀಳ್ಯದೆಲೆ ನಮ್ಮ ಆಹಾರದಲ್ಲಿ ಮಾತ್ರವಲ್ಲ ನಮ್ಮ ದೇಶದ ಸಂಪ್ರದಾಯದಲ್ಲೂ ಮುಖ್ಯ ಪಾತ್ರ ವಹಿಸುತ್ತೆ.. ತಾಂಬೂಲ ಕೊಡಬೇಕಾದರೆ ವೀಳೆಯದೆಲೆ ಖಚಿತವಾಗಿ ಇರಬೇಕು. ಅಲ್ಲವೇ?
ಭಾರತೀಯ ಆಯುರ್ವೇದ ದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಈ ಎಲೆಯನ್ನು ಬಳಸುತ್ತಾರೆ. ಇದಕ್ಕೆ ಬಹಳ ಔಷಧೀಯ ಗುಣಗಳಿವೆ ಇದು ತಲೆನೋವು ತುರಿಕೆ ಗಾಯ ಮಲಬದ್ಧತೆ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ಎಲೆಯಲ್ಲಿ ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿದೆ ಹಾಗಾಗಿ ಇದು ನಮಗೆ ಹಲವಾರು ಉಪಯೋಗಗಳನ್ನು ನೀಡುತ್ತದೆ.
ಆದರೂ ವೀಳ್ಯದೆಲೆ ಎಂದು ಕೇಳಿದಾಗ ಹಲವರಿಗೆ ಪಾನ್ ಖಂಡಿತವಾಗಿ ನೆನಪಾಗಿರುತ್ತದೆ.

ವೀಳ್ಯದೆಲೆಯ ಪ್ರಯೋಜನಗಳು:

• ದಂತ ಆರೋಗ್ಯಕ್ಕೆ ಬಹಳ ಒಳ್ಳೆಯದು:
ವೀಳ್ಯದೆಲೆ ವಸಡುಗಳನ್ನು ಕಟ್ಟಿ ಮಾಡುತ್ತದೆ ಒಸಡುಗಳಲ್ಲಿ ಒಸರುತ್ತಿರುವ ರಕ್ತವನ್ನು ತಡೆಯುವ ಶಕ್ತಿ ವೀಳ್ಯದೆಲೆಗಿದೆ. ಹಾಗಾಗಿ ವೀಳೆದೆಲೆ ನಿಮ್ಮ ದಂತದ ಆರೋಗ್ಯಕ್ಕೆ ಬಹಳ ಉಪಯೋಗವಾಗುತ್ತದೆ ನಿಮ್ಮ ಒಸಡುಗಳು ಕಟ್ಟಿದ್ದರೆ ನಿಮ್ಮ ಹಲ್ಲು ಕೂಡ ಗಟ್ಟಿಯಾಗಿರುತ್ತದೆ.

• ಕ್ಯಾನ್ಸರ್ ರೋಗವನ್ನು ತಡೆಯುತ್ತದೆ:
ವೀಳ್ಯದೆಲೆ ಯಲ್ಲಿರುವ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ಕಾರಕ ಫ್ರೀ ರಾಡಿಕಲ್ಸ್ ನಿಮ್ಮ ದೇಹದಿಂದ ತಡೆಗಟ್ಟಿ ನಿಮ್ಮನ್ನು ಕ್ಯಾನ್ಸರ್ ರೋಗದಿಂದ ಪಾರುಮಾಡುತ್ತದೆ. ಆದರೆ ಇದನ್ನು ತಂಬಾಕಿನ ರೀತಿ ಸೇವಿಸಬಾರದು.

• ಕೆಮ್ಮಿನಿಂದ ಮುಕ್ತಿ ನೀಡುತ್ತದೆ:
ಈ ಕೋವಿಡ್ ಸಂಧರ್ಭದಲ್ಲಿ ನಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ವೀಳ್ಯದೆಲೆ ಸೇವಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಹಾಗೂ ಉಸಿರಾಟದ ತೊಂದರೆಗಳನ್ನು ಪಾರುಮಾಡುತ್ತದೆ.

ವೀಳ್ಯದೆಲೆಯನ್ನು ಪ್ರತಿದಿನ ಸೇವಿಸಿ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಿ.

ತನ್ವಿ. ಬಿ

LEAVE A REPLY

Please enter your comment!
Please enter your name here