ಹಾಸನದ ಡೈರಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ 200 ಕೋಟಿ ವೆಚ್ಚದಲ್ಲಿ 14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ

0

ಹಾಸನದ ಡೈರಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ ಮೈಸೂರು ಮಿನರಲ್ಸ್ ಸ್ವಾಮ್ಯದ 14 ಎಕರೆ ಜಾಗದಲ್ಲಿ ಐಟಿ ಪಾರ್ಕ್ ಹಾಗೂ ವಾಣಿಜ್ಯ ಉದ್ದೇಶಕ್ಕೆ ಮಳಿಗೆಗಳನ್ನು ಸ್ಥಾಪಿಸಲಾಗುವುದು” ಎಂದು ಕರ್ನಾಟಕ ರಾಜ್ಯ ಖನಿಜ ನಿಗಮದ ಅದ್ಯಕ್ಷ ಲಿಂಗಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರದೇಶದಲ್ಲಿ ಗ್ರಾನೈಟ್ ಉದ್ಯಮವೂ ಸ್ಥಗಿತವಾಗಿದ್ದು ವಾಣಿಜ್ಯ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.

ಈ ಯೋಜನೆಗೆ ಸುಮಾರು 200 ಕೋಟಿ ವೆಚ್ಚವಾಗಲಿದ್ದು ಮೊದಲ ಹಂತವಾಗಿ 60 ಕೋಟಿ ಬಿಡುಗಡೆಗೊಳಿಸಲಾಗುವುದು ಮುಂದಿನ ಕೆಲ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ವಾಗಲಿದೆ ಎಂದರು.ಇದರಿಂದ ಸ್ಥಳೀಯವಾಗಿ ಐಟಿಐ, ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು.

ವಿಶೇಷ ಅರ್ಥಿಕ ವಲಯದಲ್ಲಿ ಕೈಗಾರಿಕೆ ಸ್ಥಾಪನೆ
ಗ್ರಾನೈಟ್ ಉದ್ಯಮ ಸ್ಥಗಿತವಾಗಿದ್ದು ವಹಿವಾಟು ಸ್ಥಗಿತಗೊಂಡಿದ್ದರಿಂದ ಉಳಿದ 14 ಸಾವಿರ ಚ.ಮೀ ಗ್ರಾನೈಟ್ ಅನ್ನು ಹರಾಜು ಹಾಕಲಾಗುವುದು ಹಾಗೂ 280 ಎಕರೆ ವಿಶೇಷ ಅರ್ಥಿಕ ವಲಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಎಂದು ಕರ್ನಾಟಕ ರಾಜ್ಯ ಖನಿಜ ನಿಗಮದ ಅದ್ಯಕ್ಷ ಲಿಂಗಮೂರ್ತಿ

ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ
ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ ನಗರದ ಹೊರವಲಯದಲ್ಲಿ ಮೈಸೂರು ಮಿನರಲ್ಸ್ ನ ಜಾಗದಲ್ಲಿ ಐ.ಟಿ ಪಾರ್ಕ್ ಮಾಡಲಾಗುವುದು.ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಆಧ್ಯತೆ ನೀಡಲಾಗುವುದು .ಹೊಸದಾಗಿ ಪ್ರಾರಂಭಿಸುವ ಕಂಪನಿಗಳಿಗೆ ಈ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಜಾಗ ಒದಗಿಸಲಾಗುವುದು ಎಂದರು.

ಎಸ್.ಇ.ಜೆಡ್ ಯೋಜನೆಯಡಿಯಲ್ಲಿರುವ 280ಎಕರೆ
ಎಸ್.ಇ.ಜೆಡ್ ಯೋಜನೆಯಡಿಯಲ್ಲಿರುವ 280ಎಕರೆ ಜಮೀನನ್ನು ಹಿಂಪಡೆದು ಇತರ ಕೈಕಾರಿಕೆಗಳ ಸ್ಥಾಪನೆಗೆ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಕೈಗಾರಿಕಾ ಸಚಿವರ ನೇತೃತ್ವದಲ್ಲಿ ನಿಯಮಗಳ ರಚನೆಯಾಗುತ್ತಿದೆ .ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ ಎಂದರು.

ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಜಾಗ ಮಂಜೂರು
ಕೈಗಾರಿಕಾ ಬಡಾವಣೆಯಲ್ಲಿ ಜಾಗ ಪಡೆದು ಹಲವು ವರ್ಷಗಳಾದರೂ ಯಾವುದೇ ಚಟುವಟಿಕೆಗಳನ್ನು ನಡೆಸದೇ ಇರುವವರನ್ನು ಗುರುತಿಸಿ ನೋಟೀಸ್ ನೀಡಿ ಜಮೀನು ಹಿಂಪಡೆದು ನಿಜವಾಗಿಯೂ ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಮಂಜೂರು ಮಾಡಲಾಗುವುದು ಎಂದು ಪ್ರೀತಂ ಗೌಡ ಹೇಳಿದರು.

ಅಲ್ಲದೆ ರಾಜ್ಯ ಖನಿಜ ನಿಗಮದ ವತಿಯಿಂದ 25 ಲಕ್ಷ ನೀಡಲಾಗುತ್ತಿದ್ದು ಇತರ ದಾನಿಗಳ ಹಣವನ್ನೂ ಬಳಸಿ ದೇವಾಲಯವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here