ಬಾದಾಮಿ ಎಣ್ಣೆಯ ಉಪಯೋಗಗಳು ತಿಳಿದಿದ್ದೀಯಾ?

0

ಹಲವರಿಗೆ ಪ್ರತಿದಿನ ಬಾದಾಮಿ ತಿನ್ನುವ ಅಭ್ಯಾಸ ವಿರಬಹುದು ಆದರೆ ನಿಮಗೆ ಬಾದಾಮಿ ಎಣ್ಣೆಯ ಉಪಯೋಗಗಳು ತಿಳಿದಿದ್ದೀಯಾ?

     ಹೆಣ್ಣುಮಕ್ಕಳಿಗೆ ಸೌಂದರ್ಯ , ಅವರ ಕೂದಲು ಮತ್ತು ತ್ವಚೆಯ ಕಾಳಜಿ ಮಾಡುವುದು  ಬಹಳ ಪ್ರಿಯವಾದ ಕೆಲಸ. ಅನೇಕ ಪದಾರ್ಥಗಳನ್ನು ತಮ್ಮ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯವನ್ನು ಕಾಪಾಡಲು ಬಳಸುತ್ತಾರೆ.  ಬಾದಾಮಿ ಎಣ್ಣೆ ಬಗ್ಗೆ  ಹಲವಾರು ಬಾರಿ ಕೇಳಿರುತ್ತೀರಾ ಆದರೆ ಈ ಬಾದಾಮಿ ಎಣ್ಣೆಯ ಉಪಯೋಗಗಳು ನಿಮಗೆ ತಿಳಿದಿದ್ದೀಯಾ?

ಬಾದಾಮಿ ಎಣ್ಣೆ ಬಳಸುವುದರಿಂದ ಒಳ್ಳೆ ಫಲಿತಾಂಶ ದೊರಕುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಾದಾಮಿ ಎಣ್ಣೆ ಬಳಸುವುದರಿಂದ ದೊರಕುವ ಪ್ರಯೋಜನಗಳು:

ಒಣ ತ್ವಚೆ ನಿವಾರಿಸಲು ಸಹಾಯಕಾರಿ:
                    ಬಾದಾಮಿ ಎಣ್ಣೆಯು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ ಆದ್ದರಿಂದ ಒಣ ತ್ವಚೆ ಇರುವವರು ಇದನ್ನು ಬಳಸಿದರೆ ಇದು ಟೋನರ್ ನಂತೆ ತ್ವಚೆಯನ್ನು ಕೋಮಲವಾಗಿ ಮಾಡುತ್ತದೆ. ಹಾಗಾಗಿ ಒಣ ತ್ವಚೆ ಸಮಸ್ಯೆಯಿಂದ ಆಗುವ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮೊಡವೆಗಳ ಸಮಸ್ಯೆಯಿಂದ ನಿವಾರಣೆ:
              ತಾರುಣ್ಯ ವಯಸ್ಸಿನಲ್ಲಿ ಮೊಡವೆಗಳ ಸಮಸ್ಯೆ ಹಲವರಿಗೆ ಇರುತ್ತದೆ. ಬಾದಾಮಿ ಎಣ್ಣೆಯನ್ನು ನಿತ್ಯವೂ ಬಳಸುವುದರಿಂದ ಇದು ಪಿಎಚ್ ನಿಯಂತ್ರಣವನ್ನು ಮಾಡುವ ಮೂಲಕ ಮೊಡವೆಗಳನ್ನು ತಡೆಗಟ್ಟಲು ಕೆಲಸ ಮಾಡುತ್ತದೆ.

ಮೇಕಪ್ ರಿಮೂವರ್ ಖರೀದಿಸಬೇಡಿ..
                    ಈಗಿನ ಕಾಲದಲ್ಲಿ ಎಲ್ಲರೂ ಮೇಕ ಬಳಸುವುದು ಸಹಜವಾಗಿದೆ. ಮೇಕಪ್ ಕಲ್ಲೆದೆ ಮೇಕಪ್ ರಿಮೂವರ್ ಗೂ ಕೂಡ ಹೆಚ್ಚಿನ ಹಣವನ್ನು ಬೆಳೆಸುತ್ತಾರೆ. ಬಾದಾಮಿ ಎಣ್ಣೆಯಲ್ಲಿ ಹತ್ತಿಯನ್ನು ಮುಳುಗಿಸಿ ಮುಖಕ್ಕೆ ಹಚ್ಚಿಕೊಂಡರೆ ಇದು ನಿಮ್ಮ ಮುಖಕ್ಕೆ ಅಂಟಿಕೊಂಡಿರುವ ಮೇಕಪ್ ಅನ್ನು ಸಲೀಸಾಗಿ ತೆಗೆದು ನಿಮ್ಮ ತ್ವಚೆಗೆ ಮಾಯಿಶ್ಚರೈಸರ್ ಅಂತೆ ಕೆಲಸ ಮಾಡುತ್ತದೆ. ನೈಸರ್ಗಿಕವಾದುದ್ದರಿಂದ ನಿಮ್ಮ ತ್ವಚೆಗೆ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ.

ಒಣ ಕೂದಲಿಗೆ ಉಪಯೋಗಕಾರಿ:
               ಹಲವರು ಒಣ ಕೂದಲಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿರುತ್ತಾರೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ರೇಷ್ಮೆಯಂತಹ ಕೂದಲು ಪಡಿ ಪಡೆಯಬಹುದು. ಇದು ಕೂದಲಿಗೆ ಹೊಳಪು ನೀಡುವುದಕ್ಕೂ ಬಹಳ ಸಹಾಯಕಾರಿ. ವಾರಕ್ಕೊಮ್ಮೆಯಾದರೂ ಇದನ್ನು ಬಳಸಿದರೆ ನಿಮಗೆ ಉತ್ತಮ ಫಲಿತಾಂಶಗಳು ದೊರಕುತ್ತದೆ.

ಕಣ್ಣುಗಳ ಸುತ್ತಲೂ ಕಪ್ಪಗಿನ ವರ್ತುಲವನ್ನು ನಿವಾರಿಸುತ್ತದೆ:
               ನಿದ್ದೆ ಏರುಪೇರಾದಾಗ ಕಣ್ಣುಗಳ ಸುತ್ತಲೂ ಕಪ್ಪು ಗಿನ ವರ್ತುಲವನ್ನು ಕಾಣಬಹುದು. ಪ್ರತಿದಿನ ಕಣ್ಣಿನ ಸುತ್ತಲೂ ಇದನ್ನು ಬಳಸಿದರೆ ಈ ಸಮಸ್ಯೆಯಿಂದ ನಿಮಗೆ ಪರಿಹಾರ ದೊರಕುತ್ತದೆ.

           ಬಾದಾಮಿ ಎಣ್ಣೆಯನ್ನು ನೀವು ರೋಸ್ ವಾಟರ್ ಅಥವಾ ನಿಂಬೂ ರಸದೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು. ಈ ಬಾದಾಮಿ ಎಣ್ಣೆ ಬರೀ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡು ಮಕ್ಕಳಿಗೂ ಫಲಿತಾಂಶ ನೀಡುತ್ತದೆ. ತ್ವಚಯ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಇದನ್ನು ಬಳಸಬಹುದು. ಈ ಎಣ್ಣೆಯನ್ನು ಬಳಸಿ ನಿಮಗಾದ ಉಪಯೋಗಗಳನ್ನು ಕಮೆಂಟ್ ಮಾಡಲು ಮರೆಯಬೇಡಿ.
                                          – ತನ್ವಿ. ಬಿ

LEAVE A REPLY

Please enter your comment!
Please enter your name here