NEWS FLASH !/ಕೊರೋನಾ 2.O : ಬ್ರಿಟನ್ ವೈರಸ್ ಕಂಟಕ : ಬ್ರಿಟನ್ ನಿಂದ ಒಟ್ಟು 341 ಮಂದಿ ರಾಜ್ಯಕ್ಕೆ ಆಗಮನ , ಬ್ರಿಟನ್ ನಿಂದ ಬಂದ ಹಾಸನದ ಇಬ್ಬರಿಗೆ RTPCR ಟೆಸ್ಟಿಂಗ್ !! ಮುಂದಿನ 14 ದಿನ ಕ್ವಾರಂಟೈನ್ ಗೆ !!

0

ಕೊವಿಡ್- 19 ಸೋಂಕು ಹೊಸ ರೂಪ ಪಡೆದಿರುವ ಆತಂಕದ ಬೆನ್ನಲ್ಲೇ ಇಂಗ್ಲೆಂಡ್‍ನಿಂದ ಜಿಲ್ಲೆಗೆ ಆಗಮಿಸಿರುವ ಇಬ್ಬರನ್ನು ಗುರುತಿಸಿ ಹೋಂ ಕ್ವಾರಂಟೈನ್‍ನಲ್ಲಿ ಇರಿಸಿಲಾಗಿದೆ.
ಮನೆಗಳಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿರಿಸಿ ಗಂಟಲು ಮತ್ತು ಮೂಗಿನ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದು, ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಎಲ್ಲಾ ಅಗತ್ಯ ಮುಂಜಾಗ್ರತೆಗಳನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.
ಇಂದು ಜಿಲ್ಲೆಗೆ ಆಗಮಿಸಿದವರಲ್ಲಿ ಒಬ್ಬರು 29 ವರ್ಷದ ವಿಜ್ಞಾನಿಯಾಗಿದ್ದು ()ಏಕ್ಸ್ಟರ್ ಪ್ರದೇಶದಿಂದ ಹಾಸನ ತಾಲ್ಲೂಕಿಗೆ ಆಗಮಿಸಿದ್ದಾರೆ. ಮತ್ತೊಬ್ಬರು 48 ವರ್ಷದ ಉದ್ಯೋಗಿ ಲಂಡನ್‍ನಿಂದ ಅರಕಲಗೂಡು ತಾಲ್ಲೂಕಿಗೆ ಆಗಮಿಸಿದ್ದಾರೆ. ಇಬ್ಬರಿಗೂ ಯಾವುದೇ ರೋಗ ಲಕ್ಣಣ ಇಲ್ಲ .ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈ ಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here