ತಪಾಸಣೆಗೆ ಬಂದಾಗಲೇ ಅಥವಾ ಸೊಂಕು ಖಚಿತಗೊಂಡ ಮೂರು ಗಂಟೆ ಒಳಗೆ ಮಾತ್ರೆ : ತಲುಪಿಸಿ ಪ್ರತಿ ತಾಲ್ಲೂಕಿಗೆ ಸಾವಿರ ಔಷದಿ ಕಿಟ್ ವಿತರಿಸಲು ಸಚಿವರು ಸೂಚನೆ

0

ಹಾಸನ ಮೇ.16 : ಜಿಲ್ಲೆಯ ಒಂದು ಪ್ರತಿ ತಾಲ್ಲೂಕುಗಳಿಗೂ ಮೊದಲ ಹಂತದಲ್ಲಿ ಕೋವಿಡ್‍ಗೆ ನೀಡಲಾಗುವ ಮಾತ್ರೆಗಳ ಸಾವಿರ ಕಿಟ್‍ಗಳನ್ನು ಪೂರೈಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ

ಅರಕಲಗೂಡು ತಾಲ್ಲೂಕು ಅಸ್ಪತ್ರೆ ಗೆ ಭೇಟಿ ನೀಡಿ ವ್ಯವ್ಸ್ಥೆಗಳನ್ನು ಪರೀಶಿಲಿಸಿ ನಂತರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕೊವಿಡ್ 19 ನಿಯಂತ್ರಣ ಕುರಿತು ಸಭೆ ನಡೆಸಿದ ಅವರು ಆರಂಭಿಕ ಹಂತದಲ್ಲಿ ಯೇ ಸೋಂಕಿತರಿಗೆ ಔಷಧಿ, ಚಿಕಿತ್ಸೆ ಒದಗಿಸಿದಲ್ಲಿ ರೋಗ ಉಲ್ಬಣವಾಗುವುದು ಹಾಗೂ ಸಾವಿನ ಪ್ರಮಾಣ ಬಹುತೇಕ ತಪ್ಪಿಸಬಹುದು .ಹಾಗಾಗಿ ತಪಸಣೆಗೆ ಬಂದಾಗಲೇ ಅಥವಾ ಸೊಂಕು ಖಚಿತಗೊಂಡ ಮೂರು ಗಂಟೆ ಒಳಗೆ ಮಾತ್ರೆ ತಲುಪಿಸಿ ಎಂದು ಸಚಿವರು ನಿರ್ದೇಶನ ನೀಡಿದರು

ಅರಕಲಗೂಡು ತಾಲ್ಲೂಕಿನ ವೈದ್ಯಕೀಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಹಂತಹಂತವಾಗಿ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕೋವಿಡ್ ಎರಡನೆ ಅಲೆ ತೀವ್ರ ಸ್ವರೂಪದ ಸಮಸ್ಯೆ ತಂದಿದೆ ಸೋಂಕು,ಸಾವಿನ ಪ್ರಮಾಣ ಹೆಚ್ಚಿದೆ ಇದನ್ನು ತಡೆಯಲು ಸೌಲಭ್ಯ ವೃದ್ದಿ ಜೊತೆಗೆ ಕಠಿಣ ಕ್ರಮಗಳನ್ನೂ ಕೈಗೊಳ್ಳ ಬೇಕಿದೆ ಎಂದು ತಿಳಿಸಿದರು.

ಜಿಲ್ಲೆಗೆ ಕೊಟಾದಂತೆ ಆಮ್ಮಜನಕ ಪೂರೈಕೆ ಪ್ರಾರಂಭವಾದ ತಕ್ಷಣ ಕೊಣನೂರಿಗೆ ಮೊದಲ ಆದ್ಯತೆಮೇರೆಗೆ ಆಮ್ಮಜನಕ ಪೂರೈಸಲಾಗುವುದು,ತಾಲ್ಲೂಕಿನಲ್ಲಿ ಖಾಲಿ ರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಶೀಘ್ರವಾಗಿ ನೇಮಕ ಮಾಡಲಾಗುವುದು ಎಂದು ಸಚಿವರು ಹೇಳಿದರು . ಕೈ ಮೀರುವ ಮೊದಲೆ ಎಚ್ಚರಿಕೆ ವಹಿಸಿ ಎಲ್ಲಾ ಅಧಿಕಾರಿ ಸಿಬ್ಬಂದಿ ತಂಡವಾಗಿ ಕೆಲಸಮಾಡಿ, ಸಾರ್ವಜನಿಕರಿಗೆ ಮನವೊಲಿಸಿ,ಧೈರ್ಯ ತುಂಬಿ ಎಂದರು. ತಾಲ್ಲೂಕಿನಲ್ಲಿ ಇರುವ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾಡಿ ,ಗ್ರಾಮ ಪಂಚಾಯಿತಿ ಪಿ.ಡಿ.ಒ ಗಳು ಗ್ರಾಮವಾರು ಮನೆಯಲ್ಲಿ ಸೌಲಭ್ಯ ಇಲ್ಲದ ಸೋಂಕಿತರನ್ನು ಪಟ್ಟಿಮಾಡಿ ಇಲ್ಲಿಗೆ ವರ್ಗಾವಣೆ ಮಾಡಬೇಕು. ಸಾರ್ವಜನಿಕವಾಗಿ ತಿರುಗುವ ಸೋಂಕಿತರ ವಿರುದ್ದ ಪ್ರಕರಣ ದಾಖಲಿಸಿ .ಅಗತ್ಯ ಬಿದ್ದರೆ ಪೋಲಿಸ್ ನೆರವು ಪಡೆಯಿರಿ ಎಂದು ಸೂಚಿಸಿದರು.

ಕೋವಿಡ್ ಕೇರ್ ಕೇಂದ್ರದಲ್ಲಿ ಉತ್ತಮ ಉಟೋಪಚಾರ ,ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಿ ಇದರಿಂದ ಮುಂದಿನ 15 ದಿನಗಳಲ್ಲಿ ಸೊಂಕು ಹರಡುವಿಕೆ ಕಡಿಮೆಯಾಗಲಿದೆ ಎಂದು ತಿಳಿಸಿದರು. ಅರಕಲಗೂಡು ತಾಲ್ಲೂಕಿಗೆ ಪೋರ್ಟೆಬಲ್ ಆಕ್ಸಿಜನ್ ಜನರೇಟರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿ. ಜಿಲ್ಲೆಯಲ್ಲಿ ಪಡಿತರ ವಿತರಣೆ ವೇಳೆ ಹಾಗೂ ಡೈರಿ ಗಳಿಗೆ ಹಾಲು ಹಾಕುವಾಗ ಸಾಮಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾ ವಹಿಸಿ ಎಂದರು.

ಶಾಸಕರಾದ ಎ.ಟಿ ರಾಮಸ್ವಾಮಿ ಅವರು ಮಾತನಾಡಿ ತಾಲ್ಲೂಕಿನಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಗರಿಷ್ಠ ಮುತುವರ್ಜಿ ವಹಸಿಲಾಗಿದೆ ಆದರೆ ಮೂಲಭೂತ ಸೌಕರ್ಯದ ಕೊರತೆ ಇದೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.

ತಾಲ್ಲೂಕು ಹಾಗೂ ಸಮುದಾಯದ ಅರೋಗ್ಯ ಕೇಂದ್ರಗಳನ್ನು ಬಲಪಡಿಸಿ ಆಮ್ಮಜನಕ ಪೂರೈಕೆ ಸೇರಿದಂತೆ ಕನಿಷ್ಠ ಪ್ರಾಥಮಿಕ ಅಗತ್ಯ ಗಳನ್ನಾದರೂ ಪೂರೈಸಲೇಬೇಕಿದೆ ಎಂದು ಮನವಿ ಮಾಡಿದರು. ಸೊಂಕಿತರೆಲ್ಲರಿಗೂ ಸೀಲ್ ಹಾಕುವ ಕಾರ್ಯ ಆಗಬೇಕು.ಇರುವ ಕೊರತೆಗಳ ನಡುವೆಯೂ ತಾಲ್ಲೂಕಿನಲ್ಲಿ ವೈದ್ಯರು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಅದನ್ನು ಅಭಿನಂದಿಸುತ್ತೇನೆ ಎಂದು ಶಾಸಕರು ಹೇಳಿದರು. ಕೊಣನೂರಿನಲ್ಲಿ ಇನ್ನೊಂದು ಕೊವಿದ್ ಆಸ್ಪತ್ರೆ ಪ್ರಾರಂಭಿಸುವ ಅನಿವಾರ್ಯತೆ ಇದೆ ಇದಕ್ಕೆ ಎಲ್ಲಾ ರೀತಿಯ ನೆರವು ನೀಡಿ, ತಾಲ್ಲೂಕಿನಲ್ಲಿ ಈಗಾಗಲೆ 60 ಅಮ್ಮಜನಕ ಸಿಲಿಂಡರ್ ಒದಗಿಸಲಾಗಿದೆ .

ತಾಲ್ಲೂಕು ಆಸ್ಪತ್ರೆಯಲ್ಲಿಯೇ ಒಂದು ಲಿಕ್ವಿಡ್ ಆಮ್ಲಜನಕ ಘಟಕ ಅಳವಡಿಸಿಕೊಡಿ. ಇದರಿಂದ ಜನರಿಗೆ ಅನುಕೂಲವಾಗಲಿದೆ ಅಲ್ಲದೆ ಹೆಚ್ಚುವರಿ ಅಂಬುಲೆನ್ಸ್ ಸೌಲಭ್ಯ ಒದಗಸಿ. ಅರಕಲಗೂಡು ಆಸ್ಪತ್ರೆಯ ಲ್ಯಾಬ್ ಉನ್ನತೀಕರಿಸಿ. ಎಸ್ .ಡಿ ಅರ್ ಎಫ್ ನಿಧಿಯಲ್ಲಿ ಹಣ ನೀಡಿ 50 ಬೆಡ್ ಗಳನ್ನು ಮೇಲ್ದರ್ಜೆಗೆ ಏರಿಸಿಕೊಡಿ .ಹೆಚ್ಚಿನ ವೆಂಟಿಲೇಟರ್ ಪೂರೈಸಿ .ಐ ಸಿ.ಯು ಮಂಚಗಳನ್ನು ಒದಗಿಸಿ ಎಂದು ಶಾಸಕರಾದ ಎ.ಟಿ ರಾಮಸ್ವಾಮಿ ಸಚಿವರಲ್ಲಿ ಮನವಿ ಮಾಡಿದರು.ಲಾಕ್ ಡೌನ್ ಸೋಂಕಿನ ಸರಪಳಿ ತಪ್ಪಿಸಲು ವಿಫಲವಾದರೆ ಅಪಾಯ .ಹಾಗಾಗಿ ಸರ್ಕಾರದ ಲಾಕ್ಡೌನ್ ನಿಯಮವನ್ನು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಶಾಸಕರಾದ ಹೇಳಿದರು

.
ವಿಧಾನ ಪರಿಷತ್ ಸದ್ಯರಾದ ಎಂ.ಎ.ಗೋಪಾಲಸ್ವಾಮಿ ಅವರು ಮಾತನಾಡಿ ಪೋಲಿಸ್ ಇಲಾಖೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ಕ್ರಮವಹಿಸಿಲೇ ಬೇಕು ಎಂದರು.
ಗ್ರಾಮ ಪಂಚಾಯತಿವಾರು ಸೊಂಕಿತರ ಮನೆಗಳ ಸಮೀಕ್ಷೆ ನಡೆಸಿ ಸೌಲಭ್ಯ ರಹಿತ ಎಲ್ಲಾ ಸೋಂಕಿತರನ್ನು ಕೊವಿದ್ ಕೇರ್ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಎಂದು ಹೇಳಿದರು

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ಸೊಂಕಿತರ ಪಟ್ಟಿಯನ್ನು ಗೂಗಲ್ ಶೀಟ್ ನಲ್ಲಿ ಅಪ್ಡೇಟ್ ಮಾಡಬೇಕು .ಹಾಗೂ ಮನೆಯಲ್ಲಿ ಇರುವವರ ಅರೋಗ್ಯ ಪರಿಸ್ಥಿತಿ ,ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ,ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ|| ಸತೀಶ್,ತಹಸಿಲ್ದಾರ್ ರೇಣು ಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು.


LEAVE A REPLY

Please enter your comment!
Please enter your name here