ಹಾಸನ ಮಾ 04 : ಜಿಲ್ಲೆಯಲ್ಲಿಂದು ಹೊಸದಾಗಿ 9 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 28,758 ಏರಿಕೆಯಾಗಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ 67 ಮಂದಿ ಸಕ್ರಿಯ ಸೋಂಕಿತರು ಮಾತ್ರ ಹಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

0

ಈವರೆಗೆ 28,224 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 467 ಮಂದಿ ಸಾವನ್ನಪ್ಪಿದಾರೆ.

Advertisements

ಇಂದು ಪತ್ತೆಯಾದ 9 ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ 7  ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ  2 ಮಂದಿಗೆ,  ಕೋವಿಡ್ ದೃಡಪಟ್ಟಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here