ಗಮನಿಸಿ : ಹಾಸನ ನಗರದ ಪ್ರಮುಖ ಲಸಿಕಾ ಕೇಂದ್ರ ಸಾರ್ವಜನಿಕರ ಒತ್ತಾಯದ ಮೇರೆಗೆ ಸ್ಥಳಾಂತರ

0

ಹಿಮ್ಸ್ ಕೋವಿಡ್-19 ಪ್ರಮುಖ ಲಸಿಕಾ ಕೇಂದ್ರವನ್ನು ಜಿಲ್ಲಾಧಿಕಾರಿ ಮನೆ ಹಿಂಭಾಗದ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ ಇದೀಗ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದ ರಸ್ತೆಯ ಹಳೆ ಕೋರ್ಟ್ ಕಟ್ಟಡಕ್ಕೆ (ಈ ಮೊದಲು ಲಸಿಕೆ ನೀಡುತ್ತಿದ್ದ ಸ್ಥಳ) ಸ್ಥಳಾಂತರಿಸಲಾಗಿದೆ. ಜುಲೈ 22 ಗುರುವಾರದಿಂದಲೇ ಈ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತಿದೆ

ಹಾಸನ ಹಿಮ್ಸ್‌ ಆಸ್ಪತ್ರೆಯ ತೀರಾ ಹತ್ತಿತದಲ್ಲಿದ್ದ ಲಸಿಕಾ ಕೇಂದ್ರವೇ ಸೋಂಕು ಹರಡುವ ತಾಣವಾಗಬಾರದು ಎಂಬ ಕಾರಣಕ್ಕೆ ಸ್ವಲ್ಪ ದೂರದ ನರ್ಸಿಂಗ್ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ,

ಜಿಲ್ಲಾಧಿಕಾರಿ ನಿವಾಸದ ಹಿಂಭಾಗದ ಕಾಂಪೌಂಡ್‌ ಪಕ್ಕದಲ್ಲಿರುವ ಸೆಂಟರ್‌ಗೆ ತೆರಳಲು ಸಾರ್ವಜನಿಕರು ಪರದಾಡುತ್ತಿದ್ದರು (ವಿಳಾಸ ಕೊರತೆ , ಟ್ರಾಫಿಕ್ ಸಮಸ್ಯೆ , ಫ್ಲೈಓವರ್ ರಸ್ತೆ ಕಾಮಗಾರಿ ನಿಮಿತ್ತ ಓಡಾಡಕ್ಕೆ ತೊಂದರೆ , BM ರಸ್ತೆಯಿಂದ ಯೋಗಿ ಪ್ರತಿಮೆ ಪಕ್ಕದಲ್ಲಿ ಸಾಗಿ, ಬಸ್‌ ನಿಲ್ದಾಣದವರೆಗೆ ಹೋಗಿ ಯೂಟರ್ನ್‌ ತೆಗೆದುಕೊಳ್ಳಬೇಕು. ರೈಲ್ವೆ ಹಳಿ ದಾಟಿಕೊಂಡು ಎಸಿ, ಎಡಿಸಿ ನಿವಾಸದ ಎದುರು ಹಾದು ಲಸಿಕಾ ಕೇಂದ್ರ ತಲುಪಬೇಕಾಗಿತ್ತು)

ಸಾರ್ವಜನಿಕರ ಪದೇ ಪದೇ ಈ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿ ಕೋರ್ಟ್‌ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಟ್ಟಿದೆ

ಸಾರ್ವಜನಿಕ ಲಸಿಕೆ ಪಡೆದು ಕೋವಿಡ್ ನಿಯಂತ್ರಿಸಲು ಸಹಕರಿಸಬೇಕಿದೆ

LEAVE A REPLY

Please enter your comment!
Please enter your name here