ಲಾಕ್‌ಡೌನ್ ಹಿನ್ನೆಲೆ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಅಪ್ರಾಪ್ತ ಬೈಕ್ ಕಳ್ಳನ ಹಲವು ಪ್ರಕರಣ ಬಯಲು

0

ಹಾಸನ / ಬೇಲೂರು : ಲಾಕ್‌ಡೌನ್ ಹಿನ್ನೆಲೆ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಅಪ್ರಾಪ್ತ ಬೈಕ್ ಸವಾರನ ಹಿಡಿದು , ದ್ವಿಚಕ್ರ ವಾಹನದ ಡಾಕ್ಯುಮೆಂಟ್ ಕೇಳಿದಾಗ , ಪರದಾಡಿದ ಕಳ್ಳನೊಬ್ಬ ತಾನಾಗಿಯೇ ಬಲೆಗೆ ಬಿದ್ದಿದ್ದ ಘಟನೆ ವರದಿಯಾಗಿದೆ :

ಹಾಸನ ಜಿಲ್ಲೆಯ ಬೇಲೂರು  ತಾಲ್ಲೂಕಿನ ಅರೇಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಬುಧವಾರ ಮಹೇಶ್(PSI) ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ. ಅಂದಾಜಿನ ಮೇರೆಗೆ ಅಪ್ರಾಪ್ತ ವಯಸ್ಸಿನ ಯುವಕ ಅಲ್ಲಿನ KEB ಬಳಿ ಪೊಲೀಸರನ್ನು ಕಂಡೊಡನೆ ವಾಹನವನ್ನು ಕಕ್ಕಾಬಿಕ್ಕಿ ಯಾಗಿ ಓಡಿಸಿದ್ದಲ್ಲದೆ ., ವಾಹನ ಬಿಟ್ಟು ಗಾಬರಿಯಿಂದಲೇ ಓಡುತ್ತಿರೋದ ಗಮನಿಸಿ .,  ಅನುಮಾನಗೊಂಡು ಸಿಬ್ಬಂದಿಗಳಾದ ನಂದೀಶ್, ಜಗದೀಶ್ ಹನುಮಂತ ಯುವಕನನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿರುವುದು .
ಈ ವೇಳೆ ಪೊಲೀಸರೇ ಗಾಬರಿಯಾಗುವಂತಹ ವಿಚಾರ ತಿಳಿದಿದ್ದು, ಈತ ವಿವಿಧ ಭಾಗಗಳಲ್ಲಿ ಬೈಕ್ ಕಳವು ಮಾಡಿದ್ದು ಸುಮಾರು 6 ದ್ವಿಚಕ್ರ ವಾಹನಗಳನ್ನು ಕದ್ದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಎಂಬುದು ತಡವಾಗಿ ಬೆಳಗಿಗೆ ಬಂದಿದೆ ., ನಂತರ ಕದ್ದ ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಸಂದರ್ಭ ಎಎಸ್‌ಐ ಶಿವರಾಂ, ಕುಮಾರ್ ಹಾಜರಿದ್ದರು. , ಹಾಸನ ಜನತೆಯ ಪರವಾಗಿ ಪೊಲೀಸರಿಗೆ  ಧನ್ಯವಾದಗಳು !! #crimdairyhassan

LEAVE A REPLY

Please enter your comment!
Please enter your name here