CT ಸ್ಕ್ಯಾನಿಂಗ್ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆ ಹಾಸನ ಜಿಲ್ಲಾಧಿಕಾರಿಯವರು ನೋಟಿಸ್ ಜಾರಿ

0

ಚನ್ನರಾಯಪಟ್ಟಣದ CT ಸ್ಕ್ಯಾನಿಂಗ್ ಕೇಂದ್ರದಲ್ಲಿ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆ ಹಾಸನ ಜಿಲ್ಲಾಧಿಕಾರಿಯವರು ನೋಟಿಸ್ ಜಾರಿ ಮಾಡಿದ್ದಾರೆ

ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಹುತೇಕ ಪ್ರಕರಣಗಳಲ್ಲಿ ಹೆಚ್‌ಆರ್‌ಸಿಟಿ ಹಾಗೂ ಡಿಜಿಟಲ್ ಎಕ್ಸ್‌ರೇ ಗಳನ್ನು ರೋಗನಿರ್ಣಯ ಸಾಧನವಾಗಿ ಬಳಸಲಾಗುತ್ತಿದೆ. ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಖಾಸಗಿ ಡಯಾಗೋಸ್ಟಿಕ್ ಸೆಂಟರ್‌, ಖಾಸಗಿ ವೈದ್ಯಕೀಯ ಸಂಸ್ಥೆಗಳು, ಸ್ಕ್ಯಾನಿಂಗ್ ಸೆಂಟರ್ ಇತ್ಯಾದಿಗಳಲ್ಲಿ ಕೋವಿಡ್-19 ಪ್ರಕರಣಗಳಿಗೆ ನಡೆಸುವ ಹೆಚ್‌ಆರ್‌ಸಿಟಿ ಹಾಗೂ ಡಿಜಿಟಲ್ ಎಕ್ಸ್‌ರೇಗೆ ಸರ್ಕಾರವು ನಿಗಧಿ ಪಡಿಸಿರುವ ದರಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಹಾಗೂ ಕರ್ನಾಟಕ ಪ್ರೈವೇಟ್ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 2007ರ ಅನ್ವಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿರುತ್ತದೆ.

ಉಲ್ಲೇಖ(1)ಮತ್ತು(2)ರಲ್ಲಿ ತಹಶೀಲ್ದಾರ್‌ ಹಾಸನ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಚನ್ನರಾಯಪಟ್ಟಣರವರು ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ದರಪಟ್ಟ ಪ್ರದರ್ಶನ ಮಾಡಿರುವುದಿಲ್ಲವೆಂದು ಹಾಗೂ ನಿಗಧಿತ ದರಕ್ಕಿಂತ ಹೆಚ್ಚುಪಟ್ಟು ಹಣಪಡೆದಿರುವ ಬಗ್ಗೆ ಹಾಗೂ ಪರಿಶೀಲನೆ ಸಮಯದಲ್ಲಿ ರಶೀಧಿ ಮಸ್ತಕ ಹಾಜರು ಪಡಿಸಿರುವುದಿಲ್ಲವೆಂದು ಮತ್ತು ರಸೀಧಿ ಪುಸ್ತಕದಲ್ಲಿರುವ ಬಗ್ಗೆ ರೋಗಿಯ ಹೆಸರನ್ನು ಮಾತ್ರ ನಮೂದಿಸಿದ್ದು ವಿಳಾಸವಾಗಲ ಅಥವಾ ದೂರವಾಣಿ ಸಂಖ್ಯೆಯಾಗಲ್ಲ ನಮೂದಿಸಿರುವುದಿಲ್ಲ ಎಂದು ವರದಿ ಸಲ್ಲಿಸಿರುತ್ತಾರೆ.

ಮೇಲ್ಕಂಡ ವರದಿಯನ್ನು ಪರಿಶೀಅಸಲಾಗಿ ನೀವುಗಳು ಉಲ್ಲೇಖ(3)ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಅಸದೇ ಹಾಗೂ ಕೋವಿಡ್-19 ಸಂಕಷ್ಟ ಕಾಲದಲ್ಲಿ ಸಾರ್ವಜನಿಕರಿಂದ/ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ರೋಗಿಗಳಿಂದ ಹೆಚ್ಚು ಹಣ ಪಡೆದಿರುವುದು

ಆದ್ದರಿಂದ ನಿಮ್ಮ ಸ್ಕ್ಯಾನಿಂಗ್ ಸೆಂಟರ್‌ ಮೇಲೆ ಏಕೆ ಕ್ರಮಕೈಗೊಳ್ಳಬಾರದು ಎಂಬ ಬಗ್ಗೆ ಈ ನೋಟೀಸ್ ತಲುಪಿದ 24 ಗಂಟೆಯೊಳಗೆ ಕೆಳಸಹಿದಾರರ ಮುಂದೆ ಖುದ್ದು ಹಾಜರಾಗಿ ಅಖಿತ ಉತ್ತರವನ್ನು ನೀಡಲು ಸೂಚಿಸಿದೆ. ತಪ್ಪಿದಲ್ಲಿ ನೀವು ಹೇಳುವುದು ಏನು ಇಲ್ಲವೆಂದು ಭಾವಿಸಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಹಾಗೂ ಕರ್ನಾಟಕ ಪ್ರೈವೇಟ್ ಮೆಡಿಕಲ್‌ ಎಸ್ಟಾಷ್‌ಮೆಂಟ್ ಕಾಯ್ದೆ 2007ರ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here