ಜ.28 ರಂದು ಬೆಳಿಗ್ಗೆ 10.30 ಗಂಟೆಗೆ ತೆಂಗು ಬೆಳೆ ಸಂಸ್ಕರಣೆ ಹಾಗೂ ರಫ್ತಿಗೆ ಇರುವ ಸಾಮಥ್ರ್ಯ ಹಾಗೂ ಅವಕಾಶಗಳ ಮಾಹಿತಿ 👇

0

ಹಾಸನ ಜ.26(ಹಾಸನ್_ನ್ಯೂಸ್ !, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಹಾಗೂ ಜಿಲ್ಲಾ ಕೈಗಾರಿಕೆ ಇಲಾಖೆ  ಸಂಯುಕ್ತಾಶ್ರಯದಲ್ಲಿ ಜ.28 ರಂದು ಬೆಳಿಗ್ಗೆ 10.30 ಗಂಟೆಗೆ ತೆಂಗು ಬೆಳೆ ಸಂಸ್ಕರಣೆ ಹಾಗೂ ರಫ್ತಿಗೆ ಇರುವ ಸಾಮಥ್ರ್ಯ ಹಾಗೂ ಅವಕಾಶಗಳನ್ನು ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಾಗಾರವನ್ನು ಪಶು ವೈದ್ಯಕೀಯ ಕಾಲೇಜಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಏರ್ಪಡಿಸಲಾಗಿದೆ.


        ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿಗಳ  ಅಡಿಯಲ್ಲಿ  Scheme for Formalization of Micro Food Processing Enterprises (PMFME) “ಒಂದು ಜಿಲ್ಲೆ ಒಂದು ಉತ್ಪನ್ನ” (One District One Product-ODOP)ಅಡಿಯಲ್ಲಿ ತೆಂಗು ಬೆಳೆಯನ್ನು ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮೌಲ್ಯವರ್ಧನೆ, ಮಾಡಲು ಹಾಸನ ಜಿಲ್ಲೆಗೆ ಆಯ್ಕೆ ಮಾಡಲಾಗಿರುತ್ತದೆ.


      ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ತೆಂಗು ಉತ್ಪಾದಕರಿಗೆ, ತೆಂಗು ಉತ್ಪಾದಕ ಸಂಸ್ಥೆಯವರಿಗೆ, ತೆಂಗು ಸಹಕಾರಿ ಸಂಸ್ಥೆಯವರಿಗೆ, ತೆಂಗು ಉದ್ದಿಮೆದಾರರಿಗೆ ಈ ಯೋಜನೆಯ ಸದುದ್ದೇಶಗಳು, ಉಪಯೋಗಗಳು, ತೆಂಗಿನಲ್ಲಿ ವಿವಿಧ ಉತ್ಪನ್ನಗಳ ತಯಾರಿಕೆ ಈ ರೀತಿಯಾಗಿ ಮಾಹಿತಿ ನೀಡಲು ಕೇಂದ್ರೀಯ ಸಾಂಬಾರು ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡಿನ ವಿಜ್ಞಾನಿಗಳು, ಕೆಪೆಕ್, ಬೆಂಗಳೂರಿನ ಹಿರಿಯ ಅಧಿಕಾರಿಗಳು, ತೆಂಗು ಅಬಿವೃದ್ದಿ ಮಂಡಳಿಯ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.


       ಕಾರ್ಯಾಗಾರಕ್ಕೆ ಪ್ರಗತಿಪರ ತೆಂಗು ಬೆಳೆಗಾರರು, ತೆಂಗು ಉತ್ಪಾದಕ ಸಂಸ್ಥೆಯವರು, ತೆಂಗು ಸಹಕಾರಿ ಸಂಸ್ಥೆಯವರು, ತೆಂಗು ಉದ್ದಿಮೆದಾರರು ಆಗಮಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.


  ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ  ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here