ಸರ್ಕಾರದ ಬೆಂಬಲ ಬೆಲೆಯೊಂದಿಗೆ ರಾಗಿ, ಭತ್ತ ಜೋಳ ಖರೀದಿಗೆ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅಗತ್ಯವರುವ ಕಡೆಗಳಲ್ಲಿ ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರೆಯಲು ಸೂಚನೆ !!

0

– ಹೆಚ್ಚಿನ ಖರೀದಿ ಕೇಂದ್ರಗಳನ್ನು  ತೆರದು ಈ ಬಗ್ಗೆ  ಪ್ರಚಾರಗೊಳಿಸುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ  ಕುರಿತು  ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಎಲ್ಲಾ ಜಿಲ್ಲೆಗಳಲ್ಲಿ ನಿಗದಿತ ಗುರಿಗಳನ್ನೂ  ಆದಷ್ಟು ಬೇಗ ಸಂಪೂರ್ಣಗೊಳಿಸಿ  ಹಾಗೂ ಎಲ್ಲಾ ಕಡೆಗಳಲ್ಲಿ ಇನ್ನು ಹೆಚ್ಚಿನ ಪ್ರಚಾರ ಪಡಿಸಿ ಎಂದು ಅವರು ಹೇಳಿದರು.
ಪಡಿತರ ವ್ಯವಸ್ಥೆಗಳಲ್ಲಿ ಅಕ್ಕಿ, ಗೋಧಿ, ಆಹಾರ ಧಾನ್ಯಗಳು ದುರುಪಯೋಗವಾಗುತ್ತಿರುವುದು  ಕೇಳಿ ಬರುತ್ತಿದ್ದು ಅದರ ಬಗ್ಗೆ ಹೆಚ್ಚಿನ ನಿಗಾವಹಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳನ್ನ ಖರೀದಿ ಮಾಡುವ ಗೋದಾಮುಗಳು ರೈತರಿಗೆ ಹತ್ತಿರ ವಾಗುವಂತಿರಲಿ ಎಂದರಲ್ಲದೆ ಅಧಿಕಾರಿಗಳ ಜೊತೆ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಿ ನಿಮ್ಮ ಗುರಿಗಳನ್ನು ಸಾಧಿಸಿ ಎಂದು ಸಲಹೆ ನೀಡಿದರು.

ಬಡತನ  ರೇಖೆಗಿಂತ ಮೇಲಿರುವವರು ಹಾಗೂ  7  ಎಕರೆ ಜಮೀನನ್ನು ಹೊಂದಿದ್ದು ಎಲ್ಲಾ ರೀತಿಯ ಸೌಕರ್ಯಗಳು ಹೊಂದಿರುವವರ ಹೆಸರನ್ನು  ಪಟ್ಟಿಯಿಂದ ಹೆಸರನ್ನು ತೆಗೆಯಲು ಕ್ರಮವಹಿಸಿ ಎಂದರು ಹಾಗೂ ಕೆಲವೆಡೆ ಅಕ್ರಮವಾಗಿ  ಬಿ. ಪಿ. ಎಲ್ ಕಾರ್ಡ್‍ಗಳನ್ನು  ಮಾಡಿ ಕೊಡುತ್ತಿರುವುದು ಕೇಳಿ ಬರುತ್ತಿದ್ದು ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಅವರು ಹೇಳಿದರು.

ಸೀಮೆಎಣ್ಣೆ ಅಡಿಗೆ ಉದ್ದೇಶ ಬಳಸುವುವವರನ್ನು  ಕಡಿಮೆ ಮಾಡಿ  ಅವರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅನಿಲ ಭಾಗ್ಯ ಕಲ್ಪಿಸಿಕೊಡಿ ಎಂದರು.

ಪಡಿತರ ಅಂಗಡಿಗಳಲ್ಲಿ  ಸರಿಯಾದ  ಸಮಯಕ್ಕೆ  ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಬೇಕು ಮರಣ ಹೊಂದಿದ ಕಾರ್ಡ್‍ದಾರರ ಹೆಸರನ್ನು  ಬಿ.ಪಿ.ಎಲ್ ಪಟ್ಟಿಯಿಂದ ಕೈಬಿಡಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಜಿಲ್ಲೆಗೆ 7 ಲಕ್ಷ ಗುರಿಯನ್ನು ಹೊಂದಿದ್ದು ನಮಗೆ ಮಾರ್ಚ್ 30 ರ ಒಳಗೆ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಕೊನೆಯ ದಿನದವರೆಗೆ, ರಾಗಿ, ಭತ್ತ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಕೋಕಿಲ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಉಪ ನಿರ್ದೇಶಕರಾದ ದಿಲೀಪ್,  ರಾಜ್ಯ ಸಹಕಾರ ಮಹಾ ಮಂಡಳಿ ಶಾಖಾ ವ್ಯಸ್ಥಾಪಕರಾದ ರಂಗಸ್ವಾಮಿ, ಹಾಗೂ ಚನ್ನರಾಯಪಟ್ಟಣ ಶಾಖಾ ವ್ಯಸ್ಥಾಪಕರಾದ ಚೇತನ್, ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here