ಹಾಸನ ಜಿಲ್ಲೆಯಲ್ಲಿ ಕೊರೊನಾ ತೀವ್ರತೆಗೆ ಒಂದು ಕುಟುಂಬವೇ ಹೇಗೆ ನಲುಗಿ ಹೋಗಿದೆ

0

ಹಾಸನ ಜಿಲ್ಲೆಯಲ್ಲಿ ಕೊರೊನಾ ತೀವ್ರತೆಗೆ ಒಂದು ಕುಟುಂಬವೇ ಹೇಗೆ ನಲುಗಿ ಹೋಗಿದೆ ಗೊತ್ತಾ ಸ್ನೇಹಿತರೇ ?? ಹಾಸನ ನಗರದ ಹೊರವಲಯದ ಸತ್ಯಮಂಗಲದ ನಿವಾಸಿ ಸರಳ ಸಜ್ಜನ ಮಂಜುನಾಥ್ (ಕಟ್ಟಾಯ ಗ್ರಾಮದ ಶ್ರೀ ದೇವಿರಮ್ಮ ದೇವಸ್ಥಾನದ ಅರ್ಚಕರು) ಕಳೆದ ಶುಕ್ರವಾರ ಕೊರೊನಾಗೆ ಬಲಿಯಾಗಿ ಹಾಸನ ನಗರದ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಲೀನರಾದ ಮರುದಿನವೇ ತನ್ನ ಪತ್ನಿ ಸ್ವರ್ಣಲತಾ (ಕುದುರುಗುಂಡಿ ಸರ್ಕಾರಿ ಶಾಲಾ ಶಿಕ್ಷಕಿ) ಕೂಡ ಸೋಂಕಿನಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದೋಗಿದೆ , ಇದಿಷ್ಟೇ ಅಲ್ಲದೇ ದಂಪತಿಯ ಏಕೈಕ ಪುತ್ರ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಇಡೀ ಕುಟುಂಬ ಕೊರೊನಾದಿಂದ ನಲುಗಿ ಹೋಗಿದೆ , ದೇವರ ದಯೆ ಮಗ ಕೋವಿಡ್ ನಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವಿಷಯ ಬಂದಿದೆ . ಆದರೆ ದೇವಾಲಯವೊಂದರ ಅರ್ಚರಾಗಿದ್ದ ಮಂಜುನಾಥ ಮತ್ತು ಅವರ ಪತ್ನಿ ಸ್ವರ್ಣ ಮೃತ ದುರ್ದೈವಿಗಳು. , ದಂಪತಿಗಳ ನಿಧನಕ್ಕೆ ಊರ ಗ್ರಾಮಸ್ಥರು ಹಾಸನದ ಸತ್ಯಮಂಗಲದ ನಿವಾಸಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

* ನೊಂದ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಧಾವಿಸಬೇಕಿದೆ* ಇದು ಹಾಸನ್ ನ್ಯೂಸ್ ತಂಡದ ಕಳಕಳಿ 🙏

Advertisements

LEAVE A REPLY

Please enter your comment!
Please enter your name here