ಜೇನು ತುಪ್ಪ ತಿನ್ನಲು ಎಷ್ಟು ರುಚಿಕರವೋ ನಮ್ಮ ಆರೋಗ್ಯಕ್ಕೂ ಅಷ್ಟೇ ಉಪಯೋಗಕಾರಿ

0

ಜೇನುತುಪ್ಪ ಸಿಹಿಯಾದರೂ ಅದರಲ್ಲಿರುವುದು ನೈಸರ್ಗಿಕ ಸಕ್ಕರೆಯ ಅಂಶ ಅದಕ್ಕಾಗಿ ಇದು ಹೆಚ್ಚು ತೊಂದರೆಯಲ್ಲ.ಜೇನು ತುಪ್ಪವನ್ನು ನಾವು ಔಷಧಿಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ.ವಿಶ್ವದಾದ್ಯಂತ ಜೇನನ್ನು ಕೃಷಿ ಮಾಡಲಾಗುತ್ತದೆ.ಇದರ ಬಳಕೆಯಿಂದ ನಾವು ಹಲವಾರು ರೋಗಗಳಿಗೆ ವಿದಾಯ ಹೇಳಬಹುದು.

ಪ್ರಯೋಜನಗಳು

ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸುತ್ತದೆ:
ಹಲವರು ಜೆಲ್ಲಿ ಸಿಹಿ ಅಂಶ ಇರುವುದರಿಂದ ಇದು ನಮ್ಮ ತೂಕವನ್ನು ಹೆಚ್ಚು ಮಾಡುತ್ತದೆ ಎಂದು ತಿಳಿದುಕೊಂಡಿದ್ದಾರೆ, ಆದರೆ ಇದು ಆದರೆ ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಇಲ್ಲ.
ಆದ್ದರಿಂದ ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಏರುವ ಸಂಭವ ಇಲ್ಲ .ಬದಲಿಗೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಲು ನೆರವಾಗುತ್ತದೆ.

ಮಾನಸಿಕ ಒತ್ತಡವನ್ನು ಎದುರಿಸುವ ಶಕ್ತಿ ನಿಮ್ಮದಾಗುತ್ತದೆ:
ಈಗಿನ ಕಾಲದಲ್ಲಿ ಮಾನಸಿಕ ಒತ್ತಡ ಅನ್ನುವುದು ಎಲ್ಲರ ಸಮಸ್ಯೆ ಈ ಸಮಸ್ಯೆಯಿಂದ ಹೊರಬರಲು ಜೇನನ್ನು ಪ್ರತಿದಿನ ಕೊಂಚ ಸೇವಿಸಿದರೆ ಮಾನಸಿಕ ಒತ್ತಡವನ್ನು ಎದುರಿಸುವ ಶಕ್ತಿ ಹೆಚ್ಚಾಗುತ್ತದೆ.

ಅಜೀರ್ಣದ ತೊಂದರೆಗೆ ಇದು ಸಹಾಯಕಾರಿ:
ಅಜೀರ್ಣ ಸಮಸ್ಯೆ ಹೋದವರು ಊಟಕ್ಕೆ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ ಹಾಗೂ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಜೇನು ಹಾಗೂ ನಿಂಬೆರಸ :
ನೀರು ಮತ್ತು ನಿಂಬೆ ರಸದಲ್ಲಿ ಚಿಕ್ಕ ಚಮಚ ಜೇನನ್ನು ಕುಡಿಯುವುದು ಬಹಳ ಹಳೆಯ ಅಭ್ಯಾಸ.ಇದನ್ನು ಪ್ರತಿದಿನ ಮಾಡುವವರು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಾರೆ ಹಾಗೂ ನಿಮ್ಮ ತೂಕವನ್ನು ಇಳಿಸಲು ಉಪಯೋಗವಾಗುತ್ತದೆ.

ಕಾಂತಿಯುಕ್ತ ಚರ್ಮಕ್ಕೆ ಸಹಾಯಕಾರಿ :
ಟೊಮ್ಯಾಟೊ ರಸ ಮತ್ತು ಜೇನುತುಪ್ಪದ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ,ತಣ್ಣೀರಿನಲ್ಲಿ ಮುಖ ತೊಳೆದರೆ ನಿಮಗೆ ಕಾಂತಿಯುಕ್ತ ಚರ್ಮ ಲಭಿಸುತ್ತದೆ.ಇದು ನಿಮ್ಮ ಮುಖದ ಮೇಲಿರುವ ಮೊಡವೆಯನ್ನು ,ರಂಧ್ರಗಳನ್ನು ತೊಲಗಿಸಿ ಹೊಳೆಯುವ ಚರ್ಮ ನೀಡುತ್ತದೆ.

ಪ್ರತಿದಿನವೂ ಜೇನುತುಪ್ಪವನ್ನು ಕನಿಷ್ಠ ಒಂದು ಚಮಚ ಸೇವಿಸಿ ನಿಮ್ಮ ಆರೋಗ್ಯ ಭಾಗ್ಯವನ್ನು ಹೆಚ್ಚಿಸಿಕೊಳ್ಳಿ.

-ತನ್ವಿ. ಬಿ

LEAVE A REPLY

Please enter your comment!
Please enter your name here