ಕೃಷಿ ಭೂಮಿಯನ್ನು ಉಳುವವನಿಗೆ ಕೊಡಬೇಕೆ ಹೊರತು ಉಳ್ಳವನಿಗಲ್ಲ ” . – ಪ್ರಜ್ವಲ್ ರೇವಣ್ಣ (ಸಂಸದರು) @iprajwalrevanna

0

” ಭೂಸುಧಾರಣಾ, ಎಪಿಎಂಸಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ಈಗಾಗಲೇ ಈ ಮಸೂದೆಗಳ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಿ ರೈತರು ಎದುರಿಸಬಹುದಾದ ಸಂಕಷ್ಟಗಳನ್ನು ವಿವರಿಸಿದ್ದೇನೆ.

ಈಗಾಗಲೇ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ರಾಜ್ಯಾದ್ಯಂತ ಪ್ರಜ್ವಲ್ ರೇವಣ್ಣ ಬ್ರಿಗೇಡ್ ನಾ ಸದಸ್ಯರು ರೈತರ ಜೊತೆಗೂಡಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ರೈತರನ್ನು ಬೆಂಬಲಿಸಲಿದ್ದಾರೆ.

ಅತಿವೃಷ್ಟಿ ಅನಾವೃಷ್ಟಿ ಕಳಪೆ ಬೀಜ ರಸಗೊಬ್ಬರ ಕೊರತೆಯಂತಹ ಸಮಸ್ಯೆಗಳಿಂದಾಗಿ ರೈತರ ಸ್ಥಿತಿ ದುಸ್ಥರವಾಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರದ ಮಸೂದೆಗಳು ರೈತನ ಬದುಕಿಗೆ ಅಕ್ಷರಷಃ ಮರಣ ಶಾಸನವಾಗಲಿವೆ. ಸರ್ಕಾರ ಯಾವುದೇ ಕಾರಣಕ್ಕೂ ರೈತರನ್ನು ಬಂಡವಾಳಶಾಹಿ ಖಾಸಗಿಯವರ ಹಿಡಿತಕ್ಕೆ ನೀಡದೇ ಸರ್ಕಾರವೇ ರೈತರ ಜೊತೆ ನಿಂತು ಸೌಲಭ್ಯಗಳನ್ನು ಒದಗಿಸಬೇಕು.

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ಪರಿಣಾಮವಾಗಿ ರೈತರು ಬಂಡವಾಳಶಾಹಿ ಕೈಗಾರಿಕೋದ್ಯಮಿಗಳಿಗೆ ತಮ್ಮ ಜಮೀನನ್ನು ಮಾರಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗುವ ಸಾಧ್ಯತೆಗಳಿವೆ, ರೈತರು ತಮ್ಮದೇ ಜಮೀನಿನಲ್ಲಿ ಜೀತದಾಳುಗಳಾಗಿ ದುಡಿಯುವ ಕಾಲ ಬಂದರೂ ಅಚ್ಚರಿಯಿಲ್ಲ. ಹೀಗಾಗಿ ಕೃಷಿ ಭೂಮಿಯನ್ನು ಉಳುವವನಿಗೆ ಕೊಡಬೇಕೆ ಹೊರತು ಉಳ್ಳವನಿಗಲ್ಲ ” . – ಪ್ರಜ್ವಲ್ ರೇವಣ್ಣ (ಸಂಸದರು) @iprajwalrevanna

LEAVE A REPLY

Please enter your comment!
Please enter your name here