ಪ್ರಕೃತಿವಿಕೋಪ NDRF ಯೋಧರಿಂದ ಸಕಲೇಶಪುರದಲ್ಲಿ ಸಹಾಯಕ್ಕೆ ತಯಾರು

0

ಪ್ರಕೃತಿ ವಿಕೋಪ ಮುನ್ಸೂಚನೆ ಎನ್‌ಡಿಆರ್‌ಎಫ್‌ ಯೋಧರಿಂದ ಪಟ್ಟಣದಲ್ಲಿ ಮಂಗಳವಾರ ಪ್ರಾತೇಕ್ಷಿಕೆ
ಸಕಲೇಶಪುರ: ಮಲೆನಾಡಿನ ಈ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಅತಿಯಾದ ಮಳೆ ಹಾಗೂ ಗಾಳಿಯಿಂದ ಪ್ರಕೃತಿ ವಿಕೋಪ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಎನ್‌ಡಿಆರ್‌ಎಫ್‌ ಯೋಧರಿಂದ ಪಟ್ಟಣದಲ್ಲಿ ಮಂಗಳವಾರ  ಪ್ರಾತೇಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದು ಎಂ. ಗಿರೀಶ್‌ ನಂದನ್‌ ಹೇಳಿದರು.
ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಸೋಮವಾರ ಕಂದಾಯ, ಪುರಸಭೆ, ಎನ್‌ಡಿಆರ್‌ಎಫ್‌,  ಪೊಲೀಸ್‌, ಹಾಗೂ ಗೃಹರಕ್ಷಕ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪುರಸಭೆ ಅಧಿಕಾರಿ ನೌಕರರು, ಪೊಲೀಸರು, ಸೆಸ್ಕ್ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಎನ್‌ಡಿಆರ್‌ಎಫ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣದ ದೊಡ್ಡಕೆರೆಯಲ್ಲಿ ತರಬೇತಿ ನೀಡಲಿದ್ದಾರೆ ಎಂದರು.
ಅತಿವೃಷ್ಟಿಯಿಂದಾಗಿ ಯಾವುದೇ ರೀತಿಯಿಂದಲೂ ಸಾವು ನೋವುಗಳು ಉಂಟಾಗಬಾರದು. ಸಮಸ್ಯೆಯಲ್ಲಿ ಸಿಕ್ಕಿಕೊಂಡವರಿಗೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ಬಾರಿ ತುಂಬಾ ವ್ಯವಸ್ಥಿತವಾಗಿ ಪೂರ್ವ ಸಿದ್ದತೆ ನಡೆಸಲಾಗಿದೆ ಎಂದರು.
ತಹಶೀಲ್ದಾರ್‌ ಎಚ್‌.ಬಿ. ಜೈಕುಮಾರ್‌, ಡಿವೈಎಸ್‌ಪಿ ಬಿ.ಆರ್‌. ಗೋಪಿ, ಇನ್‌ಸ್ಪೆಕ್ಟರ್ ಗಿರೀಶ್‌, ಎನ್‌ಡಿಆರ್‌ಎಫ್‌  ಅಸಿಸ್ಟೆಂಟ್‌ ಕಮಾಂಡ್‌ ಸೆಂಥಿಲ್‌ಕುಮಾರ್, ಅಗ್ನಶ್ಯಾಮಕ ಠಾಣಾಧಿಕಾರಿ ರಾಜು, ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್‌  ಇದ್ದರು.

– ಸಕಲೇಶಪುರ ಭೀಮ‌ವಿಜಯ

LEAVE A REPLY

Please enter your comment!
Please enter your name here