ಹಾಸನ ನಗರದ ಕಸದ ಗಾಡಿಗೆ ಕಸ ಹಾಕದೆ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದೀರಾ : ನಗರಸಭೆಯಿಂದ ಬಾರಿ ದಂಡ , ನಗರಸಭೆಯ ಸೌಲಭ್ಯಗಳು ಸಿಗೋದಿಲ್ಲ , ಕಸ ಎಸೆದು ಹೋಗುವ ಅಪರಿಚಿತ ವಾಹನಗಳಮೇಲೆ ಪೊಲೀಸ್ ಮೊಕದ್ದಮೆ ದಾಖಲಾಗಲಿದೆ ಎಚ್ಚರಿಕೆ !! 🚫

1

ಹಾಸನ ಮಾ. (ಹಾಸನ್_ನ್ಯೂಸ್ !, ನಗರದ ಸಾರ್ವಜನಿಕರು ಕಸವನ್ನು ನಗರಸಭೆಯ ಮನೆ ಮನೆ ಕಸ ಸಂಗ್ರಹಣೆ ಮಾಡುವ ವಾಹನಗಳಿಗೆ ನೀಡದೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವಾಗ ದ್ವಿಚಕ್ರ ವಾಹನಗಳಲ್ಲಿ, ಕಾರುಗಳಲ್ಲಿ ಮತ್ತು ಅಂಗಡಿ ಮಾಲೀಕರುಗಳು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆಯುವುದು ಕಂಡುಬರುತ್ತಿದೆ ಹಾಗೂ ಮನೆಯ ತ್ಯಾಜ್ಯ ಹಾಗೂ ಇತರ ವಸ್ತುಗಳನ್ನು ಸಹ ರಸ್ತೆ ಬದಿಯಲ್ಲಿ ಹಾಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಿ ಎಚ್ಚರಿಕೆ ನೀಡಿದ್ದರೂ ಸಹ ಪುನಃ ಕಸ ಹಾಗೂ

ಕಟ್ಟಡದ ತ್ಯಾಜ್ಯವನ್ನು ಎಸೆದಿರುವುದು ಗಮನಿಸಲಾಗಿದೆ ಆದ್ದರಿಂದ ಎಚ್ಚರಿಕೆಯಾಗಿ ಅಂತಹವರನ್ನು ಗುರುತಿಸಿ ನಗರಸಭೆಯಿಂದ ಕಂದಾಯದ ರೂಪದಲ್ಲಿ ದಂಡ ವಿಧಿಸಲಾಗುವುದು ಹಾಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗುವುದು,  ವಾಹನಗಳ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಿಸಲಾಗುವುದು ಆದ್ದರಿಂದ ಸಾರ್ವಜನಿಕರು  ನಗರದ ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಮತ್ತು ಸುಂದರ ನಗರವನ್ನಾಗಿಸಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಸ್ವಚ ಸರ್ವೇಕ್ಷಣೆ ಪೋಸ್ಟರ್ ಬಿಡುಗಡೆ
ಹಾಸನ ಮಾ.02( ಕರ್ನಾಟಕವಾರ್ತೆ): ಸಾರ್ವಜನಿಕರು ಮನೆಯ ಕಸವನ್ನು ಮೂಲದಲ್ಲೇ ವಿಂಗಡಿಸುವುದು ಆದ್ಯಕರ್ತವ್ಯವಾಗಿದ್ದು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಪೋಸ್ಟರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಆಯುಕ್ತರಾದ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಜಂಟಿ ಕೃಷಿ ನಿರ್ದೇಶಕರಾದ ರವಿ , ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮತ್ತಿತರ ಅಧಿಕಾರಿಗಳು ಹಾಜರಿದ್ದರು..

1 COMMENT

  1. ಖಾಲಿ ಇರುವ ಆರೋಗ್ಯ ನಿರೀಕ್ಷಕರ ಹುದ್ದೆ ಭರ್ತಿ ಮಾಡುವ ಕಡೆ ಗಮನ ಕೊಡಿ

Leave a Reply to Vinod MH Cancel reply

Please enter your comment!
Please enter your name here