ಹಾಸನ ಜಿಲ್ಲಾಡಳಿತ / ಆರೋಗ್ಯ ಇಲಾಖೆ ವತಿಯಿಂದ ” ಮಹಿಳಾ ದಿನಾಚರಣೆ 2021 👇

0

ಮಹಿಳೆಯರು ಪ್ರಬಲರಾದರೆ ಮಾತ್ರ ಮಹಿಳೆಯರ ಅಭಿವೃದ್ದಿ ಸಾಧ್ಯ: ಜಿಲ್ಲಾಧಿಕಾರಿ
ಹಾಸನ ಮಾ.08 (ಹಾಸನ್_ನ್ಯೂಸ್ !, ಮಹಿಳೆಯರು  ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ  ಪ್ರಬಲರಾದರೆ ಮಾತ್ರ ಮಹಿಳೆಯರ ಅಭಿವೃದ್ದಿ ಸಾಧ್ಯ ಎಂದು  ಜಿಲ್ಲಾಧಿಕಾರಿ ಆರ್.ಗಿರೀಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹಾಸನಾಂಭ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ ಮತ್ತು  ಜಿಲ್ಲಾ ಪಂಚಾಯಿತಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ  ಇಲಾಖೆ, ಹಾಸನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಂಡು ಮತ್ತು ಹೆಣ್ಣು ಎಂಬ ತಾರತಮ್ಯವಿಲ್ಲದೆ ಸಮಾನ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತನ್ನಿ ಎಂದರು.


  ಸರ್ಕಾರದ ವಿವಿಧ  ಯೋಜನೆಗಳಡಿ ಹಲವು ಸೌಲಭ್ಯಗಳಿದ್ದು ಅದರ ಸದುಪಯೋಗಪಡಿಸಿಕೊಂಡು ಸಬಲರಾಗಿ ಎಂದು ಕರೆ ನೀಡಿದ ಅವರು  ಮಹಿಳೆಯರು ಉದ್ಯೋಗ  ಕ್ಷೇತ್ರದಲ್ಲಿ ಮುಂದುವರೆಯಿತ್ತಿದ್ದು,  ಶೇ 17% ರಷ್ಟು  ಆಂತರಿಕ ಉತ್ಪನ್ನ ಕೊಡುಗೆಯನ್ನು  ನೀಡುತ್ತಿದ್ದು  ಇದು ಮತ್ತಷ್ಟು  ಹೆಚ್ಚಾಗಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಬಿ.ಎ ಪರಮೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ಸಾಮಾಜಿಕ, ಆರ್ಥಿಕ ಹಾಗೂ ವೈಜ್ಞಾನಿಕ ಸೇರಿದಂತೆ ಹಲವಾರು  ಕ್ಷೇತ್ರಗಳಲ್ಲಿ ಮಹಿಳೆಯರು  ಪುರುಷರಿಗೆ  ಸರಿ ಸಮಾನವಾಗಿ  ಕಾರ್ಯನಿರ್ವಹಿಸುತಿದ್ದು   ಕೆಲವು  ಕ್ಷೇತ್ರಗಳಲ್ಲಿ ಪುರಷರಿಗಿಂತ ಉತ್ತಮವಾಗಿ ಸಾಮಥ್ರ್ಯ ಸಾಬಿತು ಮಾಡಿದ್ದಾರೆ ಎಂದರು.

ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಮುಕ್ತ ಅವಕಾಶವಿದೆ. ಆದರೆ ಕೆಲವು ಕಟ್ಟುಪಾಡುಗಳಿಂದ  ಕುಟುಂಬದವರು   ಅವಕಾಶ ವಂಚಿತರನ್ನಾಗಿ  ಮಾಡುತ್ತಿದ್ದಾರೆ,   ಪೋಷಕರು ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಿ ಸದೃಡಗೊಳಿಸಲು ಸಹಕರಿಸಿ  ಎಂದು ಹೇಳಿದರು.

ಅಪರ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ಅವರು ಮಾತನಾಡಿ   ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ ನೀಡಿ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದರಲ್ಲದೆ ಮಹಿಳೆಯರ ಪ್ರಗತಿಯಾದಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅವರು ಹೇಳಿದರು.

ಇತ್ತಿಚಿನ ದಿನಗಳಲ್ಲಿ ಅಪರಾಧಗಳು ಹೆಚ್ಚಾಗುತಿದ್ದು ಮಕ್ಕಳಿಗೆ  ನೈತಿಕ ಮೌಲ್ಯ ಹಾಗೂ ಉತ್ತಮ ವ್ಯಕ್ತಿತ್ವ  ನೀಡುವಲ್ಲಿ ಪೋಷಕರು ಹೆಚ್ಚಿನ ಪಾತ್ರ ವಹಿಸಬೇಕು,  ಬಾಲ್ಯ ವಿವಾಹ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ,  ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.

ಇದೇ ವೇಳೆ  ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಹಾಗೂ ವಿವಿಧ ಸ್ಪರ್ದೆಗಳಲ್ಲಿ ವಿಜೇತರನ್ನು  ಸನ್ಮಾನಿಸಿ ಪ್ರಶಸ್ತಿ ವಿತರಿಸಿದರು.

ವಸ್ತು ಪ್ರದರ್ಶನ:ಕಾರ್ಯಕ್ರಮದ ಮುನ್ನ  ಜಿಲ್ಲಾ ಪಂಚಾಯಿತಿ ಮುಖ್ಯರ್ಕಾನಿರ್ವಾಹಣಧಿಕಾರಿ ಬಿ.ಎ ಪರಮೇಶ್ ಅವರು ಸ್ರ್ತೀ ಶಕ್ತಿ ಸಂಘಗಳ ವತಿಯಿಂದ ಆಯೋಜಿಸಿದ ಜಿಲ್ಲಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದಿ ಇಲಾಖೆ ಉಪ ನಿರ್ದೇಶಕರಾದ ದಿಲೀಪ್, ಕನ್ನಡ ಮತ್ತು ಸಂಸೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ  ಸುದರ್ಶನ್, ಹಾಗೂ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಕನ್ನಡ ಮತ್ತು ಸಂಸೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ  ಸುದರ್ಶನ್, ಜಿಲ್ಲಾ ಹಿರಿಯ ನಾಗರೀಕರ ಹಾಗೂ ವಿಕಲಚೇತನರ ಕಲ್ಯಾಣಧಿಕಾರಿ ಮಲ್ಲೇಶ್  ಹಾಗೂ ಮತ್ತಿತರರು ಹಾಜರಿದ್ದರು. 

ಪಿಂಕ್ ಬೂತ್ ಉದ್ಘಾಟಿನೆ
ಹಾಸನ.ಮಾ.08 ಹಾಸನದ ಹಿಮ್ಸ್ ಆತ್ಪತ್ರೆಯಲಿರುವ ಮಹಿಳೆಯರಿಗೂ ಕೋವಿಡ್ ಲಸಿಕೆ ನೀಡಲು ಪ್ರತ್ಯೇಕ ಪಿಂಕ್ ಬೂತ್ ತೆರೆಯಲಾಗಿದೆ.

ಹಿಮ್ಸ್ ನಿರ್ದೇಶಕರಾದ ಡಾ|| ಬಿ.ಸಿ ರವಿಕುಮಾರ್ ,  ಜಿಲ್ಲಾ ಶಸ್ತ್ರ ಚಿಕಿತ್ಸೆಕರಾದ ಡಾ|| ಕೃಷ್ಣ ಮೂರ್ತಿ ಪಿಂಕ್ ಬೂತ್ ಉದ್ಘಾಟಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಸತೀಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಹಾಗೂ ಮತ್ತಿತರರು ಹಾಜರಿದ್ದರು

ಜಿಲ್ಲೆಯಲ್ಲಿ 129 ಕೋವಿಡ್ ಲಸಿಕಾ ಬೂತ್ ಸ್ಥಾಪನೆ: ಜಿಲ್ಲಾಧಿಕಾರಿ
                                                                                                                                                                         
ಜಿಲ್ಲೆಯಲ್ಲಿ  129  ಕೋವಿಡ್ ಲಸಿಕೆ ಬೂತ್ ಗಳನ್ನು ಸ್ಥಾಪಿಸಲಾಗಿದ್ದು 5 ಖಾಸಗಿ ಆಸ್ಪತ್ರೆಗಳಲ್ಲಿಯೂ 2 ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ  ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು  ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.

ನಗರ   ಹೊಸ್  ಲೈನ್ ರಸ್ತೆಯಲ್ಲಿರುವ ಎಂ. ಕೃಷ್ಣ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವ್ಯವಸ್ಥೆ ಮಾಡಿರುವ ಪ್ರತ್ಯೇಕ ಗುಲಾಬಿ ಬಣ್ಣದ (ಪಿಂಕ್) ಲಸಿಕಾ ಬೂತ್  ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ದಿನಾಚರಣೆಯ ರಾಜ್ಯದ್ಯಂತ ವಿಶೇಷವಾಗಿ 3000 ಪಿಂಕ್ ಭೂತಗಳನ್ನು ಸ್ಥಾಪಿಸಿ ಮಹಿಳೆಯರಿಗೆ  ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ  ಎಂದು ತಿಳಿಸಿದರು.

60 ವರ್ಷ ಮೇಲ್ಪಟ್ಟ ವಯೋವೃದರು  ಹಾಗೂ 45 ವರ್ಷ ಮೇಲ್ಪಟ್ಟ ಬಹು ಸ್ವರೂಪದ ರೋಗದಿಂದ ಬಳಲುತ್ತಿರುವ ಸಾರ್ವಜನಿಕರು  ನೊಂದಾಯಿಸಿಕೊಂಡು ಲಸಿಕೆ ಹಾಕಿಸಿಕೊಳ್ಳ್ಳುಬೇಕು ಎಂದರು.

    ಕೋ ವ್ಯಾಕ್ಸಿನ್ ಮತ್ತು ಕೋವಿ ಸಿಲ್ಡ್ ಎರಡೂ ಲಸಿಕೆಗಳನ್ನು ಸಂಪೂರ್ಣ ಸುರಕ್ಷಿತವಾಗಿವೆ ಪಡೆದವರಿಗೆ ಈವರೆಗೂ ದೇಶದಲ್ಲಿ ಯಾವುದೇ ರೀತಿಯ ದುಷ್ಪರಿಣಾಮಗಳು ಸಂಭವಿಸಿಲ್ಲ ಎಂದು ತಿಳಿಸಿದರು.
   ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯನ್ನು ಬರದಂತೆ ತಡೆಗಟ್ಟಲು ಸರ್ಕಾರ ಜೊತೆಗೆ  ಸಾರ್ವಜನಿಕರ ಸ್ವಯಂ ಜವಾಬ್ದಾರಿ ಕೂಡ ಮುಖ್ಯ ಮದುವೆ ಹಾಗೂ  ಇತ್ಯಾದಿ ಕಾರ್ಯಕ್ರಮದಲ್ಲಿ ಸಾವಿರಾರು  ಸಂಖ್ಯೆಯಲ್ಲಿ  ಭಾಗವಹಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಜಾಗೃತಿ ವಹಿಸಬೇಕು  ಎಂದು ಜಿಲ್ಲಾಧಿಕಾರಿ ತಿಳಿಸಿದರು .

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಮಹಿಳಾ ದಿನಾಚರಣೆ ಅಂಗವಾಗಿ  ಪ್ರತ್ಯೇಕ ಕೋವಿಡ್ ಲಸಿಕಾ ಬೂತ್ ತೆರೆಯಲಾಗಿದೆ ಮಹಿಳೆಯರಿಗೆ ಸಾಮಾಜಿಕ ಸಮಾನತೆ ಅವಕಾಶವನ್ನು ನೀಡುವುದು ಇದರ ಉದ್ದೀಶವಾಗಿದೆ ಎಂದರು.

        60 ವರ್ಷ ಮೇಲ್ಪಟ್ಟವವರು  ಹಾಗೂ 45 ವರ್ಷದ ಇತರ ರೋಗ ಬಾಧಿತರು ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ಕುಟುಂಬದ ಸದಸ್ಯರನ್ನು ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.

ಮಾಸ್ಕ್  ಬಳಸುವುದು ಹಾಗೂ  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಮಾತ್ರ ಕೋವಿಡ್ ಎರಡನೇ ಅಲೆ  ಬರದಂತೆ ತಡೆಗಟ್ಟಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಸತೀಶ್, ಆರ್. ಸಿ. ಎಚ್ ಅಧಿಕಾರಿ ಡಾ.ಕಾಂತರಾಜ್ ,ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ , ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯ್, ನಗರ ಸಭೆ  ಸದಸ್ಯರಾದ ಸೈಯದ್ ಅಕ್ಬರ್, ಹಾಗೂ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here