ಅಕ್ರಮ ಮರಳು ಸಾಗಾಣಿಕೆ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿ: ಆರ್. ಗಿರೀಶ್

0

ಅಕ್ರಮ ಮರಳು ಸಾಗಾಣೆ ಮತ್ತು ಕಲ್ಲು ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಅಗತ್ಯವಿರುವೆಡೆಗಳಲ್ಲಿ ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಿ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿಯವ ಕಚೇರಿಯಲ್ಲಿಂದು ಮರಳು ಸಾಗಾಣಿಕೆ ಮತ್ತು ಕಲ್ಲು ಗಣಿಗಾರಿಕೆಗಳ ಕುರಿತು ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು ಹಾಲಿ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಹೋಂ ಗಾರ್ಡ್‍ಗಳನ್ನು ನಿಯೋಜಿಸಿ ಅಕ್ರಮ ಸಾಗಾಣಿಕೆ ಬಗ್ಗೆ ತೀವ್ರ ನಿಗಾವಹಿಸಿ ಎಂದು ಸೂಚಿಸಿದರು.
ಇದೇ ವೇಳೆ ಸಭೆಯಲ್ಲಿ ಪಟ್ಟಾ ಜಮೀನುಗಳಲ್ಲಿ ಕಟ್ಟಡಕಲ್ಲು ಗಣಿಗಾರಿಕೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ-75(48)ರ ಹಾಸನ- ಮಾರನಹಳ್ಳಿ ರಸ್ತೆ ಅಭಿವೃದ್ಧಿ ಕಾರ್ಯ ನಿರ್ವಹಿಸಲು ಅವಶ್ಯವಿರುವ ಕಟ್ಟಡಕಲ್ಲನ್ನು ಹಾಸನ ತಾಲ್ಲೂಕಿನ 8 ಎಕರೆ ಸರ್ಕಾರಿ ಪ್ರದೇಶದಲ್ಲಿ ಉತ್ಪಾದಿಸಿಕೊಳ್ಳಲು ಕೆ.ಎಂ.ಎಂ.ಸಿ.ಆರ್. 1994ರ ನಿಯಮ 3(ಬಿ)ರಂತೆ ಗುತ್ತಗೆ ಮಂಜೂರಾತಿ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಹೊಸ ಮರಳು ನೀತಿ, 2020ರ ಅನ್ವಯ ಮರಳು ಉಸ್ತುವಾರಿ ಸಮಿತಿ ವತಿಯಿಂದ ಗುರುತಿಸಿರುವ ಮರಳು ನಿಕ್ಷೇಪಗಳನ್ನು ಅನ್ವಯವಾಗುವ ಗ್ರಾಮ ಪಂಚಾಯಿತಿಗಳಿಗೆ ಅಧಿಸೂಚನೆ ಹೊರಡಿಸಿ ವಿಲೇವಾರಿ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಹಲವಾರು ನಿರ್ದೇಶನಗಳನ್ನು ನೀಡಿದರು.
2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೆಚ್ಚು ಮಳೆ ಮತ್ತು ಕೊವಿಡ್-19 ಕಾರಣಗಳಿಂದ ಪರಿಸರ ವಿಮೋಚನಾ ಪತ್ರದಲ್ಲಿನ ವಾರ್ಷಿಕ ಉತ್ಪಾದನಾ ಪ್ರಮಾಣದ ಶೇ. 50 ರಷ್ಟು ಮರಳನ್ನು ಉತ್ಪಾದಿಸಿ ವಿಲೇವಾರಿ ಮಾಡುವ ಬಗ್ಗೆ ವಿನಾಯಿತಿ ನೀಡುವಂತೆ ಮರಳು ಗುತ್ತಿಗೆ ದಾರರ ಕೋರಿಕೆಯ ಬಗ್ಗೆ ಚರ್ಚಿಸಲಾಯಿತು. ನಡೆಸಿ ವಾಸ್ತವ ಅಹವಾಲುಗಳ ಕುರಿತು ವಿವರವಾದ ವರದಿಯನ್ನು ಅಭಿಪ್ರಾಯದೊಂದಿಗೆ ಮಂಡಿಸುವಂತೆ ಜಿಲ್ಲಾಧಿಕಾರಿಯವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮರಳು ಸಾಗಾಣಿಕಾ ವಾಹನಗಳಿಗೆ ಜಿ.ಪಿ.ಎಸ್.ಉಪಕರಣ ಅಳವಡಿಸಿ ಮಾಡಲು ಜಿ.ಪಿ.ಎಸ್. ಸೇವಾದಾರರನ್ನು ನೇಮಿಸುವ/ ಮುಂದುವರೆಸುವ ಬಗ್ಗೆಯೂ ಚರ್ಚಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಜಿಲ್ಲಾ ಪಂಚಾಯಿತಿ ಆಡಳಿತ ಉಪ ಕಾರ್ಯದರ್ಶಿ ಎಂ.ಸಿ. ಚಂದ್ರಶೇಖರ್, ತಹಶೀಲ್ದಾರರಾದ ಶಿವಶಂಕರಪ್ಪ, ಮಂಜುನಾಥ್, ನಟೇಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here