ಅಪ್ರಾಪ್ತ ಬಾಲಕಿ ಅಪಹರಣ ಸುಖಾಂತ್ಯ , ಆರೋಪಿಗಳ ಬಂಧನ

0

ಹಾಸನ : ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಗ್ರಾಮ ಒಂದರ ಅಪ್ರಾಪ್ತ ಬಾಲಕಿಯನ್ನು ಆ. 23 ರ ಸಂಜೆ ವೇಳೆ ಅಪಹರಿಸಿದ್ದು ನಗರಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಲಕಿ ಕಾಲೇಜು ಮುಗಿಸಿಕೊಂಡು ಹಾಸನ ದಿಂದ ಬಂದು ತನ್ನ ಹಳ್ಳಿಗೆ ಹೋಗಲು ಹಳ್ಳಿಯ ಸಮೀಪದ ಗೇಟ್ನಲ್ಲಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಕೆಲವರು ಬಾಲಕಿಯನ್ನು

ಅಪಹರಿಸಿದ್ದರು. ಬಾಲಕಿಯನ್ನು ಅಪಹರಿಸಿದ್ದರ ಬಗ್ಗೆ ಬಾಲಕಿಯ ತಂದೆ ನಗರಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂಶಂಕರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ಪೊಲೀಸರು ಅಪಹರಣ ಪತ್ತೆಗೆ ತೀವ್ರಶೋಧ ನಡೆಸಿದ್ದರು.

ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ಕಾರೊಂದು ವೇಗವಾಗಿ ಹೋಗುತ್ತಿದ್ದುದನ್ನು ಕಂಡ ಪೊಲೀಸರು ಕಾರನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಪೊಲೀಸರು ಕಾರನ್ನು ಹಿಂಬಾಳಿಸುತ್ತಿರಯವ ವಿಷಯ ತಿಳಿದ ಅಪಹರಣಕಾರರು ಬಾಲಕಿನ್ನು ಇಳಿಸಿ ಪರಾರಿ ಆಗಿದ್ದರು. ಬಾಲಕಿನ್ನು ರಕ್ಷಿಸಿದ ನಂತರ ಅಪಹರಣಕಾರರ ಚಹರೆ ಬಗ್ಗೆ ಮಾಹಿತಿ ಪಡೆದಿದ್ದರು.

ಶುಕ್ರವಾರ ಸಂಜೆ ಹೊಳೆನರಸೀಪುರ ಮೈಸೂರು ರಸ್ತೆ ಹಳ್ಳಿಮೈಸೂರು ಕ್ರಾಸ್ನಲ್ಲಿ ಕಾರನ್ನು ತಡೆದು ಪರಸನಹಳ್ಳಿಯ ಕಾತ‌ಕ್, ಮೋಹನ್ನುಮಾರ್, ಅರಕಲಗೂಡು ತಾಲ್ಲೂಕು ಬಾನಗುಂದಿಯ ಪ್ರತಾಪ ಅವರನ್ನು ಬಂದಿಸಿ ಅಪಹರಣಕ್ಕೆ ಬಳಸಿದ್ದ ಕೆ.ಎ. 41 ಬಿ. 7166 ಕಾರನ್ನು ವಶಪಡಿಸಿಕೊಂಡಿದ್ದಾರೆ.

ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿ ಮಂಜುನಾಥ್, ವೃತ್ತ ನಿರೀಕ್ಷಕ ಪ್ರದೀಪ್, ನಗರಠಾಣೆ ಎಸ್.ಐ. ಅರುಣ್. ಗ್ರಾಮಾಂತರ ಠಾಣೆ ಎಸ್.ಐ ವಿನಯ್, ರಂಗಸ್ವಾಮಿ, ಪ್ರವೀಣ್‌, ಮಂಜೇಗೌಡ, ಬಸವರಾಜು, ಪ್ರಕಾಶ, ನಾಗೇಶ, ವಸಂತ, ಜಗದೀಶ,ಬಸವೇಗೌಡ, ರೇಣುಕಾ, ನಾಗಪ್ಪ ಅವರು ಪತ್ತೆಕಾರ್ಯದ ತಂಡದಲ್ಲಿದ್ದರು. ಪ್ರಕರಣ ಪತ್ತೆ ಹಚ್ಚಿದ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪ್ರಶಂಶಿಸಿದ್ದಾರೆ.

LEAVE A REPLY

Please enter your comment!
Please enter your name here