ಅಮೃತ ಭಾರತ ಸ್ಟೇಷನ್ ಯೋಜನೆಯಡಿಯಲ್ಲಿ ಹಾಸನ ಜಿಲ್ಲೆಯಲ್ಲಿರುವ ಅರಸೀಕೆರೆ ರೈಲ್ವೆ ನಿಲ್ದಾಣವು ಹುಬ್ಬಳ್ಳಿ, ಮೈಸೂರ್, ಮಂಗಳೂರು ಮತ್ತು ಬೆಂಗಳೂರು ಕಡೆಗೆ ರೈಲು ಮಾರ್ಗಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿದೆ, ಅರಸೀಕೆರೆ ರೈಲ್ವೆ ನಿಲ್ದಾಣವು ಪ್ರಮುಖ ಕೈಗಾರಿಕ ಪ್ರದೇಶಗಳು ಗಣಿಗಾರಿಕೆ ಹಾಗೂ ಕೃಷಿ ವಲಯಗಳಿದ್ದು ಶಿವಮೊಗ್ಗ, ಕಡೂರು ಮತ್ತು ಬೀರೂರು ಕಡೆಗೆ ಚಲಿಸುವ ರೈಲ್ವೆ ಮಾರ್ಗಗಳು ಸಾರ್ವಜನಿಕರಿಗೆ ಅನುಕೂಲಕರವಾದ ಸಂಪರ್ಕಗಳನ್ನ ಒದಗಿಸುತ್ತಿದೆ ಅಮೃತ ಭಾರತ ಯೋಜನೆ ಅಡಿಯಲ್ಲಿ ಅರಸೀಕೆರೆ ರೈಲ್ವೆ ನಿಲ್ದಾಣವನ್ನ 34 ಕೋಟಿ ರೂಗಳ ವೆಚ್ಚದಲ್ಲಿ ಮೇಲ್ತಜ್ಜಿಗೇರಿಸಲಾಗಿದೆ ನವೀಕರಣ ರೈಲು ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು ಹಾಗೂ ಹೊಸ ನಿಲ್ದಾಣದ ಕಟ್ಟಡಗಳನ್ನು ಈ ಕಾಮಗಾರಿಯಲ್ಲಿ ಒಳಗೊಂಡಿರುತ್ತದೆ ಜೊತೆಗೆ ಸ್ಥಳೀಯ ಪರಂಪರೆಯ ಸಂಸ್ಕೃತಿಯನ್ನು ಬಿಂಬಿಸುವ ಕಾಮಗಾರಿಗಳು ಜೊತೆ ಆಗಲಿವೆ. ಅರಸೀಕೆರೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇಂದು ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ರವರು ವಿಡಿಯೋ ಕಾನ್ಫರೆನ್ಸ್ ಮೂಲಕ 508 ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಅರಸೀಕೆರೆಯ ಶಾಸಕರಾದ ಸನ್ಮಾನ್ಯ ಕೆಎಂ ಶಿವಲಿಂಗೇಗೌಡರು, ಬೇಲೂರು ಶಾಸಕರಾದ ಸನ್ಮಾನ್ಯ ಸುರೇಶ್ ಕುಮಾರ್, ಅರಸೀಕೆರಿಯ ನಗರಸಭಾಧ್ಯಕ್ಷರಾದ ಶ್ರೀಯುತ ಗಿರೀಶ್ ರವರು, ತಾಲೂಕು ದಂಡಾಧಿಕಾರಿಗಳಾದ ಶ್ರೀಯುತ ಸಂತೋಷ್ ಕುಮಾರ್, ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸ್ಥಳೀಯ ರೈಲ್ವೆ ಅಧಿಕಾರಿಗಳು ಜೊತೆಗೂಡಿ ಇಂದು ಜ್ಯೋತಿ ಬೆಳಗಿಸುವ ಮುಖಾಂತರ ಅರಸೀಕೆರೆಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಶಾಸಕರಾದ ಕೆಎಂ ಶಿವಲಿಂಗೇಗೌಡರು ರೈಲ್ವೆ ಇಲಾಖೆ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದಿರಬೇಕೆಂದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೈಲ್ವೆ ಸೇತುವೆ ನಿರ್ಮಿಸುವಾಗ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯ ರಸ್ತೆಗಳನ್ನ ವೈಜ್ಞಾನಿಕವಾಗಿ ನಿರ್ಮಿಸದೆ ಗ್ರಾಮಗಳಿಗೆ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಮಳೆ ನೀರುಗಳು ಶೇಖರಣೆಯಾಗುತ್ತಿದ್ದು ಇಲಾಖೆಯು ಗುಣಮಟ್ಟದ ಕಾಮಗಾರಿಗಳನ್ನ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.