ಕೋಡಿ ಮಠಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ, ಶ್ರೀಗಳ ಜೊತೆ ಗುಪ್ತ ಮಾತುಕತೆ

0

ಹಾಸನ: ರಾಜಕೀಯ ನಾಯಕರ ಭವಿಷ್ಯ ನುಡಿಯುವುದರಲ್ಲಿ ಕೋಡಿ ಮಠದ ಶ್ರೀಗಳು ಪ್ರಸಿದ್ಧಿಯಾಗಿದ್ದಾರೆ. ಅಲ್ಲದೆ ರಾಜಕಾರಣಿಗಳು ಶ್ರೀಗಳನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಇಂದು (ಆಗಸ್ಟ್ 16) ಕೃಷಿ ಸಚಿವ ಚಲುವರಾಯಸ್ವಾಮಿ ಇಂದು ಕೋಡಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಸಚಿವ ಚಲುವರಾಯಸ್ವಾಮಿ ಅವರು ಪತ್ನಿ ಧನಲಕ್ಷ್ಮಿ ಜೊತೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿ ಮಠಕ್ಕೆ ಭೇಟಿ ನೀಡಿ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರ ಆಶೀರ್ವಾದ ಪಡೆದರು. ಇನ್ನು ಸಚಿವರು ರಾಜಕೀಯದಲ್ಲಿ ತಮ್ಮ ಮೇಲಿನ ಹಲವು ಆರೋಪಗಳ ನಡುವೆ ಕೋಡಿ ಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

“ಹಾಸನ ಜಿಲ್ಲೆಯ, ಅರಸೀಕೆರೆ ವಿಧಾನಸಭಾ ಕ್ಷೇತ್ರದ ಹಾರನಹಳ್ಳಿಯ ಸುಕ್ಷೇತ್ರ ಶ್ರೀ ಕೋಡಿಮಠಕ್ಕೆ ದಂಪತಿ ಸಮೇತರಾಗಿ ಭೇಟಿ ನೀಡಿ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆವು. ಈ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಆತ್ಮೀಯರಾದ ಶ್ರೀ ಕೆ.ಎಂ.ಶಿವಲಿಂಗೇಗೌಡ ಅವರು ಹಾಗೂ ಅನೇಕ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು”

LEAVE A REPLY

Please enter your comment!
Please enter your name here