ದುಬಾರಿಯಾದರೂ ಕೋಸುಗಡ್ಡೆ ಬಹಳ ಉಪಯೋಗಕಾರಿ

0

ಹಸಿರು ತರಕಾರಿ ಪ್ರಿಯರು ಬಹಳ ಕಡಿಮೆ. ಅದರಲ್ಲೂ ಈಗಿನ ಮಕ್ಕಳಿಗೆ ತರಕಾರಿ ಅದರಲ್ಲೂ ಹಸಿರು ತರಕಾರಿಗಳು ಎಂದರೆ ಅಷ್ಟಕಷ್ಟೇ.
ಹಸಿರು ತರಕಾರಿಗಳಿಂದ ಬಹಳ ಉಪಯೋಗಗಳಿವೆ, ಅದನ್ನು ತಿಳಿದು ನಿಮ್ಮ ಮಕ್ಕಳಿಗೆ, ಕುಟುಂಬದವರಿಗೆ ಹಸಿರು ತರಕಾರಿಯ ಅಮೂಲ್ಯತೆಯನ್ನು ನೀವು ತಿಳಿಸಬೇಕು. ಈ ಹಸಿರು ತರಕಾರಿಯಲ್ಲಿ ಕೋಸುಗಡ್ಡೆ ಬಹಳ ಉಪಯೋಗಕಾರಿ ಇದು ದುಬಾರಿ, ಆದರೆ ನಿಮ್ಮ ಆರೋಗ್ಯವನ್ನು ಕಾಪಾಡಲು ಇದು ಬಹಳ ಸಹಾಯಕಾರಿ.
ಕೋಸುಗಡ್ಡೆಯಲ್ಲಿ ಕ್ಯಾಲ್ಸಿಯಂ ವಿಟಮಿನ್ ಕೆ, ಮೆಗ್ನೀಷಿಯಂ, ಜಿಂಕ್ ಮತ್ತು ಫಾಸ್ಫರಸ್ ಅಂಶ ಹೆಚ್ಚು ಪ್ರಮಾಣದಲ್ಲಿರುವುದರಿಂದ ನಾವು ಹಲವಾರು ಲಾಭಗಳನ್ನು ಪಡೆಯಬಹುದು.

ಪ್ರಯೋಜನಗಳು:

• ರಕ್ತನಾಳದ ಕಾಯಿಲೆಗೆ ಕೋಸುಗಡ್ಡೆ ಮದ್ದು:
ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯದಿದ್ದರೆ ರಕ್ತನಾಳದ ಕಾಯಿಲೆಯಿಂದ ತೊಂದರೆ ಪಡುತ್ತಿವಿ. ಇಂತಹ ಕಾಯಿಲೆ ಇರುವವರು ಕೋಸುಗಡ್ಡೆ ಸೇವಿಸಿದರೆ ಈ ಕಾಯಿಲೆಯಿಂದ ಪಾರಾಗಬಹುದು.

• ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ:
ವಯಸ್ಸಾದವರಿಗೆ ಉಸಿರಾಟದ ಸಮಸ್ಯೆ ಸಹಜ. ಶ್ವಾಸಕೋಶವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕೆಂದರೆ ಕೋಸುಗಡ್ಡೆ ಸೇವಿಸಬೇಕು.

• ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ:
ಕೋಸುಗಡ್ಡೆ ಯಲ್ಲಿ ಕೊಬ್ಬಿನ ಅಂಶ ಕಡಿಮೆ , ಫೈಬರ್ ಅಂಶ ಬಹಳವಿದೆ ಹಾಗಾಗಿ ಇದು ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ. ಇದರಿಂದ ನಾವು ತೂಕ ಕೂಡ ಇಳಿಯಬಹುದು.

ಕೋಸುಗಡ್ಡೆ ಯನ್ನು ನೀವು ಸೂಪ್, ಸಲಾಡ್ ಅಥವಾ ಗೊಜ್ಜಿನ ರೀತಿ ತಯಾರಿಸಿಕೊಂಡು ಸೇವಿಸಬಹುದು. ಹಸಿರು ತರಕಾರಿಗಳಿಂದ ನಿಮಗೆ ಹಲವಾರು ಲಾಭಗಳು ದೊರೆಯುತ್ತದೆ ಹಾಗಾಗಿ ಹಸಿರು ತರಕಾರಿಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಿ.

ತನ್ವಿ. ಬಿ

LEAVE A REPLY

Please enter your comment!
Please enter your name here