ಗ್ರಾಮಸ್ಥರು ರಸ್ತೆಯಲ್ಲಿ ರಾಗಿ ತೆನೆಯ ಸಸಿ ನೆಟ್ಟು ಆಕ್ರೋಶ

0

ಹಾಸನ /ಚನ್ನರಾಯಪಟ್ಟಣ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡ ಗನ್ನಿ ಗ್ರಾಮದಲ್ಲಿ ರಸ್ತೆ ದುರಸ್ತಿ ಮಾಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿ ರಾಗಿ ತೆನೆಯ ಸಸಿ ನೆಟ್ಟು ಆಕ್ರೋಶ ಅಭಿವ್ಯಕ್ತಿ ಪಡಿಸಿದ್ದಾರೆ , ಗ್ರಾಮದ ಹೊಳೆಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವ ರಸ್ತೆ ಹಾಳಾಗಿದೆ . ಮಳೆ ನೀರು, ಚರಂಡಿ ನೀರು ರಸ್ತೆಯಲ್ಲಿ ಮಿಂದು ಕೆಸರು ಗದ್ದೆಯಂತಾಗಿ ಪರಿವರ್ತನೆ ಗೊಂಡಿದೆ , ಭಕ್ತರಿಗೆ / ಹೊಲ, ಗದ್ದೆಗಳಿಗೆ ತೆರಳಲು ರೈತರಿಗೆ ತೊಂದರೆಯಾಗಿದೆ.,
ರಸ್ತೆಗೆ ಡಾಂಬರು ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ .

– ನಲ್ಲೂರು ಗ್ರಾಮ ಪಂಚಾಯಿತಿ , ಚನ್ನರಾಯಪಟ್ಟಣ ತಾಲ್ಲೂಕು , ಹಾಸನ ಜಿಲ್ಲೆ
– ( ಲೋಕೋಪಯೋಗಿ ಇಲಾಖೆ )

LEAVE A REPLY

Please enter your comment!
Please enter your name here