ಡಿಸಿ ಸೇರಿ ಎಲ್ಲಾ ಕಡೆ ಮಹಿಳಾ ಅಧಿಕಾರಿಗಳೆ ಇದ್ದೀರಿ ಚನ್ನಾಗಿ ಕೆಲ್ಸ ಮಾಡಿ ಸಾಕು

0

ಹಾಸನದ ೨೫ ಹಳ್ಳಿಗಳು ತಾಯಿ ಇಲ್ಲದ ತಬ್ಬಲಿ ಆಗಿದೆ: ಹೆಚ್.ಡಿ. ರೇವಣ್ಣ

ಹಾಸನ: ಜಿಲ್ಲೆಯಲ್ಲಿ ಡಿಸಿ ಸೇರಿ ನಾನಾ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳೆ ಇರುವುದು ನಮಗೇನು ತೊಂದರೆ ಇಲ್ಲ. ಆದರೇ ಉತ್ತಮ ಕೆಲಸ ಮಾಡಿ ಸಾಕು. ಇನ್ನು ನಗರಪಾಲಿಕೆಗೆ ೨೫ ಹಳ್ಳಿಗಳ ಸೇರಿಸುವುದಾಗಿ ಇನ್ನು ಅತಂತ್ರ ಸ್ಥಿತಿಯಿಂದ ಈಗ ಈ ಗ್ರಾಮಗಳು ತಾಯಿ ಇಲ್ಲದ ತಬ್ಬಲಿ ಆಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬೇಸರವ್ಯಕ್ತಪಡಿಸಿದರು.

 ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿ ಸಭೆಯಲ್ಲಿ ಸಂಸದರ ಪ್ರಜ್ವಲ್ ರೇವಣ್ಣರವರ ಅಧ್ಯಕತೆಯಲ್ಲಿ ಜರುಗಿದ್ದು, ಮೊದಲು ರೈತರಿಂದ ದೂರುಗಳನ್ನು ಸ್ವೀಕರಿಸಿ ಕೆಲಸ ಸಮಯ ಅವರೊಂದಿಗೆ ಸಮಸ್ಯೆ ಕುರಿತು ಪ್ರಸ್ತಾಪಿಸಿ ಸರಿಪಡಿಸುವ ಭರೆವಸೆ ನೀಡಿದರು. ಸರಿಯಾದ ರೀತಿ ವಿದ್ಯುತ್ ನೀಡದೆ ಸಾಕಷ್ಟು ತೊಂದರೆ ಉಂಟುಮಾಡುತ್ತಿದ್ದಾರೆ ಈಗಾಗಲೇ ಮಳೆ ಕೊರತೆಯಿಂದಾಗಿ ಬೆಳೆಗಳೆಲ್ಲ ನಾಶವಾಗುತ್ತಿದೆ ಆದರೆ ಸರಿಯಾದ ವಿದ್ಯುತ್ತನ್ನು ಕೂಡ ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿ ಮುಂದೆ ರೈತರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಸಮರ್ಪಕವಾಗಿ ವಿದ್ಯುತ್ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.

   ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಇದೆ ವೇಳೆ ಹೊಳೆನರಸೀಪುರ, ಹಂಗರಹಳ್ಳಿ ರೈಲ್ವೆ ಮೇಲ್ ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಹಿಂದೆಯೂ ಕೂಡ ಕೇಂದ್ರ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ ಅವರು ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ. ಈಗಾಗಲೇ ರಸ್ತೆ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರನ್ನು ಕೂಡ ಭೇಟಿಯಾಗಿ ಚರ್ಚೆ ನಡೆಸಲಾಗಿದೆ ಅವರು ಅದನ್ನ ಪುನರ್ ನಿರ್ಮಾಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಅಲ್ಲದೆ ಹಾಸನ ರೈಲ್ವೆ ಮೇಲ್ ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಬಗ್ಗೆಯೂ ಕೂಡ ಗಮನಹರಿಸಲಾಗಿದೆ ಎಂದರು. 

ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಕೇಂದ್ರದ ಸಚಿವರನ್ನ ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕಿದ್ದು, ಟೆಂಡರ್ ಪೂರ್ಣಗೊಂಡ ನಂತರ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಆಲೂರು ಬೇಲೂರು ಚಿಕ್ಕಮಂಗಳೂರು ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾದಿನ ಪ್ರಕ್ರಿಯೆ ಆರಂಭವಾಗಲಿದೆ. ಇದಲ್ಲದೆ ಹೊಲೆನಸಿಪುರ ಬೈಪಾಸ್ ರಸ್ತೆ ಹಾಸನ ಬೇಲೂರು ಬೈಪಾಸ್ ರಸ್ತೆ ಹಾಗೂ ಇನ್ನೂ ಹಲವು ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಅವರು ಈ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

   ಜಿಲ್ಲಾಧಿಕಾರಿಯವರ ಬಳಿ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದ ವಿಷಯ ಇತ್ತು. ದುದ್ದ ಶಾಂತಿಗ್ರಾಮ ಹೋಬಳಿಯ ಹಳ್ಳಿಗಳಲ್ಲಿ ೩೩೦ ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ವಿಷಯ ಇದ್ದು, ಕೆಲವು ಗ್ರಾಮಗಳಲ್ಲಿ ಭೂ ಸ್ವಾಧೀನ ಸಮಸ್ಯೆ ಇತ್ತು. ಹೇಮಾವತಿ ನದಿಯಿಂದ ಒಂಟಿಗುಡ್ಡಕೆ ನೀರು ಅಲ್ಲಿಂದ ಜಾಕೇನಹಳ್ಳಿ ಗೆ ನೀರು ತುಂಬಿಸುವ ಯೋಜನಗೆ ಲ್ಯಾಂಡ್ ಅಕ್ಚೀಷನ್ ಕಾಚೇನಹಳ್ಳಿ ಎರಡು ಹಾಗೂ ಮೂರನೇ ಹಂತದ ಯೋಜನಗೆ ೬೮ ಎಕರೆ ಭೂ ಸ್ವಾಧೀನ ಸಮಸ್ಯೆ ಇತ್ತು. ಯಗಚಿ ನಾಲೆ ಯೋಜನೆಯಡಿ ಕೌಶಿಕ ಸುತ್ತಲಿನ ಹಳ್ಳಿಗಳಿಗೆ ೮ ಸಾವಿರ ಎಕರೆ ನೀರಾವರಿ ಯೋಜನೆ ಅಳವಡಿಸುವ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗಿದೆ. ಹೇಮಾವತಿ ನದಿಯಿಂದ ದಂಡಿಗನಹಳ್ಳಿ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದೆ. ೨೪೯ ಟ್ಯಾಂಕ್ ಕಟ್ಟಿ ಶೀಘ್ರವಾಗಿ ಟ್ಯಾಂಕ್ ಕಟ್ಟಿ ಕುಡಿಯುವ ನೀರಿನ ಯೋಜನೆ ಮಾಡಲು ಸೂಚನೆ ನೀಡಿದ್ದೆನೆ. ನೀರಾವರಿ ಯೋಜನೆ ಸಂಬಂಧ ನೀರಾವರಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿರುವುದಾಗಿ ಹೇಳಿದರು.

ಆಲೂರು- ಬೇಲೂರು ರೈಲ್ವೆ ಮಾರ್ಗದ ಕೆಲಸ ಬೇಗ ಮಾಡಿಸಲು ಪ್ರಧಾನ ಮಂತ್ರಿ ಬಳಿ ಮಾತನಾಡಿದ್ದೆವೆ. ಹಾಸನ ಬೇಲೂರು ನಾಲ್ಕು ಪಥದ ರಸ್ತೆ ಮಾಡಲು ೬೮೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಸ್ತೆ ಮಾಡುತ್ತಿದ್ದೆವೆ. ಯಡೇಗೌಡನಹಳ್ಳಿ- ಬಿಳಿಕೆರೆ ನಾಲ್ಕು ಪಥದ ರಸ್ತೆ ಮಾಡಿಸಲು ಒಪ್ಪಿಗೆ ಸಿಕ್ಕಿದೆ. ಹಾಸನ- ಮಾರೇನಹಳ್ಳಿ ೬ ಕಿ.ಮಿ ರಸ್ತೆ ಬಾಕಿ ಇದೆ. ವಿದ್ಯುತ್ ಕೊಡುವ ಮುಂಚೆ ಪ್ರತಿ ಪಂಚಾಯತಿ ರೈತರಿಗೆ ಮಾಹಿತಿ ಕೊಡಲು ತಿಳಿಸಿದ್ದೆನೆ ಎಂದರು. ಹಾಸನ ಜಿಲ್ಲೆಗೆ ೧೩ ಸಾವಿರ ಟಿಸಿ ಬೇಡಿಕೆ ಇದ್ದು ಅದನ್ನು ಬಜೆಟ್ ಕಾರಣ ಕೊಡುತ್ತಿಲ್ಲ ಎಂದು ಆರೋಪಿಸಿದರು.

   ಇನ್ನು ಹಾಸನ ನಗರವು ನಗರಪಾಲಿಕೆ ಆಗುತ್ತಿರುವುದರಿಂದ ೩೫ ಹಳ್ಳಿಗಳು ಸೇರುತ್ತಿದೆ. ಆದರೇ ಈಗ ಆ ಹಳ್ಳಿಯ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದು, ಈ ಗ್ರಾಮಗಳು ನಗರಸಭೆಗೂ ಗ್ರಾಮ ಪಂಚಾಯಿತಿಗೆ ಸೇರದೇ ತಾಯಿ ಇಲ್ಲದ ತಬ್ಬಲಿ ರೀತಿ ಆಗಿದೆ ಎಂದರು. ಅದಕ್ಕಾಗಿಯೇ ಸೇರುವವರೆಗು ನಗರಸಭೆಯೆ ಇದರ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ಈಗಾಗಲೇ ನಗರಸಭೆ ಆಯುಕ್ತರಿಗೆ ಹೇಳಿರುವುದಾಗಿ ಹೆಚ್.ಡಿ. ರೇವಣ್ಣ ತಿಳಿಸಿ, ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

  ಸಭೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಎಸ್ ಮಾರುತಿ, ತಹಸೀಲ್ದಾರ್ ಶ್ವೇತಾ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here