ಹೊಳೆನರಸೀಪುರ: ದರಕಾಸ್ತಿನ ಜಮೀನು ತಮ್ಮ ಪರವಾಗಿ ಆಗಲಿಲ್ಲ ಎನ್ನುವ ಕಾರಣಕ್ಕೆ ಜಮೀನಿನಲ್ಲಿ ಬೆಳೆದಿದ್ದ ನೆಲೆಗಡಲೆ, ತೊಗರಿ,ಮೆಣಸಿನಕಾಯಿ, ಸೀಮೆ ಹುಲ್ಲನ್ನು ನಾಶ ಮಾಡಿ ಬಡ ರೈತನಿಗೆ ಲಕ್ಷಾಂತರ ರೂ ನಷ್ಟಉಂಟು ಮಾಡಿದ ಘಟನೆ ಹಳ್ಳಿಮೈಸೂರು ಹೋಬಳಿ ಗುಲಗಂಜಿಹಳ್ಳಿ ದಾಖಲೆಯ ಮೂಡಲಕೊಪ್ಪಲು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ದಿವಂಗತ ಜವರೇಗೌಡನಿಗೆ ಸವರ್ೆ ನಂಬರ್ 18 ಹಾಗೂ 23 ರಲ್ಲಿ 2.1 ಎಕರೆ ಜಮೀನು 1992/93ರಲ್ಲಿ ದರಕಾಸ್ತಿನಲ್ಲಿ ದೊರೆತಿತ್ತು. ಅಂದಿನಿಂದ ಜವರೇಗೌಡ ಬೇಸಾಯ ಮಾಡುತ್ತಿದ್ದರು.
ಜವರೇಗೌಡ ನಿಧನ ನಂತರ ಆ ಜಮೀನು ಪುತ್ರ ರಾಜೇಗೌಡನ ಹೆಸರಿಗೆ ನಿಯಮದಂತೆ ವಗರ್ಾವಣೆ ಆಗಿತ್ತು.ಅಂದಿನಿಂದ ರಾಜೇಗೌಡ ಜಮೀನಿನಲ್ಲಿ ಮನೆ ಕಟ್ಟಿಕೊಂಡು, ಬ್ಯಾಂಕಿನಲ್ಲಿ ಸಾಲಪಡೆದು ಬೇಸಾಯ ಮಾಡುತ್ತಿದ್ದರು. 2018 ರಲ್ಲಿ ರಾಜೇಗೌಡರ ಚಿಕ್ಕಪ್ಪನ ಮಕ್ಕಳು ಈ ಜಮೀನಿನಲ್ಲಿ ನಮಗೂ ಭಾಗ ಬರಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ವಿಚರಣೆ ನೆಡೆದು ಕೆಲೆ ದಿನಗಳ ಹಿಂದೆ ದಾವೆ ವಜಾ ಆಗಿತ್ತು.
ತೀಪರ್ು ನಮ್ಮ ಪರವಾಗಿ ಬರಲಿಲ್ಲ ಎಂದು ಬೇಸರಗೊಂಡ ರಾಜೇಗೌಡನ ಚಿಕ್ಕಪ್ಪನ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಗ್ರಾಮದ ಒಂದಿಬ್ಬರು ರಾಜೇಗೌಡ ಮನೆಯಲ್ಲಿ ಇಲ್ಲದ ವೇಳೆ ಜೆಸಿಪಿ ತಂದು ಮನೆಯಲ್ಲಿದ್ದ ರಾಜೇಗೌಡನ ಪತ್ನಿ ಗೌರಮ್ಮ, ಅಜ್ಜಿ ಕಾಳಮ್ಮ ಅವರನ್ನು ಹೆದರಿಸಿ ಜೆಸಿಬಿ ಹಾಗೂ ಟ್ರಿಲರ್ ಅನ್ನು ನೆಲಕಡಲೆ, ತೊಗರಿ, ಮೆಣಸಿನಕಾಯಿ, ಸೀಮೆ ಹುಲ್ಲು ಬೆಳೆದಿದ್ದ ಜಮೀನಿನ ಮೇಲೆ ಓಡಾಡಿಸಿ ಬೆಳೆ ನಾಶ ಮಾಡಿದ್ದಾರೆ. ಬಂಡು ಕಲ್ಲುಗಳನ್ನು ಒಡೆದು ಹಾಕಿದ್ದಾರೆ.
ವಿಷಯ ತಿಳಿದ ರಾಜೇಗೌಡ 112 ಪೊಲೀಸ್ ವಾಹನಕ್ಕೆ ಕರೆಮಾಡಿ ವಿಷಯ ತಿಳಿಸುತ್ತಿದ್ದಂತೆ ಪೊಲೀಸರು ಬಂದು ಹೆದರಿಸಿ ಕಳುಹಿಸಿದ್ದಾರೆ. ಪೊಲೀಸರು ಸಕಾಲಕ್ಕೆ ಬಾರದಿದ್ದರೆ ಅವರು ನಮ್ಮ ಮನೆಯನ್ನು, ತೆಂಗಿನಮರಗಳನ್ನು ಹಾಗೂ ಕಬ್ಬನ್ನು ಸಂಪೂರ್ಣ ನಾಶ ಮಾಡುತ್ತಿದ್ದರು ಎಂದು ರಾಜೇಗೌಡ ದೂರಿದ್ದಾರೆ. ಈ ಘಟನೆ ಸಂಭಂದ ರಾಜೇಗೌಡನ ಚಿಕ್ಕಪ್ಪನ ಮಕ್ಕಳಾದ ತಾಯಮ್ಮ, ಸಾವಿತ್ರಮ್ಮ, ಕಾವೇರಮ್ಮ, ಸಾಕಮ್ಮ, ಅಳಿಯಂದಿರಾದ ರಾಮೇಗೌಡ, ರೇವಣ್ಣ ಹಾಗೂ ಇವರ ಮಕ್ಕಳಾದ ಕರಿಗೌಡ, ಸತೀಶ್ಗೌಡ, ಲೋಕೇಶ್, ರವಿಕುಮಾರ ಗ್ರಾಮದ ಶಿವಲಿಂಗೇಗೌಡ ಹಾಗೂ ಸಾಕರಾಜನ ವಿರುದ್ದ ಹಳ್ಳಿಮೈಸೂರು ಪೊಲೀಸರಿಗೆ ದೂರು ನೀಡಿದ್ದಾರೆ.
ನನನನಗಾಗಲಿ ಹಾಗೂ ನನ್ನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ಆದರೆ ನಾನು ದೂರಿನಲ್ಲಿ ತಿಳಿಸಿರುವ ವ್ಯಕ್ತಿಗಳೇ ಹೊಣೆ ಎಂದು ವಿವರಿಸಿದ್ದಾರೆ. ಗ್ರಾಮದ ಮುಖಂಡ ಜವರೇಗೌಡ, ರೈತ ಸಂಘದ ಮುಖಂಡ ಪುಟ್ಟರಾಜು, ನಿಂಗೇಗೌಡ, ಕೃಷ್ಣೇಗೌಡ, ಲತಾ ಸ್ಥಳದಲ್ಲಿದ್ದು ಬೆಳೆನಾಶವನ್ನು ಖಂಡಿಸಿದರು�