ನನ್ನ ಜೊತೆ ಶಾಸಕ ಸ್ವರೂಪ್ ಸೇರಿ ಹಾಸನದ ಅಭಿವೃದ್ಧಿ ಮಾಡುವೆ : ಪ್ರಜ್ವಲ್ ರೇವಣ್ಣ ಭರವಸೆ

0

ಹಾಸನ: ನನ್ನ ಜೊತೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಸೇರಿ ಹಾಸನವನ್ನು ಅಭಿವೃದ್ಧಿ ಪತದತ್ತ ನಾನು ಕೊಂಡೂಯ್ಯುತ್ತೇವೆ ಎಂದು ಸಂಸದ ಪಜ್ವಲ್ ರೇವಣ್ಣ ಭರವಸೆ ನುಡಿದರು.
ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವರ್ತಕರ ಹಿತಾರಕ್ಷಣಾ ಸಮಿತಿಯಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೭೬ನೇ ಸ್ವಾತಂತ್ರ್ಯ ದಿನಾಚರೆಣೆಯಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ೭೭ ವರ್ಷದ ಸಾಧನೆ ಏನು ಎಂದು ಕೇಳಿದರೇ ಇಡೀ ಜಗತ್ತೆ ತಿರುಗಿ ನೋಡುವಂತಹ ಅದ್ಭುತವಾಗಿ ದೇಶ ಕಟ್ಟಿದ್ದೀವಿ ಎಂಬುವುದು ನಮ್ ಸಾಧನೆ. ಎಕನಮಿಕ್ನಲ್ಲಿ ನಾವು ದೇಶದಲ್ಲಿಯೇ ೫ನೇ ಸ್ಥಾನದಲ್ಲಿದ್ದೇವೆ. ಭಾರತ ದೇಶ ಎಂದರೇ ತಲೆ ಎತ್ತಿಕೊಂಡು ನೋಡುವಂತಹ ಮಟ್ಟಕ್ಕೆ ತಲುಪಿದೇವೆ.

ಅದಕ್ಕೆಲ್ಲ ಕಾರಣಕರ್ತರು ರಾಜಕಾರಣಿಗಳಲ್ಲ. ನಮ್ಮ ದೇಶದಲ್ಲಿರುವಂತಹ ಜನರ ಶ್ರಮವೇ ಕಾರಣ. ಈ ಸ್ವಾತಂತ್ರ ದಿನಾಚರಣೆ ಎಂದರೇ ರಾಜಕಾರಣಿಗಳು ಆಚರಣೆ ಮಾಡುವ ದಿನವಲ್ಲ. ಸಾರ್ವಜನಿಕರ ಜೊತೆ ನಿಂತುಕೊಂಡು ಮುಂದಿನ ದೇಶ ಹೇಗೆ ಕಟ್ಟಬೇಕು ಎಂಬುದನ್ನು ವಿಚಾರ ಮಾಡುವ ದಿನವಾಗಿದೆ ಎಂದರು. ಮುಸಲ್ಮಾನ, ಕ್ರೈಸ್ತಾ, ಜೈನ, ಹಿಂದೂ ಸಮಾಜ ಇರಬಹುದು ಎಲ್ಲಾ ಸೇರಿ ಒಗ್ಗಟ್ಟು ಮಾಡುತ್ತಿರುವುದು ಈ ಧ್ವಜಾ. ಇಂದು ಜಾತಿ ಜನಾಂಗ ಬರುವುದಿಲ್ಲ.

ದೇಶ ನಮಗೆ ಏನು ಕೊಟ್ಟಿದೆ ಆಗೇ ದೇಶಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುವುದನ್ನು ನೋಡುತ್ತದೆ ಎಂದು ಕಿವಿಮಾತು ಹೇಳಿದರು. ಜಾತಿ ಜನಾಂಗ ಹೊರತುಪಡಿಸಿ ನಾವೆಲ್ಲರೂ ಭಾರತವನ್ನು ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಈ ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಏನಾದರೂ ಸಮಸ್ಯೆ ಇದ್ದರೇ ನನ್ನ ಕಚೇರಿಗೆ ಬಂದು ಕುಳಿತುಕೊಂಡು ಈ ಕೆಲಸ ಆಗಬೇಕೆಂದು ಹೇಳುತ್ತಿದ್ದರು. ಆ ತಂಡ ಬಹಳಷ್ಟು ಶ್ರಮಿಸಿ ಈ ಕಟ್ಟಿನ ಮಾರುಕಟ್ಟೆಯನ್ನು ಉಳಿಸಿದೆ. ಮುಂದೆ ಈ ಮಾರುಕಟ್ಟೆ ನಂಬರ್ ಒನ್ ಸ್ಥಾನಕ್ಕೆ ಬರಬೇಕು ಎಂದು ಹೇಳಿದರು.

ಇದೆ ವೇಳೆ ಐದು ಜನ ಪೌರಕಾರ್ಮಿಕರಿಗೆ ಹಾಗೂ ಸಂಜೀವಿನಿ ಆಸ್ಪತ್ರೆ ಮೂಳೆ ತಜ್ಷರಾದ ಡಾ|| ದೀಪಕ್ ಮತ್ತು ಪತ್ರಕರ್ತರಾದ ಪಿ.ಎ. ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಆರ್. ಮೊಹನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ನಗರಸಭೆ ಸದಸ್ಯ ನವೀನ್ ನಾಗರಾಜು, ತರಕಾರಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಹೆಚ್.ಆರ್. ಆನಂದ್, ವಿವಿಸಿ ನ್ಯೂಸ್ ಮುಖ್ಯ ಸಂಪಾದಕ ಜಗದೀಶ್ ಚೌಡಹಳ್ಳಿ, ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್, ಹೆಚ್.ಆರ್. ವೆಂಕಟೇಶ್, ರಮೇಶ್, ನಗರಸಭೆ ಸದಸ್ಯ ರಪೀಕ್, ವಿಷ್ಣು ಸೇನೆ ಅಧ್ಯಕ್ಷರಾದ ಮಹಂತೇಶ್, ನಗರಸಭೆ ಮಾಜಿ ಸದಸ್ಯ ಹೆಚ್.ಬಿ. ಗೋಪಾಲ್, ಸುಬ್ಬು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here