ಫೇಸ್ಬುಕ್ ನಲ್ಲಿ ನಕಲಿ ಸ್ನೇಹಿತರ ಹಾವಳಿ

0

ಇತ್ತೀಚೆಗೆ ಫೇಸ್ಬುಕ್ನಲ್ಲಿ ಗಣ್ಯ ವ್ಯಕ್ತಿಗಳ,ಸೆಲೆಬ್ರಿಟಿ ವ್ಯಕ್ತಿಗಳ ಮತ್ತು ಸ್ವಲ್ಪ ಗುರುತಿಸಿಕೊಂಡಿರುವ ವ್ಯಕ್ತಿಗಳ ಮತ್ತು ಪೊಲೀಸರ ಹೆಸರಿನಲ್ಲಿಯೂ ಸಹ ನಕಲಿ ಖಾತೆಯನ್ನು ತೆರೆದು ನಂತರ ಅವರ ಫೋಟೋವನ್ನು ಪ್ರೊಫೈಲ್ ಪಿಕ್ ಗೆ ಹಾಕಿಕೊಳ್ಳುತ್ತಾರೆ. ಮತ್ತು ಅವರಿಗೆ ಇರುವ ಕೆಲವು ಸ್ನೇಹಿತರನ್ನು ತಮ್ಮ ಖಾತೆಗೆ ಸ್ನೇಹಿತರನ್ನಾಗಿ ಸೇರಿಸಿಕೊಳ್ಳುತ್ತಾ ಹೋಗುತ್ತಾರೆ.

ನಂತರ ಅವರಲ್ಲಿ ಕೆಲವರನ್ನು ಗುರುತಿಸಿ ಅವರಿಂದ ಸಹಾಯ ಕೇಳುವ ನೆಪದಲ್ಲಿ ಹಣ ಪೀಕುವ ಕೆಲಸ ಶುರು ಮಾಡಿಕೊಂಡಿದ್ದಾರೆ. ಯಾರೇ ಆಗಲಿ ಮೆಸೆಂಜರ್ ನಲ್ಲಿ ಹಣ ಕೇಳಿದ ತಕ್ಷಣ ನೀಡದೆ ದಯವಿಟ್ಟು ಅವರಿಗೆ ಒಮ್ಮೆ ಕರೆ ಮಾಡಿ ಖಚಿತಪಡಿಸಿಕೊಂಡು ಮುಂದುವರೆಯುವುದು ಒಳ್ಳೆಯದು. ಒಮ್ಮೆ ಸ್ನೇಹಿತರಾದವರು ಮತ್ತೆ ಅದೇ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ದಯವಿಟ್ಟು ಪರಿಶೀಲಿಸಿ ಅಕ್ಸೆಪ್ಟ್ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಒಂದಲ್ಲ ಒಂದು ರೀತಿ ಅವರಿಂದ ಸಮಸ್ಯೆ ಉಂಟಾಗುತ್ತದೆ.

ಇದಕ್ಕಾಗಿ ಇವರಿಗೆ ಉತ್ತರ ಭಾರತದ ಕೆಲವು ರಾಜ್ಯದ ಯುವಕರುಗಳಿಗೆ ತರಬೇತಿ ನೀಡಲಾಗುತ್ತಿದೆ. ಮತ್ತು ಇವರೆಲ್ಲಾ ಮೊಬೈಲ್, ಸಿಮ್ ಕಾರ್ಡ್ ,ಲ್ಯಾಪ್ಟಾಪ್ ಮತ್ತು ಅದಕ್ಕೆ ಬೇಕಾದ ಬ್ಯಾಂಕ್ ಖಾತೆಗಳನ್ನು ಒದಗಿಸಿಕೊಂಡು ಸೈಬರ್ ಕ್ರೈಂ ಮಾಡುತ್ತಾರೆ ಎಂಬ ಮಾಹಿತಿ ಸೈಬರ್ ಕ್ರೈಂ ಪೋಲಿಸರಿಗೆ ಗೊತ್ತಾಗಿದೆ.

ದಯವಿಟ್ಟು ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಮುಂಚೆ ಆ ಖಾತೆ ಒರಿಜಿನಲ್ ಖಾತೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

ಫೇಸ್‌ಬುಕ್ ಜಾಲತಾಣದಲ್ಲಿ ಸ್ನೇಹಿತರು, ಪರಿಚಯಸ್ಥರಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ಎಚ್ಚರ, ಖಾತೆಯನ್ನು ಬಚಿತಪಡಿಸಿ ಕೊಳ್ಳದೇ ಕೇವಲ ಪ್ರೊಫೈಲ್ ಫೋಟೊ ನೋಡಿ ಅವರನ್ನು ಅಕ್ಸೆಪ್ಟ್ ಮಾಡಿಕೊಂಡರೆ ದುಬಾರಿ ಬೆಲೆ ತೆರಬೇಕಾಗಬಹುದು! ಕರೊನಾ ಸಂಕಷ್ಟದ ಸಂದರ್ಭದಲ್ಲೇ ನಕಲಿ ಖಾತೆಗಳನ್ನು ಸೃಷ್ಟಿಸಿ ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಸೈಬರ್ ವಂಚಕರು. ಆರಂಭದಲ್ಲಿ ಗಣ್ಯರು, ಶ್ರೀಮಂತರು, ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು.

ಅವರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ,ಅಸಂ ಖಾತೆಗೆ ಲಕ್ಷಕ್ಕೆ ಕಳಿಸುತ್ತಾರೆ. ನಂತರ ಚಾಟ್ ಶುರು ಮಾಡಿ, ತುರ್ತಾಗಿ ಹಣದ ಅಗತ್ಯವಿದೆ ಎಂದು ನಂಬಿಸಿ, 5 ರಿಂದ 20 ಸಾವಿರ ರೂಪಾಯಿಗಳನ್ನು ಗೂಗಲ್ ಪೇ, ಫೋನ್ ಪೇನಂತಹ ವ್ಯಾಲೆಟ್ ಗೆ ಜಮಾ ಮಾಡುವಂತೆ ಮನವಿ ಮಾಡುತ್ತಾರೆ. ಅನೇಕ ಮಂದಿ ಹಣ ಜಮಾ ಮಾಡಿದ ಮೇಲೆ ಫೋನ್ ಮಾಡಿ ವಿಚಾರಿಸಿದಾಗ ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದೆ. ಅಷ್ಟರಲ್ಲಿ ಲಕ್ಷಾಂತರ ರೂಪಾಯಿ ಸೈಬರ್ ಕಳ್ಳರ ಪಾಲಾಗಿರುತ್ತದೆ. ಇಂದ ಹಲವು ಪ್ರಕರಣಗಳು ಸೈಬರ್ ಹೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬದೀಮರು ಸಾಮಾನ್ಯರ ಬಾತೆಗಳನ್ನು ನಕಲು ಮಾಡಿ, ಅವರ ಸ್ನೇಹಿತರಿಂದ ಹಣ ಕೀಳುತ್ತಿದ್ದಾರೆ.

LEAVE A REPLY

Please enter your comment!
Please enter your name here