ಬೂವನಹಳ್ಳಿ ಹಾಗೂ ಬೂವನಹಳ್ಳಿ ಏರ್ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಬೂವನಹಳ್ಳಿ ಮುಖ್ಯ ರಸ್ತೆ ಬದಿಗಳಲ್ಲಿ ಕಸ ಎಸೆಯುತ್ತಿದವರನ್ನು ಪ್ರಶ್ನಿಸಿದ ಸ್ಥಳೀಯರು

0

ಬೂವನಹಳ್ಳಿ ಹಾಗೂ ಬೂವನಹಳ್ಳಿ ಏರ್ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಬೂವನಹಳ್ಳಿ ಮುಖ್ಯ ರಸ್ತೆ ಬದಿಗಳಲ್ಲಿ ಕಸ ಎಸೆದು, ಮೂಗು ಮುಚ್ಚಿಕೊಂಡು ಸಂಚಾರ ಮಾಡುವಂತ ಪರಿಸ್ಥಿತಿ ಸೃಷ್ಟಿ ಆಗಿದೆ. ಬೂವನಹಳ್ಳಿ ಭಾರತಿ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಮಳೆ ನೀರು ಕೃಷಿ ಹೊಂಡ ಹೆಸರಿನಲ್ಲಿ ಕೆಮಿಕಲ್ ಮಿಶ್ರಿತ ನೀರನ್ನು ಹೊಂಡ ಮಾಡಿರುತ್ತಾರೆ.

ಇದರಿಂದ ಬೂವನಹಳ್ಳಿ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆಯಿಂದ ಕೂಡಿದೆ. ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಕೂಡ ಇದೆ. ಕೂಡಲೇ ಭಾರತಿ ಕಾಫಿ ಕ್ಯೂರಿಂಗ್ ವರ್ಕ್ಸ್ ಹಾಗೂ ಸಂಬಂಧ ಪಟ್ಟ ಸರ್ಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ಮನವಿ.

LEAVE A REPLY

Please enter your comment!
Please enter your name here