ರೈತ ದಿನಾಚರಣೆ ಅಂಗವಾಗಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಕೃಷಿ ಸಪ್ತಾಹ ಆಚರಣೆ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಅಕ್ಟೋಬರ್ ಒಂದರಿಂದ ಹದಿನಾರರವರೆಗೆ ಹಮ್ಮಿಕೊಳ್ಳಲಾಗಿದ್ದು ಅದರ ಅಂಗವಾಗಿ ಇಂದು ಬ್ಯಾಂಕ್ ಆಫ್ ಬರೋಡಾ ಹಾಸನ ಮುಖ್ಯ ಶಾಖೆಯಲ್ಲಿ ರೈತರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬ್ಯಾಂಕ್ ಆಫ್ ಬರೋಡಾದಿಂದ ಎಲ್ಲಾ ಕೃಷಿ ಅಧಾರಿತ ಅವಶ್ಯಕತೆಗಳಿಗಾಗಿ ವ್ಯಾಪಕ ಶ್ರೇಣಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ ವತಿಯಿಂದ ಕೃಷಿ ಸಪ್ತಾಹ ಆಚರಣೆಯನ್ನು ಬ್ಯಾಂಕ್ ಜೊತೆ ಪ್ರಗತಿ ಹೊಂದಿರಿ ಎಂಬ ಘೋಷಣೆಯೊಂದಿಗೆ ರೈತರಿಗೆ ವಿವಿಧ ಮಾದರಿಯ ಅನುಕೂಲತೆಗಳನ್ನು ನೀಡಿದೆ.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡದ ಕ್ಷೇತ್ರಿಯ ಮುಖ್ಯಸ್ಥ ಎಸ್ ಸ್ಯಾಮುಯೆಲ್ ಸ್ಟೀಫನ್ ಮಾತನಾಡಿ, ನಮ್ಮ ಬ್ಯಾಂಕ್ ನಿಂದ ರೈತರಿಗಾಗಿ ಅತಿ ದೊಡ್ಡ ಕಾರ್ಯಕ್ರಮ ಮಾಡಿರುವುದಕ್ಕಾಗಿ ಗಿನ್ನೆಸ್ ದಾಖಲೆ ಇದೆ, ಇಂತಹ ಕಿಸನ್ ಪಕ್ವಾಡ ಕಾರ್ಯಕ್ರಮ ಮಾಡುತ್ತಿದ್ದು, ತುಂಬ ಸಂತೋಷವಾಗಿದೆ ಎಂದರು.
ಉಪ ಕ್ಷೇತ್ರಿಯ ಮುಖ್ಯಸ್ಥ ಮೂರ್ತಿ ಹೆಚ್.ಎಂ ಕನ್ನಡದಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ರೈತರಿಗೆ ಬ್ಯಾಂಕ್ ನಿಂದ ಸೌಲಭ್ಯಗಳನ್ನು ಹೇಗೆ ಪಡೆಯಬೇಕು ಯಾವ ರೀತಿ ಅವರು ಅದನ್ನು ಬಳಸಬೇಕು ಎಂಬುದನ್ನು ತಿಳಿಸುತ್ತೇವೆ, ಪ್ರತಿವರ್ಷ ಕಾರ್ಯಕ್ರಮ ಮಾಡಲಾಗುತ್ತಿದ್ದು, ನಮ್ಮ 65 ಶಾಖೆಗಳಲ್ಲೂ ಕೃಷಿಕರಿಗೆ ಅನುಕೂಲತೆ ಕಲ್ಪಿಸಿದ್ದೇವೆ, ರೈತರಿಗೆ ಬ್ಯಾಂಕ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಇದನ್ನು ಉಪಯೋಗಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳಾದ ಕೆವಿಕೆ ಕಂದಲಿ, ಡಾ. ಟಿ ನಾಗರಾಜು, ಉಪ ಕ್ಷೇತ್ರಿಯ ಪ್ರಬಂಧಕ ಅಂಬು ಶಿವಂ ಜೆ.ಪಿ, ಬ್ಯಾಂಕ್ ಸಿಬ್ಬಂದಿಗಳಾದ ಪ್ರದೀಪ್ ನಾಯಕ್, ರಜತ್ ಕಶಪ್, ನರೇಂದ್ರ ಕೆ, ಎನ್. ಬಿಂದು, ಮಂಜುನಾಥ್ ಮೊಗಲಾಯಿ ಹಾಗೂ ರೈತ ಮುಖಂಡರುಗಳಾದ ಬಸವರಾಜೇಗೌಡ, ಕರುಣಾಕರ ಶೆಟ್ಟಿ, ಶಿವಣ್ಣ, ಹಾಗೂ ಇತರರು ಹಾಜರಿದ್ದರು.