ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹೇಳಿರುವ ಸಲಹೆಯನ್ನು ಪಕ್ಷತೀತವಾಗಿ ಸ್ವೀಕರಿಸೋಣ: ಶಾಸಕ ಪ್ರೀತಮ್ ಜೆ. ಗೌಡ

0

ಹಾಸನ: ಕೊರೋನಾ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹೇಳಿರುವ ಸಲಹೆಯನ್ನು ಪಕ್ಷತೀತವಾಗಿ ಸ್ವೀಕರಿಸೋಣ. ಈ ಸಮಯದಲ್ಲಿ ರಾಜಕಾರಣದ ಮಾತನ್ನು ಆಡಬಾರದು. ಕೆಲವರಿಗೆ ಬೆಳಗಾದರೇ ರಾಜಕಾರಣದ ಮಾತು ಬರುತ್ತದೆ. ಸಾಮಾನ್ಯ ಪರಿಜ್ಞಾನ ಇಲ್ಲದವರು ಹಾದಿಬೀದಿಯಲ್ಲಿ ಮಾತನಾಡುವವರಿಗೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಟಾಂಗ್ ನೀಡಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ದುರದೃಷ್ಟಕರ ಎಂಬಂತೆ ನಾನು ಕೂಡ ಕೊರೋನಾ ಸೋಂಕಿಗೆ ತುತ್ತಾಗಿಹತ್ತು ದಿವಸ ಆಸ್ಪತ್ರೆಯಲ್ಲಿದ್ದು, ನಂತರ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲಾಗಿದೆ. ಹೀಗ ಗುಣವಾಗಿ ನಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು ಎಂಬ ವೈದ್ಯರ ಸಲಹೆ ಮೇರೆಗೆ ಮಂಗಳವಾರದಂದು ಬೆಳಿಗ್ಗೆಯೇ ಹಾಸನಕ್ಕೆ ಬಂದಿದ್ದೇನೆ. ಕೊರೋನಾ ಚಿಕಿತ್ಸೆ ಪಡೆಯುವಾಗ ಕಳೆದ ಹತ್ತು ದಿನಗಳಿಂದ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೆನು. ಎಷ್ಟೆ ಪೋನ್ ಮೂಲಕ ಸಂಪರ್ಕದಲ್ಲಿದ್ದರೂ ನಿಂತು ಕೆಲಸ ಮಾಡಿದಾಗ ಆಗುವ ಪರಿಣಾಮ ಬೇರೆ ಎನ್ನುವ ಅರಿವು ಬಂದಿದೆ. ಈಗಾಗಲೇ ಆಕ್ಸಿಜನ್ ಕೊರತೆ ಆಗಬಹುದು ಎಂಬ ಜನರ ಆತಂಕ ಏನಿದೆ ಅದನ್ನು ಹೋಗಲಾಡಿಸಲು ಹಾಸನದಲ್ಲಿ ಆಕ್ಸಿಜನ್ ಘಟಕ ಏನಿದೆ ಮಾಲೀಕರೊಂದಿಗೆ ಚರ್ಚೆ ಮಾಡಲಾಗಿದೆ. ಘಟಕಕ್ಕೆ ಭೇಟಿ ಕೋಡ ಕೊಡಲಾಗಿದೆ. ಮಂಗಳವಾರ ಮದ್ಯಾಹ್ನದಲ್ಲಿ ಹಿಮ್ಸ್ ನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದೆ ಎಂದರು. ಇಲ್ಲಿಯವರೆಗೂ ಒಳ್ಳೆಯ ಕೆಲಸವನ್ನು ಜಿಲ್ಲಾಡಳಿತ ನಿರ್ವಹಿಸುತ್ತಿದೆ. ಜನಸಾಮಾನ್ಯರಿಂದ ಕರೆ ಮೂಲಕ ಏನೆನೂ ಇರುವ ಸಮಸ್ಯೆಯನ್ನು ಚರ್ಚೆ ಮಾಡಿ ನನ್ನ ಸಲಹೆಯನ್ನು ನೀಡಿ, ಅವರ ಕಾರ್ಯದ ಬಗ್ಗೆಯೂ ಸುಧೀರ್ಘ ಚರ್ಚೆಯ ಮೂಲಕ ಇಂದು ಬುಧವಾರದಿಂದ ಏನೆಲ್ಲಾ ನ್ಯೂನ್ಯತೆ ಇದೆ ಅದಕ್ಕೆ ಪರಿಹಾರವನ್ನು ಜನರಿಗೆ ಕಾಣುವಾಗೆ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಪ್ರಾಮಾಣಿಕವಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ಮಾಡಲು ನಾನು ಕಾರ್ಯಪ್ರವೃತ್ತನಾಗಿದ್ದೇನೆ.

ರೆಮಿಡಿಸಿಯನ್ ಸಮಸ್ಯೆ ಏನಿದೆ ರಾಜ್ಯವಲ್ಲ ದೇಶದಲ್ಲೆ ಕಾಣಿಸುತ್ತಿದೆ. ಕೇವಲ ರಾಜಕೀಯ ಕಾರಣಕ್ಕಾಗಿ ಚರ್ಚೆ ಮಾಡುವುದು ಅನವಶ್ಯಕ. ಈ ಸಮಯದಲ್ಲಿ ರಾಜಕಾರಣ ಮಾಡುವುದನ್ನು ಬದಿಗಿಟ್ಟು ದೇಶ ಎದುರಿಸುತ್ತಿರುವುದನ್ನು ಎಲ್ಲಾರೂ ಒಗ್ಗಟ್ಟಾಗಿ ಎದುರಿಸುವ ಪರಿಸ್ಥಿತಿ ಬಂದಿದೆ ಎಂದು ಮನವರಿಕೆ ಮಾಡಿದರು. ರೆಮಿಡಿಸಿಯನ್ ಹಾಸನ ಜಿಲ್ಲೆಯಲ್ಲಿ ಕೊಡಬಾರದು ಎಂಬ ಉದ್ದೇಶವಿಲ್ಲ. ಸಮಾನಚಿತ್ತರವಾಗಿ ಯೋಚನೆ ಮಾಡಿದರೇ ಎಲ್ಲಾ ಸರಿದೂಗಿಸಬಹುದು. ಮಾಜಿ ಪ್ರಧಾನಿಗಳು ಹಿರಿಯರಾದ ಹೆಚ್.ಡಿ. ದೇವೇಗೌಡರು ಏನು ಸಲಹೆ ಕೊಟ್ಟಿದ್ದಾರೆ ಬಹಳ ಸೂಕ್ತವಾಗಿದೆ. ಈಸಂದರ್ಭದಲ್ಲಿ ಕೆಸರಲ್ಲಿ ಜಾರಬಾರದು. ಏನಾದರೂ ಸಮಸ್ಯೆ ಇದ್ದರೆ ತಂಡವಾಗಿ ಕೆಲಸ ಮಾಡಬೇಕು ಎಂದು ಮುತ್ಸದಿಯಾಗಿ ದೇವೇಗೌಡರು ಹೇಳಿರುವ ಸಲಹೆಯನ್ನು ಪಕ್ಷತೀತವಾಗಿ ಎಲ್ಲಾರೂ ಸ್ವೀಕರಿಸೋಣ ಎಂದ ಅವರು, ಈ ಸಮಯದಲ್ಲಿ ರಾಜಕಾರಣ ಮಾತನಾಡಲು ಹೋಗುವುದಿಲ್ಲ. ಕೆಲವರಿಗೆ ರಾಜಕಾರಣವೇ ದಿನ ಬೆಳಿಗ್ಗೆ ಆದರೇ ಎಲ್ಲಾ ವಿಚಾರವನ್ನು ರಾಜಕಾರಣ ಮಾಡುತ್ತಾರೆ. ಒಬ್ಬ ಶಾಸಕನಿಗೆ ಸಮಸ್ಯೆ ಆದಾಗ ಆಸ್ಪತ್ರೆಯಲ್ಲಿ ಇರುತ್ತಾರೋ ಎಂಬ ಸಾಮಾನ್ಯ ಪರಿಜ್ಞಾನ ಇಲ್ಲದೆ ಮಾತನಾಡುವಂತಹ ಜನರಿಗೆ ನಾನು ಏನು ಹೇಳಲು ಆಗುವುದಿಲ್ಲ. ದೇವರು ಮೆಚ್ಚುವ ರೀತಿ, ಹಾಸನದ ಜನರು ಮೆಚ್ಚುವ ರೀತಿಯಲ್ಲಿ ಪ್ರಮಾಣಿಕವಾಗಿ ಜನರ ಮಧ್ಯೆ ಇದ್ದು ಕೆಲಸ ಮಾಡುವ ಸ್ವಭಾವವನ್ನು ಮೊದಲಿನಿಂದಲೂ ಬೆಳೆಸಿಕೊಂಡು ಬರಲಾಗಿದ್ದು, ಮುಂದೆನೂ ಬೆಳೆಸಿಕೊಂಡು ಹೋಗಲಾಗುವುದು. ಹಾದಿಬೀದಿಯಲ್ಲಿ ಮಾತನಾಡುವವರಿಗೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದು ಟಾಂಗ್ ನೀಡಿದರು. ಕೊವ್ಯಾಕ್ಸೀನ್ ಮೊದಲ ಇಂಜಕ್ಷೆನ್ ಪಡೆದು ಎರಡನೆ ಹಂತದಲ್ಲಿ ಪಡೆಯಲು ಕಾಯುತ್ತಿದ್ದು, ಇನ್ನು ಮೂರು ದಿವಸಗಳಲ್ಲಿ ಲಭ್ಯವಾಗಲಿದೆ. ಎಲ್ಲಾ ಜನಪ್ರತಿನಿಧಿಗಳು ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದು, ನಿಮ್ಮೊಂದಿಗೆ ಸರಕಾರವಿದೆ, ಶಾಸಕ ನಾನಿದ್ದು, ಸಂಸದರಿದ್ದು, ರಾಜ್ಯ ಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರಿದ್ದು ಹಾಗೂ ಎಲ್ಲಾ ಹಿರಿಯರು ನಿಮ್ಮೊಂದಿಗೆ ಇದ್ದಾರೆ. ಆನರು ಮಾನಸಿಕವಾಗಿ ದೃಢವಾಗಿರಿ ಎಂದು ಕೋರಿದರು. ಹಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳು ತುಂಬಿ ಹೋಗಿರುವುದರಿಂದ ಹೆಚ್ಚುವರಿಯಾಗಿ ಶ್ರೀಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ೨೫೦ ಬೆಡ್ ಗೆ ಆಕ್ಸಿಜನ್ ಕೂಡ ಇದ್ದು, ಸರಕಾರಿ ಆಸ್ಪತ್ರೆಗೆ ಬರುವವರನ್ನೆಲ್ಲಾ ಇಲ್ಲಿಗೆ ಕಳುಹಿಸುವ ಕೆಲಸ ಮಾಡಲಾಗುವುದು. ಒಂದೆರಡು ದಿನದಲ್ಲಿ ನಾನು ಮಂತ್ರ ಮಾಡುತ್ತೇನೆ ಎಂದು ಹೇಳುವುದಿಲ್ಲ. ಎರಡು ದಿನದ ಸಮಯ ನೋಡಿ ಏನು ಸಮಸ್ಯೆ ಇದೆ ಅರಿತು ಬಗೆಹರಿಸುವ ಕೆಲಸ ಮಾಡುತ್ತೇನೆ. ಇದೆ ಶುಕ್ರವಾರದ ಒಳಗೆ ಬೇರೆ ಜಿಲ್ಲೆಗಳಿಗಿಂತ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇನ್ನು ಉತ್ತಮವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.

Advertisements

LEAVE A REPLY

Please enter your comment!
Please enter your name here