ಮಿನಿ ಬಸ್ಸು ನಿಲ್ದಾಣವನ್ನು ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಬಿ.ರಾಜಾರಾಂ ಭಟ್ ಮಂಗಳವಾರ ಉದ್ಘಾಟಿಸಿದರು.

0

ಸಕಲೇಶಪುರ: ಇಲ್ಲಿಯ ರೋಟರಿ ಸಂಸ್ಥೆ ವತಿಯಿಂದ ಪಟ್ಟಣದ ಟೋಲ್‌ಗೇಟ್‌ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ಬಸ್ಸು ನಿಲ್ದಾಣವನ್ನು ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಬಿ.ರಾಜಾರಾಂ ಭಟ್ ಮಂಗಳವಾರ ಉದ್ಘಾಟಿಸಿದರು.

ರೋಟರಿ ಸಂಸ್ಥೆ ಇರುವುದೇ ಸಮುದಾಯ ಸೇವೆಗಾಗಿ ಆ ಕೆಲಸವನ್ನು ಸಕಲೇಶಪುರದ ರೋಟರಿ ಸಂಸ್ಥೆಯ ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭಾ ಅಧ್ಯಕ್ಷ ಕಾಡಪ್ಪ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ರೋಟರಿ ಸಂಸ್ಥೆಯವರು ಸುಂದರವಾದ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗುವಂತಹ ಬಸ್ಸುನಿಲ್ದಾಣ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇಡೀ ಪಟ್ಟಣದ ಜನರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.

ಪುರಸಭಾ ಉಪಾಧ್ಯಕ್ಷೆ ಜರೀನಾ, ಸದಸ್ಯರಾದ ಎಸ್.ಡಿ. ಆದರ್ಶ, ನರ್ತನ್ ಬೈರಮಮುಡಿ, ಮುಖ್ಯಾಧಿಕಾರಿ ವಿಲ್ಸನ್, ಸಂಸ್ಥೆಯ ವಲಯ ದಂಡಾಧಿಕಾರಿ ಟಿ.ಎಸ್‌. ಸದಾನಂದ, ರೋಟರಿ ಅಧ್ಯಕ್ಷ ಡಾ. ಎಂ.ಕೆ. ಹರೀಶ್, ಕಾರ್ಯದರ್ಶಿ ಕೆ.ಜಿ. ಚಂದ್ರಶೇಖರ್, ಡಾ. ಮೋಹನ್‌ದಾಸ್ ಶೆಟ್ಟಿ, ಚನ್ನವೇಣಿ ಎಂ. ಶೆಟ್ಟಿ, ಡಾ. ರವಿಕಿರಣ್‌, ರಜನಿಕಾಂತ್, ಎಚ್.ಆರ್. ಸುರೇಶ್ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here