ಮೇ 18ರಂದು ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆ ಬೇಡವೆಂದ ಮಾಜಿ ಪ್ರಧಾನಿ H.D ದೇವೇಗೌಡರು

0

ಮೇ 18 ರಂದು ನನ್ನ ಹುಟ್ಟುಹಬ್ಬ ಎಂಬುದನ್ನು ಬಲ್ಲ ನನ್ನ ಅಭಿಮಾನಿಗಳು ಮತ್ತು ಕಾರಕರ್ತರು ಅಂದು ಅದಕ್ಕಾಗಿ ಸಡಗರ ಸಂಭ್ರಮದ ಕಾಠ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದು ನಾನು ವಿನಂತಿಸುತ್ತೇನೆ. ಕೊರೋನಾದಂತಹ ಮಹಾಮಾರಿಯಿಂದ ಇಡೀ ರಾಜ್ಯದ ಜನತ ಸಂಕಷ್ಟ ಮತ್ತು ನೋವಿನಲ್ಲಿ ತತ್ತರಿಸುತ್ತಿರುವಾಗ ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ನಿಮ್ಮಗಳ ಅಭಿಮಾನ ಹಾರೈಕೆ ರೂಪದಲ್ಲಿ ನೀವಿರುವಲ್ಲಿಯೇ ವ್ಯಕ್ತವಾಗಲಿ.

ಈಗ ನಾವು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯನ್ನು ತೋರಿಸುವ ಸಮಯದಲ್ಲಿದ್ದೇವೆ. ಆದುದರಿಂದ ನನ್ನ ಹುಟ್ಟು ಹಬ್ಬದ ನಿಮಿತ್ತ ನೀವು ಹಾರ, ತುರಾಯಿ, ಕೇಕ್, ಸಿಹಿ ಎಂದು ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲಿಗೆ ಅದನ್ನೇ ನಿಮ್ಮ ನಿಮ್ಮ ಭಾಗದ ಕೊರೋನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದಲ್ಲಿ ಅದು ನಿಜಕ್ಕೂ ಸದುಪಯೋಗವಾಗುತ್ತದೆ. ದೇವರು ಮೆಚ್ಚುತ್ತಾನೆ. ನನ್ನ ಅಭಿಮಾನಿಗಳ ಈ ಸೇವಾ ಕಾರ ನನಗೂ ಸಂತೋಷ ನೀಡುತ್ತದೆ.


ನನ್ನ ಅಭಿಮಾನಿಗಳು ಮತ್ತು ಕಾರಕರ್ತರು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಕೋರುತ್ತೇನೆ ಎಂದು ತಮ್ಮ ಟ್ವಿಟರ್ ಮೂಲಕ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here