ವಿಟಮಿನ್ ಇ ನಮ್ಮ ತ್ವಚೆಗೆ ಬಹಳ ಉಪಯೋಗಕಾರಿ

0

ವಿಟಮಿನ್ ಇ ನಮ್ಮ ತ್ವಚೆಗೆ ಬಹಳ ಉಪಯೋಗಕಾರಿ. ಕ್ರೀಮ್,ಲೋಶನ್ ಹಾಗೂ ಫೇಸ್ ಮಾಸ್ಕ್ ಗಳಲ್ಲಿ ವಿಟಮಿನ್ ಇ ಮುಖ್ಯವಾದ ಅಂಶ.ಈ ವಿಟಮಿನ್ ನಮ್ಮ ತ್ವಚೆಯನ್ನು ಬಹಳ ಮೃದುವಾಗಿ ಕಾಂತಿಯುತವಾಗಿ ಮಾಡುತ್ತದೆ.ಇದನ್ನು ನಾವು ಕ್ಯಾಪ್ಸೂಲ್ ರೀತಿಯಲ್ಲಿ ನಮ್ಮ ಫೇಸ್ ಪ್ಯಾಕ್ ಗಳಲ್ಲಿ ಮಿಶ್ರಣ ಮಾಡಿಕೊಂಡು , ಅಥವಾ ವಿಟಮಿನ್ ಇ ಅಡಗಿರುವ ಹಣ್ಣುಗಳನ್ನು ಸೇವಿಸಬಹುದು.

ವಿಟಮಿನ್ ಇ ಅಲ್ಲಿ ಇರುವ ಆಕ್ಸಿಡೆಂಟ್ಸ್ ಸೂರ್ಯನ ಕಾಂತಿಯಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ ಹಾಗೂ ಇದರಲ್ಲಿ ಟೋಕೊಫೆರೊಲ್ಸ್ ಮತ್ತು ಟೋಕೊಟ್ರೈ ನೋಲ್ಸ್ ಅಂಶವಿದೆ ಇದು ತ್ವಚೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

ವಿಟಮಿನ್ ಇ ಪೇಸ್ ಮಾಸ್ಕ್ ಗಳು :

ವಿಟಮಿನ್ ಇ ,ಮೊಸರು ಮತ್ತು ನಿಂಬೆ ಫೇಸ್ ಮಾಸ್ಕ್:
ಒಂದು ಚಮಚ ಮೊಸರಿನಲ್ಲಿ ವಿಟಮಿನ್ ಈ ಮಾತ್ರೆ ಮತ್ತು ಸ್ವಲ್ಪ ನಿಂಬೆ ರಸವನ್ನು ಮಿಶ್ರಣ ಮಾಡಿ ನಿಮ್ಮ ಮುಖವನ್ನು ತೊಳೆದು ಇದನ್ನು ಹಚ್ಚಿ ಕೊಳ್ಳಿ .ಇದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚುವುದು .

ವಿಟಮಿನ್ ಇ ಮತ್ತು ಅಲೊವೇರಾ ಮಾಸ್ಕ್ :
ಒಂದು ವಿಟಮಿನ್ ಈ ಮಾತ್ರೆ ಜೊತೆ ಅಲೋವೆರಾ ಜೆಲ್ ಮಿಶ್ರಣ ಮಾಡಿ ನಿಮ್ಮ ಮುಖದ ಮೇಲೆ ಹಚ್ಚಿ ಒಣಗಿದ ನಂತರ ತೊಳೆಯಿರಿ ಈ ಮಿಶ್ರಣವನ್ನು ಪ್ರತಿದಿನ ಬಳಸಿದರೆ ನಿಮ್ಮ ತ್ವಚೆಗೆ ಬಹಳ ಒಳ್ಳೆಯದು.

ವಿಟಮಿನ್ ಇ ಜೇನು, ಮತ್ತು ಹಾಲಿನ ಮಾಸ್ಕ್
ಎರಡು ವಿಟಮಿನ್ ಈ ಮಾತ್ರೆ ಒಂದು ಚಮಚ ಜೇನು ಒಂದು ಚಮಚ ಹಾಲು ಈ ಮಿಶ್ರಣವನ್ನು ಮಾಡಿಕೊಂಡು ದಿನ ಸ್ನಾನದ ಮುಂಚೆ ಹಚ್ಚಿಕೊಂಡು ಒಣಗಿದ ನಂತರ ತೊಳೆದರೆ ನಿಮಗೆ ಹೊಳಪಾದ ಚರ್ಮ ಸಿಗುತ್ತದೆ.

ನಿಮಗೆ ಸುಲಭವಾದ ಫೇಸ್ ಮಾಸ್ಕ್ ಗಳನ್ನು ತಯಾರಿಸಿಕೊಂಡು ಉಪಯೋಗಿಸಿ. ನಿಮ್ಮ ಚರ್ಮದ ಬದಲಾವಣೆಯನ್ನು ನೀವೇ ಕಾಣಬಹುದು.

-ತನ್ವಿ .ಬಿ

LEAVE A REPLY

Please enter your comment!
Please enter your name here