ಸಕಾಲ ಯೋಜನೆಯಡಿಯಲ್ಲಿ 10,655 ಅರ್ಜಿ ವಿಲೇವಾರಿ

0

ಸಕಾಲ ಯೋಜನೆಯಡಿಯಲ್ಲಿ 10,655 ಅರ್ಜಿ ವಿಲೇವಾರಿ

ಹಾಸನ :- ಕಂದಾಯ ಇಲಾಖೆ, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಕೋಶ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ನ.30ರಿಂದ ಡಿ.05 ರವರೆಗೆ ನಡೆದ ಸಕಾಲ ಸಪ್ತಾಹದಲ್ಲಿ ಒಟ್ಟು 9,426 ಅರ್ಜಿಗಳು ಸ್ವೀಕೃತವಾಗಿದ್ದು, ಸಪ್ತಾಹಕ್ಕೂ ಮುನ್ನ ಸ್ವೀಕರಿಸಿದ ಅರ್ಜಿಗಳು ಸೇರಿದಂತೆ ಒಟ್ಟು 10,655 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.

ವಿವಿಧ ಕಾರಣಗಳಿಂದ 362 ಅರ್ಜಿಗಳನ್ನು ತಿರಸ್ಕರಿಸಲಾಗಿದೆ 416 ಅರ್ಜಿಗಳನ್ನು ನಿಗದಿತ ಸಮಯದ ನಂತರ ವಿಳಂಬವಾಗಿ ವಿಲೇವಾರಿ ಮಾಡಲಾಗಿರುತ್ತದೆ.

ಸಪ್ತಾಹ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ 5,495 ಅರ್ಜಿಗಳನ್ನು ಸ್ವೀಕರಿಸಿದ್ದು, ಸಪ್ತಾಹಕ್ಕೂ ಮುನ್ನ ಸ್ವೀಕರಿಸಿದ ಅರ್ಜಿಗಳು ಸೇರಿದಂತೆ 6,291 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 270 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು 320ಅರ್ಜಿಗಳನ್ನು ನಿಗದಿತ ಸಮಯದ ನಂತರ ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

ಸಾರಿಗೆ ಇಲಾಖೆಯಲ್ಲಿ ಒಟ್ಟು 2,044 ಅರ್ಜಿಗಳನ್ನು ಸ್ವೀಕರಿಸಿದ್ದು ಹಾಗೂ 2,551 ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಸಪ್ತಾಹಕ್ಕೂ ಮುನ್ನ ಸ್ವೀಕರಿಸಿದ ಅರ್ಜಿಗಳು ಸೇರಿದಂತೆ 50 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 46 ಅರ್ಜಿಗಳನ್ನು ನಿಗದಿತ ಸಮಯದ ನಂತರ ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

ನಗರಾಭಿವೃದ್ಧಿ ಕೋಶ ಇಲಾಖೆಯಲ್ಲಿ 582 ಅರ್ಜಿಗಳನ್ನು ಸ್ವೀಕರಿಸಿದ್ದು, 528 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2 ಅರ್ಜಿಗಳನ್ನು ತಿರಸ್ಕರಿಲಾಗಿದ್ದು, 27 ಅರ್ಜಿಗಳನ್ನು ನಿಗದಿತ ಸಮಯದ ನಂತರ ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ 1.305 ಅರ್ಜಿಗಳನ್ನು ಸ್ವೀಕರಿಸಿದ್ದು, 1,285 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 40 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 23 ಅರ್ಜಿಗಳನ್ನು ನಿಗದಿತ ಸಮಯದ ನಂತರ ವಿಳಂಬವಾಗಿ ವಿಲೇವಾರಿ ಮಾಡಲಾಗಿದೆ.

LEAVE A REPLY

Please enter your comment!
Please enter your name here