ಸ್ಟಾಫ್ ಸೆಲೆಕ್ಷನ್ ಕಮೀಷನ ಸ್ಟೇನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಅಹ್ವಾನ

0

ಸ್ಟಾಫ್ ಸೆಲೆಕ್ಷನ್ ಕಮೀಷನ್‍ರವರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸ್ಟೇನೋಗ್ರಾಫರ್ (ಶೀಘ್ರಲಿಪಿಗಾರರು) ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುತ್ತಾರೆ.
ಅಭ್ಯರ್ಥಿಗಳು ಪಿ.ಯು.ಸಿ ಪಾಸು ಮತ್ತು ಇಂಗ್ಲೀಷ್/ಹಿಂದಿ ಶೀಘ್ರ ಲಿಪಿಯಲ್ಲಿ ಕೌಶಲ್ಯ ಹೊಂದಿರಬೇಕು. ವಯೋಮಿತಿ 18 ರಿಂದ 27(ಗ್ರೂಪ್ ಸಿ ಹುದ್ದೆಗಳಿಗೆ) ಮತ್ತು 30(ಗ್ರೂಪ್ ಬಿ ಹುದ್ದೆಗಳಿಗೆ) ವರ್ಷಗಳು (ಪರಿಶಿಷ್ಟಜಾತಿ/ಪಂಗಡ ಮತ್ತು ಓ.ಬಿ.ಸಿ ಅಭ್ಯರ್ಥಿಗಳಿಗೆ ನಿಯಮಾನುಸಾರ ರಿಯಾಯಿತಿ ಇರುತ್ತದೆ). ವೇತನ ಒಟ್ಟು 38,000 ರೂ. ಮತ್ತು 54, 000 ರೂಪಾಯಿಗಳು. ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 4 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.ssckkr.kar.nic.in ಮತ್ತು https://ssc.nic.in ಅನ್ನು ಸಂಪರ್ಕಿಸಬಹುದು. ಸ್ಥಳೀಯ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08172-296374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಉದ್ಯೋಗಾಧಿಕಾರಿ ಎನ್.ಆರ್. ವೇಣುಗೋಪಾಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here