ಹಾಸನ ಜಿಲ್ಲಾದಿಕಾರಿ ಸತ್ಯಭಾಮ ಅರಕಲಗೂಡು ತಾಲ್ಲೂಕಿನ ಶಂಭುನಾಥಪುರ ಕಾಲೋನಿಯವರಿಗೆ ಸ್ಮಶಾನ ಇಲ್ಲವೆಂದು ದಲಿತ ಮುಖಂಡ ನಿಂಗರಾಜು ಮತ್ತು ಇತರರು ನೀಡಿದ ಅರ್ಜಿ ಹಿನ್ನೆಲೆಯಲ್ಲಿ ಜಾಗವನ್ನು ಗುರುತಿಸಲು ಬಂದು ಸ್ಥಳ ಪರಿಶೀಲನೆ ಮಾಡಿದರು.

0

ನಂತರ ಸ್ಥಳಿಯ ಜಾಗದವರೊಂದಿಗೆ ದೂರಾವಾಣಿ ಮೂಲಕ ಮಾತನಾಡಿ, 13 ಗುಂಟೆ ಜಾಗ ಖರೀದಿಸಲು ಒಪ್ಪಿಗೆ ಪತ್ರಗಳನ್ನು ಪಡೆದು ಜಾಗ ಮಂಜೂರು ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ್‍ರಿಗೆ ಸೂಚಿಸಿದರು.

ಈ ಸಂಧರ್ಭದಲ್ಲಿ ವಡ್ಡರಹಳ್ಳಿ ಪಿಡಿಒ ಶೀಲಾ, ಸೇರಿದಂತೆ ಇತರೆ ಅದಿಕಾರಿಗಳು ಇದ್ದರು. ಜುಲೈ 22ರಂದು ಅರಕಲಗೂಡು ಪಟ್ಟಣದ ಅರಕಲಗೂಡು-ಹಾಸನ ಮುಖ್ಯರಸ್ತೆಯಲ್ಲಿರುವ ಶಂಭುನಾಧಪುರ ಕಾಲೋನಿಯಲ್ಲಿ ದಲಿತ ಸಮುದಾಯದ 55 ವರ್ಷದ ಗಿಡ್ಡಯ್ಯ ಬಿನ್ ಕರಿಯಯ್ಯ ಅನಾರೋಗ್ಯದಿಂದ ಮೃತ ಪಟ್ಟಿದ್ದರು ಅವರನ್ನು ಶವಸಂಸ್ಕಾರ ಮಾಡಲು ಸ್ಮಶಾನ ಇಲ್ಲವೆಂದು ಇದೇ ಗ್ರಾಮದ ಮಾದಿಗ ದಂಡೋರ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಂಗರಾಜು ತಹಶೀಲ್ದಾರ್ ಮತ್ತು ಜಿಲ್ಲಾದಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ದಿನ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಶಂಭನಾಥಪುರವು ಅರಕಲಗೂಡು ಪಟ್ಟಣಕ್ಕೆ ಹೊಂದಿಕೊಂಡಂತೆ ಇದ್ದು ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರಿದೆ. ಈ ಗ್ರಾಮಕ್ಕೆ ದಲಿತರಿಗಾಗಿ ಪ್ರತ್ಯೇಕ ಸ್ಮಶಾನ ಇರುವುದಿಲ್ಲ, ಈ ಗ್ರಾಮದಲ್ಲಿ ಸರ್ಕಾರಿ ಜಾಗ ಮತ್ತು ಇತರೆ ಗೋಮಾಳದ ಜಾಗವಾಗಲಿ ಇರುವುದಿಲ್ಲ.

ಸರ್ಕಾರ ಜಾಗ ಖರೀದಿಸಿ ಸ್ಮಶಾನ ಜಾಗ ಗುರುತು ಮಾಡಬೇಕಾಗಿರುವದರಿಂದ 13 ಗುಂಟೆ ಜಾಗದ ವಾರಸುದಾರರ ಹತ್ತಿರ ಮಾತನಾಡಿ, ಅವರನ್ನು ಕರೆದು ಮಾತನಾಡಿ ಎಂದು ಜಿಲ್ಲಾಧಿಕಾರಿಗಳು ತಹಶೀಲ್ದಾರ್‍ರಿಗೆ ಸೂಚನೆ ನೀಡಿ, ತಹಸಿಲ್ದಾರ್ ಅವರಿಗೆ ಒಂದು ಕಡತವನ್ನು ರೆಡಿ ಮಾಡಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಬನ್ನಿ ಎಂದರು

LEAVE A REPLY

Please enter your comment!
Please enter your name here