ಹಾಸನ ಜಿಲ್ಲಾ ವ್ಯಾಪ್ತಿಗೆ ಕೋವಿಡ್ ಹೊಸ ಮಾರ್ಗಸೂಚಿಗಳು

0

1) ಹಾಸನ ಜಿಲ್ಲಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭ ಹಾಗೂ ಆಚರಣೆಗಳನ್ನು ನಿಷೇಧಿಸಿದೆ.

2.ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ , ಈಸ್ಟರ್ , ಷಬ್ ಎ ಬರಾತ್ , ಇತ್ಯಾದಿ ಹಬ್ಬಗಳ ಸಂದರ್ಭಗಳಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯ ಯಾವುದೇ ಸಾರ್ವಜನಿಕ ಸ್ಥಳಗಳು/ಸಾರ್ವಜನಿಕ ಮೈದಾನ/ಸಾರ್ವಜನಿಕ ಉದ್ಯಾನವನಗಳು/ಮಾರುಕಟ್ಟೆಗಳು/ಧಾರ್ಮಿಕ ಪ್ರದೇಶಗಳು ಇತ್ಯಾಧಿಗಳಲ್ಲಿ ಸಾರ್ವಜನಿಕ ಸಮಾರಂಭಗಳು/ಸಭೆಗಳನ್ನು ನಿಷೇಧಿಸಿದೆ.

3) ಎಲ್ಲಾ ರೀತಿಯ ಧಾರ್ಮಿಕ ಕಾರ್ಯಗಳನ್ನು ಸಾಂಕೇತಿಕವಾಗಿ ಆಚರರಣೆ ಮಾಡಲು ಸೂಚಿಸಿದೆ. 4) ಗುಂಪುಗುಂಪಾಗಿ ಪ್ರತಿಭಟನೆ/ಮುಷ್ಕರ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

5) ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆಆಕುಕ/59/ಸಿಜಿಎಂ/2021 ದಿನಾಂಕ:27/03/2021 ರಂತೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಮುಂಬರುವ ಇತರ ಧಾರ್ಮಿಕ ಉತ್ಸವಗಳೊಂದಿಗೆ ಜಾತ್ರೆಗಳು/ಮೇಳಗಳನ್ನು ನಿಷೇಧಿಸಿದೆ.

6) ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ತ್ರ ಧರಿಸುವುದು ಹಾಗೂ ಕಡ್ಡಾಯವಾಗಿ

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ತಪ್ಪಿದಲ್ಲಿ ಸರ್ಕಾರದ ಆದೇಶ ಸಂಖ್ಯೆ:HFW 146 CGM

2020, ದಿನಾಂಕ:24/03/2021ರ ಆದೇಶದಲ್ಲಿ ತಿಳಿಸಿರುವಂತೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ

LEAVE A REPLY

Please enter your comment!
Please enter your name here