ಆಟೋ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆ

0

ಹಾಸನ ಜಿಲ್ಲಾಡಳಿತ, ಜನಪ್ರಿಯಆಸ್ಪತ್ರೆ ಹಾಗೂ ಆಟೋ(ರಿಕ್ಷಾ)ಚಾಲಕರ ಮಜ್ದೂರ್ ಸಂಘದ ಸಹಯೋಗದೊಂದಿಗೆ
ಹಾಸನದ KSRTC ಹೊಸ ಬಸ್ ನಿಲ್ದಾಣದಲ್ಲಿರುವ ಆಟೋ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ರಕ್ತಪರೀಕ್ಷೆ, ಉತ್ತಮ ದರ್ಜೆಯ N 95 ಮಾಸ್ಕ್ ವಿತರಣೆ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ವಿತರಣೆ ಹಾಗೂ ಉಚಿತ ಕೋವಿಡ್-19 ಪರೀಕ್ಷೆ ಮಾಡಲಾಯಿತು.

ಈ ಶಿಬಿರದ ಉದ್ಘಾಟನೆಯನ್ನು ಶ್ರೀಯುತ ಜಗದೀಶ್ ಜಿಲ್ಲಾ ಉಪವಿಭಾಗಾಧಿಕಾರಿ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಡಾ” ಸತೀಶ್ ಜಿಲ್ಲಾ ಆರೋಗ್ಯ ಅಧಿಕಾರಿ, ಡಾ” ವಿಜಯಕುಮಾರ್ ತಾಲೂಕ್ ಆರೋಗ್ಯ ಅಧಿಕಾರಿ,
ಡಾ” ಅಬ್ದುಲ್ ಬಷೀರ್ ಜನಪ್ರಿಯ
ಆಸ್ಪತ್ರೆ ಮುಖ್ಯಸ್ಥರು,
ಡಾ” ಕಿರಾಶ್ ಪರ್ತಿಪಡಿ IDA
ಅದ್ಯಕ್ಷರು,
ಡಾ” ರಮೇಶ್ IMA ಅಧ್ಯಕ್ಷರು
ಡಾ” ವಾಗೇಶ್ ಭಟ್ IMA
ಕಾರ್ಯದರ್ಶಿ,
ಶ್ರೀಯುತ ದಿಲೀಪ್ ಆಟೋ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಮತ್ತೀತ್ತರು ಉಪಸ್ತಿದದ್ದರು.

ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ಮಾಡಲಾಯಿತು ಈ ಶಿಬಿರದ ಮುಖ್ಯ ಉದ್ದೇಶ ಕೋವಿಡ್-19 ಬಗ್ಗೆ ಜನಜಾಗೃತಿ ಮೂಡಿಸುವುದು ಜಾಸ್ತಿ ಜನರನ್ನು ಪರೀಕ್ಷೆಗೆ ಒಳಪಡಿಸುವುದು ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವಂತೆ ಮಾಡುವುದು.
ಇದೆ ಸಂದರ್ಭದಲ್ಲಿ ಮಾತನಾಡಿದ ಡಾ” ಅಬ್ದುಲ್ ಬಶೀರ್
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟು ಕಾಯಿಲೆಯನ್ನು ಪ್ರಥಮ ಹಂತದಲ್ಲಿ ತಡೆಗಟ್ಟಿ, ನಿಮ್ಮ ಮನೆಯವರಿಗೆ ಮತ್ತು ಸುತ್ತ ಮುತ್ತಲಿನ ಜನರಿಗೆ ಹರಡುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here