ಓದುಗರಿಗೊಂದು ವೇದಿಕೆ : ಆತ್ಮಬಲ ( ಕಥೆ )

0

ಆತ್ಮಬಲ
ಅನಂತ್ ಒಬ್ಬ ಮನೆಮನೆಗೆ ನ್ಯೂಸ್ ಪೇಪರ್ ಹಾಕುವ ಕೆಲಸ ಮಾಡುತ್ತಿದ್ದನು. ದಿನನಿತ್ಯ ಪೇಪರ್ ಹಾಕಿ ದಿನಸಿ ಅಂಗಡಿಗೆಯಲ್ಲಿ ಸಾಮಾನು ಕಟ್ಟುತ್ತಿದ್ದನು. ಅನಂತ್ ತಂದೆ ನ್ಯಾಯಬೆಲೆ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಮನೆ ಖರ್ಚಿಗೆ ಇವರಿಬ್ಬರ ಹಣ ಸಾಕಾಗುತ್ತಿರಲಿಲ್ಲ. ಒಂದು ದಿನ ಅನಂತ್ ತಾಯಿಯ ತಮ್ಮನಾದ ಸುರೇಶ್ ಅನಂತ್ ಮನೆಗೆ ಬರುತ್ತಾನೆ.ಸುರೇಶ್ ಚೆನ್ನಾಗಿ ದುಡಿದು ಹಣ ಮಾಡಿಕೊಂಡಿದ್ದನು.

ರಾತ್ರಿ ವೇಳೆ ಎಲ್ಲರೂ ಊಟಮಾಡುವಾಗ ಸುರೇಶ್ ಅನಂತ್ ಗೆ ಕೇಳುತ್ತಾನೆ”ಅನಂತ್ ನನ್ನ ಜೊತೆ ಬಾ. ನಿನಗೆ ಕೆಲಸ ಕೊಡಿಸುತ್ತೇನೆ ಕೈತುಂಬಾ ದುಡ್ಡು ಮಾಡಬಹುದು”ಎಂದು ಹೇಳುತ್ತಾನೆ. ಅನಂತ್ ಹೇಳುತ್ತಾನೆ”ಅಪ್ಪ ಅಮ್ಮ ಒಪ್ಪಿಕೊಂಡರೆ ಮಾತ್ರ ಮಾವ ನಾನು ಬರುವೆ” ಎಂದು ಹೇಳಿದನು .ನಂತರ ಅನಂತ್ ತಂದೆ ತಾಯಿ ಕೂಡ ಒಪ್ಪಿಕೊಂಡು ಸುರೇಶ್ ಜೊತೆ ಕಳಿಸಿದರು.

ಬೆಳಗ್ಗೆ ಬೆಂಗಳೂರು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದರು. ಯಶವಂತಪುರ ಟು ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ಹತ್ತಿ ಸಂಜೆ ಹೊತ್ತಿಗೆ ಮನೆ ಸೇರಿದರು. ನಂತರ ಸತೀಶ್ ಮನೆಯಲ್ಲಿ ತುಂಬಾ ಜನ ಗಂಡಸರು ಇರುತ್ತಾರೆ. ಅವರನ್ನು ನೋಡುವುದಕ್ಕೆ ರಾಕ್ಷಸರ ರೀತಿ ಕಾಣುತ್ತಿದ್ದರು. ಅನಂತ್ ಅವರನ್ನು ನೋಡಿ ಭಯಪಟ್ಟನು.ನಂತರ ಬೆಳಗ್ಗೆ ಅನಂತ್ ಎಲ್ಲರಿಗೆ ಕಾಫಿ ಮಾಡಿ ಕೊಟ್ಟನು. ಸುರೇಶ್ ಅನಂತ್ ಗೆ ಹೇಳುತ್ತಾನೆ” ಅನಂತ್ ನೀನು ಒಂದು ಕಡೆ ಕುಳಿತುಕೊಂಡು ಹಣ ಎಣಿಸುವುದು ಅಷ್ಟೇ. ಒಂದು ರೀತಿ ಕ್ಯಾಶಿಯರ್ ರೀತಿ ಕೆಲಸ ಮಾಡುವುದು”ಎಂದು ಹೇಳಿದನು. ನಂತರ ಅನಂತ್ ಕೆಲಸಕ್ಕೆ ಹೋದನು. ಆದರೆ ಅಲ್ಲಿ ಐದು ಐದು ನಿಮಿಷಕ್ಕೆ ಒಂದು ಒಂದು ಚೀಲ ಹಣ ಬರುತ್ತಿತ್ತು. ಅನಂತ್ ಗೆ ಹಣ ಎಣಿಸಿ ಸುಸ್ತಾಗುತ್ತಿತ್ತು.ಒಂದು ದಿನ ಮಧ್ಯಾಹ್ನ ಸುರೇಶ್ ಮನೆಯಲ್ಲಿ ರಾಜಕಾರಣಿಗಳು ಬಂದಿದ್ದರು.

ಆ ಮನೆಯಲ್ಲಿ ಆ ಜನರು ತಮಿಲಿನಲ್ಲಿ ಜೋರಾಗಿ ಕೂಗಾಡುತ್ತಿದ್ದರು . ಅನಂತ್ ಗೆ ಆ ಭಾಷೆ ಗೊತ್ತಾಗುತ್ತಿರಲಿಲ್ಲ. ‌ಆದರೆ ಅಲ್ಲಿ ಗನ್ , ಲಾಂಗ್ ಮತ್ತು ಮುಂತಾದ ಆಯುಧಗಳನ್ನು ನೋಡಿ ಭಯಪಟ್ಟು ಅನಂತ್ ನೀರಿನ ಲೋಟ ಬಿಸಾಕಿ ಓಡಿಹೋಗುತ್ತಾನೆ . ತಕ್ಷಣ ಸುರೇಶ್ ಅನಂತ್ ಹಿಡಿದು “ಏನಾಯ್ತು ಯಾಕೆ ಈ ರೀತಿ ಓಡುತ್ತಿರುವೆ?” ಎಂದು ಪ್ರಶ್ನಿಸಿದ. ಅನಂತ್ ಪ್ರತ್ಯುತ್ತರ ಕೊಡುತ್ತಾನೆ” ಆ ಜನರು ಗನ್, ಲಾಂಗ್ ಇಟ್ಟುಕೊಂಡಿದ್ದರು ಮಾವ . ಅದನ್ನು ನೋಡಿ ನನಗೆ ತುಂಬಾ ಭಯವಾಯಿತು‌. ನನಗೆ ಅವರನ್ನು ನೋಡಿ ಆಶ್ಚರ್ಯವಾಯಿತು. ಅವರ್ಯಾರು ಮಾವ ?”ಎಂದು ಅವನು ಕೂಡ ಪ್ರಶ್ನಿಸಿದ .ಅಷ್ಟರಲ್ಲಿ ಸುರೇಶ್ ಗೆ ಫೋನ್ ಕಾಲ್ ಬರುತ್ತಾದೆ. ಅವನು ಹೋಗುತ್ತಾನೆ.

ನಂತರ ಅನಂತ್ ತನ್ನ ಕೆಲಸ ಮಾಡಲು ಸಿದ್ಧವಾದ . ಸುರೇಶ್ ಬೈಕ್ ತೆಗೆದುಕೊಂಡು ಆತುರದಿಂದ ಹೊರಟನು. ಅದನ್ನು ನೋಡಿದ ಅನಂತ ಸೈಕಲ್ ತೆಗೆದುಕೊಂಡು ಸುರೇಶ್ ಹಿಂಬಾಲಿಸಿ ಹೋದನು. ಒಂದು ಕಡೆ ಗಾಡಿ ನಿಲ್ಲಿಸಿ ಒಬ್ಬ ಮನೆಯ ಒಳಗೆ ಹೋದನು. ಅನಂತ್ ಕಿಟಕಿಯ ಸಣ್ಣ ಕಿಂಡಿಯಿಂದ ಒಳಗೆ ನಡೆಯುತ್ತಿದ್ದ ಘಟನೆ ನೋಡುತ್ತಿದ್ದನು. ಸುರೇಶ್ ಮತ್ತು ವ್ಯಕ್ತಿಯ ಇಬ್ಬರ ನಡುವೆ ತುಂಬಾ ಗಲಾಟೆ ನಡೆಯುತ್ತಿತ್ತು. ನಂತರ ಸುರೇಶ್ ತನ್ನ ಜೇಬಿನಲ್ಲಿದ್ದ ಗನ್ ತೆಗೆದುಕೊಂಡು ಎದುರಿಗೆ ಇದ್ದ ವ್ಯಕ್ತಿಯ ಮೇಲೆ ಬುಲೆಟ್ ಆರಿಸಿದ .ತಕ್ಷಣ ಆ ವ್ಯಕ್ತಿಯ ಪ್ರಾಣಪಕ್ಷಿಯು ಯಮಲೋಕಕ್ಕೆ ಸೇರಿತು. ನಂತರ ಸುರೇಶ್ ಬೈಕ್ ತೆಗೆದುಕೊಂಡು ಮನೆಗೆ ಬಂದನು. ನಂತರ ಅನಂತ ಸುರೇಶ್ ಗೆ ಕೇಳುತ್ತಾನೆ “ಮಾವ ನೀವ್ಯಾಕೆ ವ್ಯಕ್ತಿಯನ್ನು ಕೊಲೆ ಮಾಡಿದ್ದೀರಿ.ಆ ವ್ಯಕ್ತಿ ಯಾರು ?” ಎಂದು ಪ್ರಶ್ನಿಸಿದನು . ಸುರೇಶ್ ಪ್ರಶ್ನೆಗೆ ಪ್ರತ್ಯುತ್ತರ ಕೊಡುವುದರ ಬದಲು ಬೈಯ್ದು ಕಳಿಸುತ್ತೇನೆ ‌.‌‍‍‌

ನಂತರ ಕೊಲೆಯಾಗಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಲು ಪೊಲೀಸರು ಬಂದರು .ಆ ವ್ಯಕ್ತಿಯೊಬ್ಬ ಎಂ.ಎಲ್.ಎ ಆಗಿದ್ದನ್ನು. ನಂತರ ಸುರೇಶ್ ಬೇರೆ ಕಡೆ ಹೊಸ ಕೆಲಸವನ್ನು ಕೊಡಿಸಿದನು. ಐದು ದಿನಗಳ ನಂತರ ಪೋಲಿಸ್ ಬೇಟೆ ಸುರೇಶನ ಮೇಲೆ ಬಿದ್ದಿತ್ತು. ಅದೇ ಸಮಯಕ್ಕೆ ಅನಂತ್ ಬರುತ್ತಾನೆ. ಸುರೇಶ್ ನನ್ನು ಹಿಡಿದಿದ್ದ ಪೊಲೀಸರನ್ನು ನೋಡಿ ಗಾಬರಿಗೊಂಡ ತಕ್ಷಣ ಅನಂತ್ ಓಡಿ ಹೋದನು . ನಂತರ ಪೊಲೀಸ್ ಅನಂತ್ ಹಿಂದೆ ಇಬ್ಬರು ಕಾನ್ಸ್ ಟೇಬಲ್ ರನ್ನು ಕಳಿಸುತ್ತಾರೆ. ಅನಂತ್ ಓಡುವಾಗ ಒಬ್ಬ ಕಾನ್ಸ್ ಟೇಬಲ್ ಕೈಯಲ್ಲಿದ್ದ ಕೋಲನ್ನು ಅನಂತ್ ಗೆ ಬೀಸುತ್ತಾನೆ. ಅನಂತ್ ಕೆಳಗೆ ಬಿದ್ದು ಮೂರ್ಛೆ ಹೋಗಿ ಅನಂತನನ್ನು ಆಸ್ಪತ್ರೆ ಸೇರಿಸುತ್ತಾರೆ. ಅವನ ತಲೆಯಿಂದ ತುಂಬಾ ರಕ್ತ ಹೋಗುವುದರಿಂದ ಕೋಮಕ್ಕೆ ಹೋಗುತ್ತಾನೆ. ಪೋಲೀಸ್ ಸುರೇಶ್ ಮತ್ತು ಅವನ ಶಿಷ್ಯರನ್ನು ಬಂದಿಸಿ ಎಫ್.ಐ.ಆರ್ ಹಾಕಿ ಕೋರ್ಟ್ ಗೆ ಕರೆದುಕೊಂಡು ಹೋದರು. ನಂತರ ಪೊಲೀಸ್ ಸಾಕ್ಷಿಯನ್ನು ಕೊಟ್ಟು ಜೈಲಿಗೆ ಹಾಕಿದರು. ಹತ್ತನೇ ದಿನಕ್ಕೆ ಅನಂತ್ ಕೋಮಾದಿಂದ ಹೊರಗೆ ಬರುತ್ತಾನೆ. ಅಲ್ಲಿಯ ಒಬ್ಬ ಕಾನ್ಸ್ ಟೇಬಲ್ ಬಂದು ಅನಂತ್ ಗೆ ಹೇಳುತ್ತಾನೆ “ನೀನು ಭಯ ಪಡಬೇಡ.

ನೀನು ಈಗ ನಿರಪರಾಧಿ. ನಿನ್ನನ್ನು ಹಿಡಿದು ಜೈಲಿಗೆ ಹಾಕುವುದಿಲ್ಲ ಮತ್ತು ನೀನು ಯಾಕೆ ಆ ವ್ಯಕ್ತಿ ಜೊತೆ ಇದ್ದೆ .ಅವನು ನಿನ್ನಗೆ ಏನು ಆಗಬೇಕು?” ಎಂದು ಪ್ರಶ್ನಿಸಿದರು .ಆ ಪ್ರಶ್ನೆಗೆ ಅನಂತ್ ಪ್ರತ್ಯುತ್ತರ ಕೊಡುತ್ತಾನೆ “ಅವರು ನನ್ನ ಮಾವ. ಅವರು ನನಗೆ ಕೆಲಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದರು. ನನಗೆ ದಿನನಿತ್ಯ ಲಕ್ಷ ಲಕ್ಷ ಹಣ ಎಣಿಸಲೂ ಕೊಡುತ್ತಿದ್ದರು. ನಂತರ ಒಂದು ದಿನ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದರು .ಆಗ ನಾನು ಮಾವನಿಗೆ ಪ್ರಶ್ನೆ ಕೇಳಿದಾಗ ನನಗೆ ಬೈಯ್ದು ನನಗೆ ಬೇರೆ ಕಡೆ ಕೆಲಸ ಕೊಡಿಸಿದರು. ಆದರೆ ನೀವು ಮಾವ ರನ್ನು ಯಾಕೆ ಜೈಲಿಗೆ ಹಾಕಿದ್ದೀರಿ. ಅವರು ಏನು ತಪ್ಪು ಮಾಡಿದರು?” ಎಂದು ಕೇಳಿದಾಗ ಕಾನ್ಸ್ ಟೇಬಲ್ ಹೇಳುತ್ತಾರೆ” ನಿನ್ನ ಮಾವ ದಿನದಿನ ಕೋಟಾನೋಟು ತಯಾರಿಸಿ ರಾಜಕಾರಣಿಗೆ ಕೊಡುತ್ತಿದ್ದರು.ಆ ಕೇಸ್ ನ ಮೇಲೆ ಅವರನ್ನು ಜೈಲಿಗೆ ಹಾಕಿದ್ದೀವಿ.

ಆಮೇಲೆ ಇವತ್ತು ನಿನ್ನನ್ನು ಡಿಸ್ಚಾರ್ಜ್ ಮಾಡುತ್ತಾರೆ. ನಿನಗೆ ಐದು ಸಾವಿರ ಹಣ ಕೊಡುತ್ತಾರೆ. ನಿನ್ನು ಎಲ್ಲಿಗೆ ಬೇಕಾದರೂ ಹೋಗು” ಎಂದು ಹೇಳಿ ಹಣ ಕೊಟ್ಟು ಹೋದರು. ನಂತರ ಚೆನ್ನೈ ರೈಲ್ವೆ ನಿಲ್ದಾಣಕ್ಕೆ ಅನಂತ್ ಬಂದುನು .ಚೆನ್ನೈ ಟು ಮೈಸೂರು ರೈಲ್ವೆಗೆ ಹತ್ತಿ ಬೆಳಗ್ಗೆ ಮೈಸೂರಿಗೆ ತಲುಪಿದನು. ನಂತರ ಒಂದು ಕೆಲಸ ಹುಡುಕುತ್ತಿದ್ದ. ಒಂದು ದಿನ ಗೋಡೆಯ ಮೇಲೆ ಒಂದು ಭಿತ್ತಿಪತ್ರ ಹಾಕಿದ್ದರು. ಅದರಲ್ಲಿ ಹಾಯ್ ಮೈಸೂರು ದಿನಪತ್ರಿಕೆಯಲ್ಲಿ ಎಡಿಟರ್ ಕೆಲಸಕ್ಕಾಗಿ ಬೇಕಾಗಿದ್ದಾರೆ ಎಂದು ಹಾಕಿದ್ದರು. ನಂತರ ಅನಂತ್ ಹೋಟೆನಲ್ಲಿ ತಿಂಡಿ ತಿಂದುಕೊಂಡು ಹೊಸ ಬಟ್ಟೆ ತೆಗೆದುಕೊಂಡು ಕೆಲಸಕ್ಕೆ ಹೋದನು. ನಂತರ ಹಾಯ್ ಮೈಸೂರು ದಿನಪತ್ರಿಕೆ ಅನಂತ್ ಗೆ ಕನ್ನಡದಲ್ಲಿ ಪ್ರಶ್ನೆ ಕೇಳಿದರು. ಆ ಪ್ರಶ್ನೆಗಳಿಗೆ ಅನಂತ್ ಸರಿಯಾದ ಉತ್ತರ ಕೊಟ್ಟು ಆ ದಿನದಿಂದ ಹಾಯ್ ಮೈಸೂರು ದಿನಪತ್ರಿಕೆಯಲ್ಲಿ ಎಡಿಟರ್ ಆಗುತ್ತಾನೆ.

ಉಳಿಯುವುದಕ್ಕೆ ಮನೆ ಅವರೇ ಕೊಡುತ್ತಾರೆ .ತಿಂಗಳು ಕಳೆದು ಬಂದಂತೆ ಅನಂತ್ ಸ್ವಂತ ಮನೆ ಕಟ್ಟುತ್ತಾನೆ .ನಂತರ ಅನಂತ್ ತನ್ನ ತಂದೆ ತಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಮೂರು ತಿಂಗಳ ನಂತರ ಒಂದು ಹುಡುಗಿಯನ್ನು ಪ್ರೀತಿಸಿ ತಂದೆ-ತಾಯಿಯ ಒಪ್ಪಿಗೆ ತೆಗೆದುಕೊಂಡು ಮದುವೆಯಾಗುತ್ತಾನೆ. ವರ್ಷ ಕಳೆದು ಬಂದಂತೆ ಹಾಯ್ ಮೈಸೂರು ದಿನಪತ್ರಿಕೆ ನಂಬರ್ ಒನ್ ಆಗುತ್ತದೆ. ಅನಂತ್ ಕೂಡ ಸಂಪಾದಕ ನಾಗುತ್ತಾನೆ .ಆದರೆ ಒಂದು ದಿನ ಅನಂತನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ. ಆದರೆ ಅವನು ಕುಗ್ಗಲಿಲ್ಲ ತನ್ನದೇ ಆದ ಹೊಸ ದಿನಪತ್ರಿಕೆಯನ್ನು ಶುರು ಮಾಡುತ್ತಾನೆ. ಆ ದಿನಪತ್ರಿಕೆ ಹೆಸರು ಮುಂಜಾನೆ ವೇಳೆಯಲ್ಲಿ ಎಂಬುದು ಅವನ ದಿನಪತ್ರಿಕೆ ಹೆಸರು.

ದಿನಕಳೆದಂತೆ ಮುಂಜಾನೆ ವೇಳೆಯಲ್ಲಿ ದಿನಪತ್ರಿಕೆ 2 ಸ್ಥಾನ ಪಡೆಯಿತು. ಇನ್ನು ತುಂಬಾ ಸುದ್ದಿಯನ್ನು ತೆಗೆದುಕೊಂಡು ತನ್ನ ದಿನಪತ್ರಿಕೆ ಕೊಡುತ್ತಿದ್ದನು. ಮುಂಜಾನೆ ವೇಳೆಯಲ್ಲಿ ದಿನಪತ್ರಿಕೆ ಜನರಿಗೆ ತುಂಬಾ ಮೆಚ್ಚುಗೆ ಪಡೆದು ನಂಬರ್ ವನ್ ಸ್ಥಾನ ಪಡೆಯುತ್ತದೆ. ನಂಬರ್ ಸ್ಥಾನದಿಂದ ಮುಂಜಾನೆ ವೇಳೆಯಲ್ಲಿ ದಿನಪತ್ರಿಕೆಗೆ ತುಂಬಾ ಪ್ರಶಸ್ತಿಗಳು ದೊರೆಯುತ್ತದೆ ಹಾಗೂ ಆ ದಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೂಡ ಹಣ ಹೆಚ್ಚು ಮಾಡುತ್ತಿದ್ದನು .ಒಂದು ದಿನ ಅನಂತ್ ರಾತ್ರಿವೇಳೆ ಒಂದು ಅಂಗಡಿಯ ಮುಂದೆ ಹೂ ತೆಗೆದುಕೊಳ್ಳುತ್ತಿದ್ದನು. ಅಲ್ಲಿ ಒಂದು ಸಂದಿಯಿಂದ ನಾಟಕ ಸದ್ದು ಕೇಳುತ್ತದೆ. ಅವನು ಆ ಸಂದಿಂದ ಮೆಲ್ಲನೆ ನೋಡುತ್ತಿದ್ದನು ‌.ಅಲ್ಲಿ ಇದ್ದಿದ್ದು ಮಂಗಳಮುಖಿಯರು. ಅನಂತ್ ಅವರನ್ನು ನೋಡಿ ತುಂಬಾ ಆಚರಿಗೊಳ್ಳುತ್ತಾನೆ. ಎರಡು ದಿನಗಳ ನಂತರ ಅನಂತ್ ಮಂಗಳಮುಖಿಯರನ್ನು ಹಿಂಬಾಲಿಸುತ್ತಾನೆ.

ಅವರೆಲ್ಲರೂ ಸುಲಭವಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು .ಅದನ್ನು ನೋಡಿದ ಅನಂತ್ ಖುಷಿಪಟ್ಟನ್ನು. ಅನಂತ್ ಗೆ ಅವರ ಜೋತೆ ಮಾತಾಡಬೇಕು ಹಾಗೂ ಅವರ ಕಷ್ಟ ಕೇಳಬೇಕು ಎಂದುಕೊಂಡಿದ್ದನ್ನು. ಆ ದಿನ ಅಷ್ಟು ದೂರ ಇರಲಿಲ್ಲ. ಒಂದು ದಿನ ಮಂಗಳಮುಖಿಯರು ಅನಂತ್ ಗೆ ಹಣ ಕೇಳಲು ಬರುತ್ತಾರೆ. ಆಗ ಅನಂತ್ ಹಣ ಕೊಡುವುದಿಲ್ಲ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ‌. ನಂತರ ಎಲ್ಲರೂ ಅನಂತ್ ಮನೆಗೆ ಬರುತ್ತಾರೆ. ಆಗ ಅನಂತ್ ಒಬ್ಬರಿಗೆ ಕೇಳುತ್ತಾನೆ “ನೀವು ಯಾಕೆ ದುಡಿಯ ಬಾರದು. ಒಳ್ಳೆಯ ವಿದ್ಯಾಭ್ಯಾಸ ಮಾಡಿದ್ದೀರಿ .ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುತ್ತೀರಾ” ಎಂದು ಹೇಳಿದನು. ಅವರು ಹೇಳುತ್ತಾರೆ “ನಾವು ಮಂಗಳಮುಖಿ ಯಾರು ನಮಗೆ ಕೆಲಸ ಎಲ್ಲಿ ಕೊಡುತ್ತಾರೆ. ಈ ಸಮಾಜ ನಮ್ಮನ್ನು ದೂರ ಇಟ್ಟಿರುತ್ತಾರೆ “ಎಂದು ಹೇಳಿದರು . ಅನಂತ್ ಎಲ್ಲರಿಗೂ ಕೇಳುತ್ತಾನೆ “ನಿಮಗೆ ನಾಟಕ ಮಾಡಲು ಬರುತ್ತದೆಯೇ” ಎಂದು ಕೇಳಿದಾಗ ಎಲ್ಲರೂ ಹೇಳುತ್ತಾರೆ “ನಮಗೆ ನಾಟಕ ಮಾಡಲು ಬರುತ್ತದೆ ಸರ್.ನಾವು ನಾಟಕವನ್ನು ಲೀಲಾಜಾಲವಾಗಿ ಅಭಿನಯಿಸುತ್ತೇವೆ ಸರ್” ಎಂದು ಹೇಳಿದರು .ಅನಂತ್ ಗೆ ತುಂಬಾ ಖುಷಿಯಾಗಿ ಹೇಳುತ್ತಾನೆ “ನೋಡಿ ಅಕ್ಕ ಮುಂದಿನ ತಿಂಗಳು ರಾಜ್ಯಮಟ್ಟದಲ್ಲಿ ನಾಟಕ ಸ್ಪರ್ಧೆ ಇದೆ .

ಅದರಲ್ಲಿ ಭಾಗವಹಿಸಿ ಗೆದ್ದರೆ ನಾನು ನಿಮಗೆ ನನ್ನ ದಿನಪತ್ರಿಕೆಯಲ್ಲಿ ಕೆಲಸ ಕೊಡಿಸುತ್ತೇನೆ ಇದು ನನ್ನ ಶಪಥ “ಎಂದು ಹೇಳಿದನು. ನಂತರ ಅನಂತ್ ಬರೆದ ಒಂದು ನಾಟಕವನ್ನು ಅವರಿಗೆ ಕೊಟ್ಟು ನಾಟಕ ಅಭಿನಯ ಮಾಡಲು ಹೇಳಿಕೊಡುತ್ತಾನೆ. ಎಲ್ಲರೂ ಚೆನ್ನಾಗಿ ಅಭಿನಯ ಮಾಡುತ್ತಾರೆ. ನಂತರ ಸ್ಪರ್ಧೆಗೆ ಅರ್ಜಿ ಹಾಕಿದರು. ಎರಡು ವಾರಗಳ ನಂತರ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ನಡೆಯಿತು. ಎಲ್ಲಾ ತೀರ್ಪುಗಾರರು ಹಾಗೂ ಜನಗಳು ಕುಳಿತಿದ್ದರು. ಅನಂತ್ ಮಂಗಳಮುಖಿಯರನ್ನು ಕರೆದುಕೊಂಡು ಬಂದು ವೇದಿಕೆ ಮೇಲೆ ನಾಟಕ ಮಾಡಲು ಹೇಳಿದನು .ಎಲ್ಲರಿಗೂ ಆಶ್ಚರ್ಯವಾಯಿತು .ನಂತರ ಮಂಗಳಮುಖಿಯವರು ನಾಟಕವನ್ನು ಸುಸೂತ್ರವಾಗಿ ಮುಗಿಸಿದರು. ನಂತರ ತೀರ್ಪುಗಾರರು ಯೋಚಿಸಿ ಮಂಗಳಮುಖಿಯರಿಗೆ ಬಹುಮಾನ ಕೊಟ್ಟು ಸನ್ಮಾನಿಸಿದರು. ನಂತರ ಅನಂತ್ ಎಲ್ಲಾ ಮಂಗಳಮುಖಿಯರನ್ನು ಎಲ್ಲರಿಗೂ ಪರಿಚಯ ಮಾಡಿಸಿ ಹಾಗೂ ಅನಂತ್ ತನ್ನ ದಿನಪತ್ರಿಕೆಯಲ್ಲಿ ಅವರಿಗೆ ಕೆಲಸ ಕೊಟ್ಟನು. ನಂತರ ಆತನಿಗೆ ತನ್ನ ನಾಟಕಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಹಾಗೂ ಅನಂತ ಎಲ್ಲರ ಮನಸ್ಸಿನಲ್ಲಿಯೂ ಅನಂತವಾಗಿ ಉಳಿದನು.

LEAVE A REPLY

Please enter your comment!
Please enter your name here