- ವಾಸದ ಮನೆಗಳು ಜನನಿಬಿಡ ಪ್ರದೇಶಗಳ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳು ಮತ್ತು ಪೊದೆಗಳನ್ನು ತೆರವುಗೊಳಿಸುಹುದು.
- ಕಾಡಾನೆಗಳು ಕಂಡುಬಂದಲ್ಲಿ 24X7 ಕರ್ತವ್ಯ ನಿರ್ವಹಿಸುವಂತಹ ಗಳ ಸಹಾಯವಾಣಿ ಗೆ (8762824594, 8296096323) ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿಯನ್ನು ನೀಡುವುದು.
- ಕಾಡಾನೆಗಳನ್ನು ಓಡಿಸುವ ಬರುವ ಅರಣ್ಯ ಇಲಾಖೆಯ ಸಿಬ್ಬಂದಿಗಳ, ಅರಣ್ಯ ಕ್ಷಿಪ್ರ ಕಾರ್ಯಪಡೆ ಸದಸ್ಯರುಗಳೊಂದಿಗೆ ಶಾಂತಿಯುತವಾಗಿ ಹಾಗೂ ಸಂಯಮದಿಂದ ವರ್ತಿಸಿ, ಸಿಬ್ಬಂದಿಗಳಿಗೆ ಕಾಡಾನೆಗಳನ್ನು ಓಡಿಸುವ ಸಂಪೂರ್ಣ ಸಹಕಾರವನ್ನು ನೀಡುವುದು.
- ಹಗಲಿನ ವೇಳೆಯಲ್ಲಿ ಸಾರ್ವಜನಿಕರಿಗೆ ಸ್ವಯಂಪ್ರೇರಿತವಾಗಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮಾಡಬಾರದು, ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಸಿಬ್ಬಂದಿಗಳ ಜೊತೆ ತೆರಳುವುದು, ಕಾಫಿ ಗಿಡಗಳ ಮೇಲೆ ನಿಂತು ನೋಡುವುದು, ಗದ್ದಲ ಮಾಡುವುದು ಕುತೂಹಲಕ್ಕಾಗಿ ಕಲ್ಲುಗಳನ್ನು ಎಸೆಯುವುದನ್ನು ಮಾಡಬಹುದು.
- ಆಕಸ್ಮಿಕವಾಗಿ ಕಾಡಾನೆಗಳು ಕಂಡುಬಂದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಿ ಕಾಡಾನೆಗಳ ಚಲನವಲನಗಳನ್ನು ಗಮನಿಸುವುದು. ಹಾಗೂ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡುವುದು.
- ಮುಂಜಾನೆ ಸಂಪೂರ್ಣವಾಗಿ ಬೆಳಕು ಬಂದ ನಂತರ ಹೊಲಗದ್ದೆ ಮತ್ತು ತೋಟಗಳಿಗೆ ಕೆಲಸಕ್ಕೆ ಹೋಗುವುದು ಹಾಗೂ ಸಂಜೆ ಸೂರ್ಯಾಸ್ತದ ನಂತರ ಕೆಲಸಕ್ಕೆ ಹೊಲ, ಗದ್ದೆ ಹಾಗೂ ಕಾಫಿ ತೋಟಗಳಿಗೆ ಹೋಗದಿರುವುದು.
- ಕಾಡಾನೆಗಳು ತೋಟಗಳಲ್ಲಿ ನಿಂತಿರುವ ಸಮಯದಲ್ಲಿ ಹಾಗೂ ರಸ್ತೆ ದಾಟುವ ಸಂದರ್ಭದಲ್ಲಿ ಕಲ್ಲುಗಳನ್ನು ಎಸೆಯುವುದು, ಪಟಾಕಿಗಳನ್ನು ಸಿಡಿಸುವುದು ಹಾಗೂ ಇತ್ಯಾದಿಗಳನ್ನು ಮಾಡದೆ ನಿಶ್ಯಬ್ದ ವಾಗಿದ್ದು ಕಾಡಾನೆಗಳು ಸ್ಥಳದಿಂದ ತೆರಳುವವರೆಗೂ ಸಂಯಮದಿಂದ ವರ್ತಿಸಿ ನಂತರ ತೆರಳುವುದು.
- ಆನೆಗಳಿಗೆ ಅತ್ಯಂತ ಪ್ರಿಯವಾದ ಆಹಾರದ ಬೆಳೆಗಳಾದ ಬಾಳೆ, ಕಬ್ಬು, ಜೋಳ ಮತ್ತು ಇತರೆ ಬೆಳೆಗಳನ್ನು ಮನೆ, ಶಾಲೆ,ದೇವಸ್ಥಾನ ಮತ್ತು ಇತರೆ ಜನನಿಬಿಡ ಪ್ರದೇಶಗಳಿಂದ ನಿರ್ಮೂಲನೆ ಮಾಡುವುದು.
- ತೋಟಗಳಿಗೆ/ಹೊಲಗದ್ದೆಗಳಿಗೆ ಕೆಲಸಕ್ಕೆ ತೆರಳುವ ಮುನ್ನ ಮತ್ತು ಕೂಲಿಕಾರರನ್ನು ಕೆಲಸಕ್ಕೆ ಬಿಡುವ ಮೊದಲು ಸಂಪೂರ್ಣವಾಗಿ ಸ್ಥಳವನ್ನು ಪರಿಶೀಲಿಸಿ ತೋಟದಲ್ಲಿ ಕಾಡಾನೆಗಳು ಇಲ್ಲದಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಕೆಲಸಕ್ಕೆ ತೆರಳುವುದು.
- ಸಂಜೆಯ ವೇಳೆಯಲ್ಲಿ ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿರುವ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಒಬ್ಬಂಟಿಯಾಗಿ ತೆರಳದೆ, ಗುಂಪುಗಳಲ್ಲಿ ತೆರಳುವುದು.