ಕೋವಿಡ್ ರೂಪಾಂತರ ಗೊಂಡಿರುವ ಸೋಂಕಿನ ಬಗ್ಗೆ ಎಚ್ಚರವಹಿಸಿ ವಿಜಯ್ ಭಾಸ್ಕರ್

0

ಕೋವಿಡ್ 19 ಮುಂದುವರೆದಿರುವುದರಿಂದ ಹಾಗೂ ಎರಡನೇ ಅಲೆಯ ಎಚ್ಚರಿಕೆ ಮತ್ತು ರೂಪಾಂತರ ವೈರಸ್ ಹರಡುವ ಭೀತಿ ಇರುವುದರಿಂದ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಮುಜಂಗ್ರತೆ ವಹಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಎಲ್ಲಾ ಜಿಲ್ಲೆಗಳಲ್ಲಿ ಸೂಚನೆ ನೀಡಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು,ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವ್ಯದ್ಯಕಿಯ ಕಾಲೇಜು ಮುಖ್ಯಸ್ಥ ರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಈ ಹಿಂದಿನಂತೆ ಹೆಚ್ಚಿಸಿ ಜಾಗ್ರತೆ ವಹಿಸಲು ತಿಳಿಸಿದರು

ಆರ್.ಟಿ.ಪಿ.ಸಿ.ಆರ್. ಟೆಸ್ಟಗಳು ಮತ್ತು ಸೋಂಕಿತರ ಸಂಪರ್ಕಿತರ ಗುರುತಿಸುವಿಕೆ ಕಾರ್ಯ ಹೆಚ್ಚಬೇಕು ಸೋಂಕಿತರನ್ನು ಹೋಂ ಐಸೋಲೇಶನ್ ಮಾಡಬೇಕು ಆಸ್ಪತ್ರೆಗಳಲ್ಲಿ ಇರುವವರಿಗೆ ಉತ್ತಮ ಚಿಕಿತ್ಶೆ ನೀಡಿ ನಿರಂತರ ನಿಗಾ ವಹಿಸಬೇಕು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ವಿಜಯಭಾಸ್ಕರ್ ಅವರು ತಿಳಿಸಬೇಕು.
ಡಿ 2 ನಂತರ ಲಂಡನ್ ನಿಂದ ಬಂದಿರುವವರ ಪಟ್ಟಿಗಳನ್ನು ಜಿಲ್ಲೆಗಳಿಗೆ ಕಳಿಸಲಾಗಿದೆ ಎಲ್ಲರನ್ನೂ ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು ವರದಿ ಬರುವವರೆಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಬೇಕು ವರದಿಗಳನ್ನು ಬೆಂಗಳೂರಿನ ನಿಮಾನ್ಸ್ ಇಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿಕೊಡಬೇಕು ಒಂದು ವೇಳೆ ನೆಗೆಟಿವ್ ಬಂದರೆ 14 ದಿನ ಹೊಂ ಐಸೋಲೇಷನ್‍ನಲ್ಲಿ ಇರಿಸಬೇಕು ಆಸ್ಪತ್ರೆಯಲ್ಲಿ ಇತರ ಇತರ ಕೋವಿಡ್ ಸೋಂಕಿತರಿಂದ ಪ್ರತ್ಯೇಕವಾಗಿರಬೇಕು ಎಲ್ಲರ ಸಂಪರ್ಕಿತರನ್ನು ಪತ್ತೆಹಚ್ಚಿ ಸಾಂಸ್ಥಿಕ ಕ್ವಾರಂಟೈನ್ ಮಾಡಿ ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದರು
ಇದೇ ವೇಳೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಡಿ.2ರಿಂದ ಜಿಲ್ಲೆಗೆ ಲಂಡಲ್ ನಿಂದ ಆಗಮಿಸಿದ 16 ಮಂದಿ ಪಟ್ಟಿ ನೀಡಲಾಗಿದೆ ಅವರನ್ನು 15 ಮಂದಿಯನ್ನು ಪತ್ತೆಮಾಡಿ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತದೆ ಎಂದರು ಮತ್ತೊಂಬ್ಬರು ಲಂಡನ್ ಗೆ ವಾಪಸ್ ತೆರಳಿದ್ದಾರೆ ಎಂದರು
ರಾಜ್ಯದ್ಯಾಂತ ಜನವರಿ 2 ರವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿದೆ ರಾತ್ರಿ 11ಗಂಟೆ ನಂತರ ಜನ ಸಂದಣಿ ಸೇರಿ ಹಬ್ಬ, ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಅವಕಾಶ ಇರುವುದಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಗಳಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಎಲ್ಲಾ ಕೋವಿಡ್ ಸೋಂಕಿತರ ಮನೆಗಳಿಗೆ ವೈದ್ಯರು ತೆರಳಿ ತಪಾಸಣೆ ಆರೋಗ್ಯ ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು

ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾಫಿದ್ ಅಖ್ತರ್ ರವರು ಮಾತನಾಡಿ ತಜ್ಞರ ವರದಿ ಪ್ರಕಾರ ಹೊಸದಾಗಿ ರೂಪಾಂತರಗೊಂಡಿರುವ ಕೊವೀಡ್ ವೈರಸ್ ಪ್ರಾಣಕ್ಕೆ ಹೆಚ್ಚಿನ ಅಪಾಯಕಾರಿಯೆನಲ್ಲ ಆದರೆ ಹರಡುವಿಕೆ ಪ್ರಮಾಣ ಅಧಿಕವಾಗಿರುವುದರಿಂದ ಮೊದಲ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದಾಗಿ ಸೂಕ್ತ ಎಂದರು
ದೇಶದ ಬೇರೆಬೇರೆ ವಿಮಾನ ನಿಲ್ದಾಣಗಳ ಮೂಲಕ ಇಂಗ್ಲೆಂಡ್‍ನಿಂದ ರಾಜ್ಯಕ್ಕೆ ಆಗಮಿಸಿದವರ ಪಟ್ಟಿಯನ್ನು ಪತ್ತೆ ಮಾಡಿ. ಜಿಲ್ಲೆಗಳಿಗೆ ಇನ್ನಷ್ಟು ವಿವರ ಒದಗಿಸುವುದರು ಮೊದಲ ಆದ್ಯತೆಯನ್ನು ಅವರನ್ನು ಗುರುತಿಸಿ ಆಸ್ಪತ್ರೆಯಲ್ಲಿರಿಸಿ ತಪಾಸಣೆಗೊಳಪಡಿಸಿ ಎಂದು ಅವರು ಹೇಳಿದರು.
ವಿಡಿಯೋಂ ಸಂವಾದದಲ್ಲಿ ಆರೋಗ್ಯ ಇಲಾಖೆ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಧಿಕಾರಿ ಡಿ. ಬಾರತಿ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್ ನಂದಿನಿ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಹಾಗೂ ಮತ್ತಿತರರ ಅಧಿಕಾರಿಳು ಹಾಜರಿದ್ದರು.

LEAVE A REPLY

Please enter your comment!
Please enter your name here