ನೀವು ಸದಾ ಸುಖವಾಗಿ, ಪ್ರಶಾಂತವಾಗಿ ಇರಬೇಕೇ?

0

ನಿಮ್ಮ ಗಡಿಬಿಡಿ ಜೀವನ ಶೈಲಿಯಲ್ಲಿ ವಿಶ್ರಾಂತಿ, ನೆಮ್ಮದಿ ಅನ್ನುವುದು ಬಹಳ ಕಡಿಮೆ ಇದ್ದರೆ.ಇಲ್ಲಿದೆ ನಿಮಗೆ ಉಪಾಯ.ಇದು ನಮಗೆ ತಿಳಿದಿದ್ದರೂ ಮಾಡಲು ಸೋಂಬೇರಿತನ. ಯಾವುದು ಈ ಉಪಾಯ? “ಧ್ಯಾನ” ಇದನ್ನು ಓದುತ್ತಿರುವ ಜನರಲ್ಲಿ ಒಂದು ೩೦% ಜನ ಧ್ಯಾನವನ್ನು ಅಳವಡಿಸಿಕೊಂಡಿರಬಹುದು ಇನ್ನು ೭೦% ಜನ ಇದರ ಬಗ್ಗೆ ತಿಳಿದರೂ ಅಭ್ಯಾಸವನ್ನು ಅಳವಡಿಸಿಕೊಂಡಿರುವುದಿಲ್ಲ.

ಧ್ಯಾನದಿಂದ ಆಗುವ ಪ್ರಯೋಜನಗಳು ಹಲವಾರು,
ನಮ್ಮ ಮನಸ್ಸು ನಿರಾಳವಾಗುತ್ತದೆ, ನಿಮ್ಮ ಯೋಚನೆಗಳು ಧನಾತ್ಮಕವಾಗಿದೆ,ನಿಮ್ಮ ಮನಸ್ಸು ಯಾವಾಗಲೂ ಪ್ರಶಾಂತವಾಗಿರುತ್ತದೆ.ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗುತ್ತದೆ.ನಮ್ಮ ತಿಳಿವಳಿಕೆಯ ಶಕ್ತಿ ಸುಧಾರಿಸುತ್ತದೆ ಹೀಗೆ ಇದರಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ.

• ಧ್ಯಾನ ಮಾಡುವುದರಿಂದ ನಿಮ್ಮ ಒತ್ತಡಗಳು ನಿವಾರಣೆಯಾಗುತ್ತದೆ.ಇದರಿಂದ ನಿಮ್ಮ ದೇಹ ಕೂಡ ಹಗುರವಾಗುತ್ತದೆ.ಧ್ಯಾನವನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ನಿಮ್ಮ ಶ್ವಾಸ ಕೋಶ ಕೂಡ ಸುಧಾರಿಸುತ್ತದೆ.
• ಧ್ಯಾನ ನಿಮ್ಮನ್ನು ಸಾಧಕರಾಗಿ ಮಾಡುತ್ತದೆ.ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ, ದೇಹದ ಮೇಲೆ ನಿಯಂತ್ರಣ ಸಿಗುತ್ತದೆ ಇದರಿಂದ ನೀವು ಯಾವುದೇ ಕೆಟ್ಟ ಆಲೋಚನೆಗಳಿಗೆ ಗುರಿಯಾಗುವುದಿಲ್ಲ ಹಾಗಾಗಿ ನೀವು ಸದಾ ಒಳ್ಳೆಯ ಆಲೋಚನೆಗಳನ್ನು ಸ್ವಾಗತಿಸುತ್ತಾ ನಿಮ್ಮ ಕೆಲಸವನ್ನು ನೆರವೇರಿಸಬಹುದು.
• ಧ್ಯಾನದಿಂದ ಉಸಿರಾಟ ತೊಂದರೆಗಳು ನಿವಾರಣೆಯಾಗುತ್ತದೆ. ವಯಸ್ಸಾದವರು ತಮ್ಮ ಉಸಿರಾಟ ಸಮಸ್ಯೆಗಳಿಂದ ಪಾರಾಗಬಹುದು.ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ ಎಕೆಂದರೆ ನೀವು ಧ್ಯಾನ ಮಾಡುವಾಗ ಹೆಚ್ಚು ಆಮ್ಲಜನಕವನ್ನು ಪಡೆಯುತ್ತೀರಿ.

ಧ್ಯಾನವನ್ನು ಮಾಡಲು ಹಲವಾರು ರೀತಿಗಳಿವೆ ನೀವು ನಿಮಗೆ ಇಷ್ಟವಾದ ರೀತಿಯನ್ನು ಅಭ್ಯಾಸ ಮಾಡಿಕೊಳ್ಳಬಹುದು.ಯೂಟ್ಯೂಬ್ ನಲ್ಲಿ ಧ್ಯಾನವನ್ನು ಮಾಡುವ ಹಲವಾರು ರೀತಿಯನ್ನು ನೀವು ನೋಡಿ ಅಳವಡಿಸಿಕೊಳ್ಳಬಹುದು.ದಿನಕ್ಕೆ ಕನಿಷ್ಠ ೧೦-೨೦ ನಿಮಿಷ ಧ್ಯಾನ ಮಾಡಿದರೆ ನಿಮ್ಮ ಜೀವನ ಬಹಳ ಸುಖವಾಗಿರುತ್ತದೆ.

-ತನ್ವಿ .ಬಿ

LEAVE A REPLY

Please enter your comment!
Please enter your name here