ನೈಸರ್ಗಿಕವಾಗಿ ಕಾಂತಿಯುಕ್ತವಾದ ತ್ವಚೆಯನ್ನು ಸುಲಭವಾಗಿ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ.

0

ತಮ್ಮ ಮುಖದ ತ್ವಚೆಗೆ ಹೆಚ್ಚು ಕಾಳಜಿ ಮಾಡುವುದು ಹೆಣ್ಣುಮಕ್ಕಳು. ಇದನ್ನು ಓದುತ್ತಿರುವ ಹೆಂಗಸರು ನಿಮ್ಮ ಮುಖಕ್ಕೆ ಹಲವಾರು ಫೇಸ್ ಮಾಸ್ಕ್ ಗಳನ್ನು ಹಚ್ಚುತ್ತೀರ ಆದರೆ ಶ್ರೀಗಂಧದ ಫೇಸ್ ಮಸ್ಕ್ ಉಪಯೋಗಗಳು ನಿಮಗೆ ತಿಳಿದಿದ್ದೀಯಾ?

ನೈಸರ್ಗಿಕ ವಿಧಾನದಲ್ಲಿ ನಮ್ಮ ಮುಖದ ತ್ವಚೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ದೊರೆಯುವ ಸೌಂದರ್ಯ ಉತ್ಪನಗಳನ್ನು ಬಳಸುವುದರಿಂದ ನಮ್ಮ ಚರ್ಮಕ್ಕೆ ಹಾನಿ ಉಂಟಾಗಬಹುದು ಹಾಗಾಗಿ ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು ಫೇಸ್ ಮಾಸ್ಕ್ ಗಳನ್ನು ಬಳಸುವುದು ಉತ್ತಮ.

ಶ್ರೀಗಂಧದಿಂದ ಎಷ್ಟೋ ರೀತಿಯ ಫೇಸ್ ಮಾಸ್ಕ್ ಗಳನ್ನು ತಯಾರಿಸಬಹುದು.
೧)ಶ್ರೀಗಂಧದ ಎಣ್ಣೆಯೊಂದಿಗೆ ಅರ್ಧಾ ಟೇಬಲ್ಸ್ಪೂನ್ ಅರಿಶಿಣ ಕರ್ಪೂರದ ಜೊತೆಗೆ ಗಂಧದ ಪುಡಿಯನ್ನು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಬೇಕು.
೨) 2 ಚಮಚ ಶ್ರೀಗಂಧದ ಪುಡಿಗೆ ರೋಜ್ ವಾಟರ್ ಅನ್ನು ಬೆಳೆಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಬಹುದು.
೩) 3 ಟೇಬಲ್ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚ ಬಾದಾಮಿ ಎಣ್ಣೆ ಮತ್ತು ತೆಂಗಿನಕಾಯನ್ನು ಬೆರೆಸಿಕೊಂಡು ಗಟ್ಟಿಯಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಬಹುದು.
ಈ ಮೇಲಿನ ಫೇಸ್ ಪ್ಯಾಕ್ ಗಳಲ್ಲಿ ನಿಮಗೆ ಸುಲಭವಾಗುವ ಫೇಸ್ ಮಾಸ್ಕ್ ಅನ್ನು ತಯಾರಿಸಿಕೊಂಡು ನಿಮ್ಮ ಮುಖವನ್ನು ಹೆಚ್ಚು ಕಾಂತಿಯುಕ್ತವಾಗಿ ಮಾಡಿಕೊಳ್ಳಿ.

ಶ್ರೀಗಂಧದ ಫೇಸ್ ಮಾಸ್ಕ್ ಬಳಸುವುದರಿಂದ ಆಗುವ ಉಪಯೋಗಗಳು:

• ಮೊಡವೆಗಳ ಸಮಸ್ಯೆಯಿಂದ ಪಾರಾಗಬಹುದು.
• ಕಲೆಗಳು ಮತ್ತು ಪಿಗ್ಮೆಂಟೇಶನ್ ನಿಮ್ಮ ಚರ್ಮಕ್ಕೆ ಬಹಳ ತೊಂದರೆ ನೀಡುತ್ತಿದ್ದಾರೆ ಶ್ರೀಗಂಧದ ಫೇಸ್ ಮಾಸ್ಕ್ ಬಳಕೆಯಿಂದ ಇದು ಬಹಳ ಸಲೀಸಾಗಿ ತೊಲಗುತ್ತದೆ.
• ಕಪ್ಪು ತಲೆಗಳು ಹಲವಾರು ಹೆಣ್ಣುಮಕ್ಕಳ ಸಮಸ್ಯೆ. ನೈಸರ್ಗಿಕವಾಗಿ ಅದನ್ನು ವೇಗವಾಗಿ ತೊಲಗಿಸಬೇಕು ಎಂದರೆ ಶ್ರೀಗಂಧದ ಫೇಸ್ ಮಾಸ್ಕ್ ಬಳಸಲೇಬೇಕು.
• ಕಾಂತಿಯುಕ್ತವಾದ ಹೊಳೆಯುವ ತ್ವಚೆಯನ್ನು ನೀವು ಪಡೆಯಬಹುದು.

ಹೀಗೆ ವಾರಕ್ಕೆ ಎರಡು ಮೂರು ಬಾರಿ ಶ್ರೀಗಂಧದ ಫೇಸ್ ಮಾಸ್ಕ್ ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಿ.
ಈ ಮಾಸ್ಕ್ ಬಳಸಿದ ನಂತರ ನೀವು ಕಂಡ ಬದಲಾವಣೆಗಳನ್ನು ಕಮೆಂಟ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ.

ಬರಹ- ತನ್ವಿ. ಬಿ

LEAVE A REPLY

Please enter your comment!
Please enter your name here