ಯಾವ ತರಕಾರಿಗಿಂತಲೂ ಅವರೆಕಾಳು ಕಮ್ಮಿಯಿಲ್ಲ. ಇದರ ಉಪಯೋಗಗಳು ತಿಳಿದಿದ್ದೀರಾ?

0

ಅಡುಗೆಗೆ ಅವರೆಕಾಳು ಬಿದ್ದರೆ ಅದರ ರುಚಿಯೇ ಬದಲಾಗುತ್ತದೆ. ಇದು ಬಹಳ ರುಚಿಕರವಾದ ಕಾಳು. ಇದನ್ನು ಭಾರತದಲ್ಲಿ ಮಾತ್ರವಲ್ಲ ಮೆಡಿಟರೇನಿಯನ್ ಪ್ರದೇಶಗಳಲ್ಲೂ ಬಳಸುತ್ತಾರೆ.


ಅವರೆಕಾಳಿನ ಉಪಯೋಗಗಳು:

• ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:
ಅವರೆಕಾಳಿನಲ್ಲಿ ಹೆಚ್ಚು ನಾರಿನಾಂಶವಿದೆ. ನಾರಿನಾಂಶ ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ನಮ್ಮ ಹೃದಯಕ್ಕೆ ಬಹಳ ಅಪಾಯಕಾರಿ ಹಾಗಾಗಿ ಅವರೇಕಾಳಿನ ಸೇವನೆ ನಮ್ಮ ಹೃದಯಕ್ಕೆ ಬಹಳ ಉಪಯೋಗಕಾರಿ.

• ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ:
ತೂಕ ಇಳಿಸಲು ನಾವು ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಪೋಷಕಾಂಶವಿರುವ ಆಹಾರವನ್ನು ಸೇವಿಸಬೇಕು. ಅವರೆಕಾಳಿನಲ್ಲಿ ಕೊಬ್ಬಿನ ಅಂಶ ಬಹಳ ಕಡಿಮೆ ಹಾಗೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚು ಹಾಗಾಗಿ ಇದು ನಮ್ಮ ತೂಕವನ್ನು ಇಳಿಸಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ.

• ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಸಹಾಯಕಾರಿ:
ಅವರೆಕಾಳಿನಲ್ಲಿರುವ ಪೋಷಕಾಂಶಗಳು ಯಾವ ತರಕಾರಿಗಿಂತಲೂ ಕಡಿಮೆ ಇಲ್ಲ. ಈ ಕಾಳಿನಲ್ಲಿ ವಿಟಮಿನ್ ಬಿ, ಕಬ್ಬಿಣಾಂಶ,ರಂಜಕ, ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳಿವೆ. ಕಬ್ಬಿಣಾಂಶ ರಕ್ತದಲ್ಲಿ ಆಮ್ಲಜನಕದ ಪರಿಚಲನೆಗೆ ಸಹಾಯಕಾರಿ. ರಂಜಕ ಮತ್ತು ಮೆಗ್ನೀಷಿಯಂ ಅಂಶ ಮೂಲೆಗಳನ್ನು ಗಟ್ಟಿಗೊಳಿಸಲು ಉಪಯೋಗಕಾರಿ. ಅವರೆಕಾಳಿನಲ್ಲಿ ಬಹಳಷ್ಟು ಪೋಷಕಾಂಶಗಳಿವೆ.

ಅವರೆಕಾಳಿನಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚು ಹಾಗಾಗಿ ಅವರೆಕಾಳನ್ನು ಸೇವಿಸಿ ಅದರ ಪ್ರಯೋಜನಗಳನ್ನು ಅನುಭವಿಸಿ.

-ತನ್ವಿ. ಬಿ.

LEAVE A REPLY

Please enter your comment!
Please enter your name here