ಪ್ರತಿಷ್ಠಿತ ಕರಾಟೆ ಶಾಲೆಯಾದ ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಶನ್ (ರಿ) ಸಂಸ್ಥೆಯು ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಕರಾಟೆ ಬೆಲ್ಟ್ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ರವಿಕಾಂತ್ ಬಿ.ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಸನ, ನಾಗರಾಜ್ ರವರು ಕಂದಾಯ ಸ್ಪೂರ್ತಿ ಮಾಸ ಪತ್ರಿಕೆಯ ಸಂಪಾದಕರು, ಆರ್ ಜಿ ಗಿರೀಶ್ ರವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ ಕಾರ್ಯದರ್ಶಿಗಳು, ಹಾಗೂ ಅನಂತ್ ಕುಮಾರ್ ಕೆ ಜೆ ಕರಾಟೆ ಸಂಸ್ಥೆಯ ಅಧ್ಯಕ್ಷರು, ಕರಾಟೆ ಮುಖ್ಯ ತರಬೇತಿದಾರರು ಹಾಜರಿದ್ದರು. ಸಿವಿಲ್ ಜಡ್ಜ್ ಆಗಿರುವ ರವಿಕಾಂತ್ ಸರ್ ರವರು ಮಕ್ಕಳಿಗೆ ಗಮರ್ನಹ ವಿಷಯಗಳನ್ನು ತಿಳಿಸಿದರು.ಆರ್ ಜಿ ಗಿರೀಶ್ ರವರು ಈ ಕರಾಟೆ ಸಂಸ್ಥೆಯು ಉಚಿತ ಕರಾಟೆ ತರಬೇತಿಗಳನ್ನು ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ನೀಡುತ್ತಿದೆ ಹಾಗೂ ಕರಾಟೆಯನ್ನು ಕಲಿಯುವುದರಿಂದ ಮಕ್ಕಳ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಸಿದರು.ಇನ್ನಿತರೆ ಗಣ್ಯರುಗಳು ಶುಭ ಹಾರೈಸಿದರು.